ಬಿ-ಟೌನ್ ಗಮನ ಸೆಳೆಯುತ್ತಿರುವ ನಿತಿ ಟೇಲರ್. ಪತಿಯೇ ನನ್ನ ಚಿಯರ್ ಲೀಡರ್ ಮತ್ತು ಸಪೋರ್ಟರ್ ಎಂದ ನಟಿ...
ಬಾಲ ನಟಿಯಾಗಿ ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮಿಂಚಿದ ನಿತಿ ಟೇಲರ್ (Niti Taylor) ಮತ್ತು ಬಿಗ್ ಬಾಸ್ (Bigg Boss) ಖ್ಯಾತಿಯ ಪ್ರತಿಕ್ (Pratik Sehajpal) ಕಾಂಬಿನೇಷನ್ ಆಲ್ಬಂ ಸಾಂಗ್ ಸಖತ್ ವೈರಲ್ ಅಗುತ್ತಿದೆ. ಎರಡು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ನಿತಿ ಯುಟ್ಯೂಬ್‌ನಲ್ಲಿ (Youtube) ಸಖತ್ ಫೇಮಸ್ ಅಗಿದ್ದಾರೆ. ಇದಕ್ಕೆ ಫ್ಯಾಮಿಲಿ ಎಷ್ಟು ಸಪೊರ್ಟ್ ಮಾಡುತ್ತೆ? ಮ್ಯಾರಿಡ್ ಲೈಫ್ ಹೇಗಿದೆ ಎಂದು ಹಂಚಿಕೊಂಡಿದ್ದಾರೆ.
'ನಮ್ಮ ನೈನಾ ಮೇರೆ (Naina Mere) ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿಕ್ ಮತ್ತು ನನ್ನ ಆನ್‌ಸ್ಕ್ರೀನ್ ಜೋಡಿಯನ್ನು ಜನರು ಒಪ್ಪಿಕೊಂಡಿದ್ದಾರೆ,' ಎಂದು ಹಾಡಿನ ಬಗ್ಗೆ ಹೇಳುತ್ತಾ ಮಾತು ಶುರು ಮಾಡಿದ್ದಾರೆ. 2020ರಲ್ಲಿ ನಿತಿ ಮತ್ತು ಆರ್ಮಿ ಆಫೀಸರ್ ಪರೀಕ್ಷಿತ್ ಬಾವಾ (Army officer Parikshit Bawa) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಲಾಕ್‌ಡೌನ್ (Lockdown) ಅವಧಿಯಾಗಿದ್ದ ಕಾರಣ ನಿತಿ ಕೂಡ ಎರಡು ವರ್ಷ ಬ್ರೇಕ್ ತೆಗೆದುಕೊಂಡು, ಕೇವಲ ಸೋಷಿಯಲ್ ಮೀಡಿಯಾ (Social Media) ಮೇಲೆ ಮಾತ್ರ ಗಮನ ನೀಡುತ್ತಿದ್ದರು. ನಾನು ಕೆಲಸ ಮಾಡುವುದಕ್ಕೆ ನನ್ನ ಪತಿಯೇ ಹೆಚ್ಚಿಗೆ ಸಪೋರ್ಟ್ ಮಾಡುವುದು ಎಂದು ಹೇಳಿಕೊಂಡಿದ್ದಾರೆ.
'ನನ್ನ ಪತಿ ನನ್ನ ಚಿಯರ್ ಲೀಡರ್ (Cheerleader). ನನ್ನ ಹಾಡು ವೈರಲ್ ಆಗಿದೆ. ಅದನ್ನು ಹೆಚ್ಚಿಗೆ ಸೆಲೆಬ್ರೇಟ್ ಮಾಡಿರುವುದು ಅವರೇ. ಈ ಹಾಡನ್ನು ಅವರ ಆರ್ಮಿ ಸ್ನೇಹಿತರ ಜೊತೆ ಕೂಡ ಹಂಚಿಕೊಂಡಿದ್ದಾರೆ. ಈಗ ಎಲ್ಲರಿಗೂ ಗೊತ್ತಿದೆ ಅವರು ನನ್ನ ಕೆಲಸಕ್ಕೆ ಎಷ್ಟು ಸಪೋರ್ಟ್ ಮಾಡುತ್ತಾರೆಂದು. ಮದುವೆ (Marriae) ಆದ ನಂತರ ಒಳ್ಳೆಯ ರೀತಿಯಲ್ಲಿ ನನ್ನ ಜೀವನ ಬದಲಾಗಿದೆ. ನನ್ನ ಅತ್ತೆ, ಮಾವ ತುಂಬಾನೇ ಬ್ಯೂಟಿಫುಲ್. ನನ್ನ ಜೊತೆ ಅವರು ಇನ್‌ಸ್ಟಾ ರೀಲ್ಸ್ (Instagram reels) ಕೂಡ ಮಾಡುತ್ತಾರೆ. ನಾವು ಏನ್ ಕೆಲಸ ಮಾಡುತ್ತಿದ್ದೀವಿ, ನಮಗೆ ಏನು ಇಷ್ಟ ಅಂತ ನಮ್ಮ ಪತಿ ಅರ್ಥ ಮಾಡಿಕೊಂಡರೆ ಅದೇ ನಮಗೆ ದೊಡ್ಡ ಸಪೋರ್ಟ್, ಅವರು ಇದೇ ಕ್ಷೇತ್ರ ಆಗಬೇಕು ಅಂತಿಲ್ಲ. ಪರೀಕ್ಷಿತ್ ಆರ್ಮಿಯಲ್ಲಿದ್ದರೂ, ನಾನು ಬೆಳೆದು ಬಂದಿರುವ ರೀತಿ ಹಾಗೂ ಜೀವನವನ್ನು ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಮೆಂಟಲ್ ಲೆವೆಲ್ (Mental Level) ಮ್ಯಾಜ್ ಆಗುತ್ತದೆ. ಇಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ನಂಬಿಕೆ ಮತ್ತು ಪ್ರೀತಿ ತಕ್ಷಣ ಹುಟ್ಟುತ್ತದೆ. ನಮಗೆ ಯಾವುದೇ ಇನ್‌ಸೆಕ್ಯೂರಿಟಿ (insecurity) ಇಲ್ಲ,' ಎಂದು ನಿತಿ ಹೇಳಿದ್ದಾರೆ.
ಅಭಿಷೇಕ್ ಬಚ್ಚನ್ ಫೋನ್ ಕದ್ದು, ಗುಟ್ಟಾಗಿ 'ಆ' ನಟಿಗೆ ಮೆಸೇಜ್ ಮಾಡಿದ Priyanka Chopra!
'ನಮಗೆ ಲಾಂಗ್ ಡಿಸ್ಟೆನ್ಸ್ (Long Distance) ಸಮಸ್ಯೆ ಆಗಿರೋದು ನಿಜ. ತುಂಬಾ ದಿನಗೇ ಕಳೆದಿತ್ತು ನಾವು ಇಷ್ಟ ದಿನ ದೂರವಿದ್ದು. ನಾನು ನಂಬಿಕೆ ಇಟ್ಟಿರುವುದು ಒಂದು ವಿಚಾರದ ಮೇಲೆ. ನಾವು ಒಬ್ಬರನ್ನು ಅರ್ಥ ಮಾಡಿಕೊಂಡು ಅವರಿಗೆ ಸಮಯ ಕೊಟ್ಟರೆ ಸಾಕು, ಎಲ್ಲಾ ಸರಿ ಹೋಗುತ್ತದೆ. ಮದುವೆಯಾದ ನಂತರ ಇದೇ ಮೊದಲು ಅವರನ್ನು ಬಿಟ್ಟು ನಾನು ಚಿತ್ರೀಕರಣಕ್ಕೆ ಹೋಗಿರುವುದು. ಮದುವೆಯಾದ ನಂತರ ಅವರೇ ಕೆಲಸಕ್ಕೆ ಹೋಗಿರುವುದು. 6 ತಿಂಗಳು ಹೋಗಿದ್ದಾರೆ, 4 ತಿಂಗಳು ಹೋಗಿದ್ದಾರೆ, ಕೆಲವೊಮ್ಮೆ 2 ತಿಂಗಳಲ್ಲಿ ಕೆಲಸ ಮುಗಿಸಿ ಬಂದಿದ್ದಾರೆ. ನಾನು ಒಬ್ಬರನ್ನೊಬ್ಬರು ತುಂಬಾನೇ ಮಿಸ್ ಮಾಡ್ಕೊಳ್ತೀವಿ. ಆದರೆ ನಂಬಿಕೆ (Trust), ಪ್ರೀತಿ (Love) ಮತ್ತು ಇಬ್ಬರನ್ನೊಬ್ಬರ ಕೆಲಸ ಅರ್ಥ ಮಾಡಿಕೊಂಡರೆ ಜೀವನ ಚೆನ್ನಾಗಿರುತ್ತದೆ,' ಎಂದು ನಿತಿ ಹೇಳಿದ್ದಾರೆ.
