ಕಿರುತೆರೆ ನಟಿ ನಿಶಾ ಅಸಂಬದ್ಧ ಫೇಸ್‌ಬುಕ್ ಪೋಸ್ಟ್ ವೈರಲ್: ಮೀಟೂ ಲಿಂಕ್ ಇದೆಯಾ?
ಮಲೆಯಾಳಂ ಧಾರಾವಾಹಿ ನಟಿ ನಿಶಾ ಸಾರಂಗ್ ಅವರ ಫೇಸ್‌ಬುಕ್ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. 'ನಿಜ ಹೇಳೋರ ಜೀವನದಿಂದ ಜನ ದೂರ ಆಗ್ತಾರೆ' ಎಂಬ ಅವರ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಏನಾಯಿತೆಂದು ಪ್ರಶ್ನಿಸುತ್ತಿದ್ದಾರೆ.

ಪ್ರತಿನಿತ್ಯ ಸಂಜೆಯಾದರೆ ಸಾಕು ಧಾರಾವಾಹಿಗಳ ಮೂಲಕ ಮನೆಯ ಮಂದಿಗೆಲ್ಲಾ ಮನರಂಜನೆ ನೀಡುವಂತಹ ನಟ-ನಟಿಯರು ಸ್ವತಃ ತಮ್ಮ ಮನೆಯ ಒಂದು ಭಾಗವೆಂದೇ ಪರಿಗಣಿಸಿದ ಹಲವು ಜನರಿದ್ದಾರೆ. ಆದರೆ, ಹೀಗೆ ನಮ್ಮ ಮನೆ ಮಗಳು ಎಂದುಕೊಂಡಿದ್ದ ಧಾರಾವಾಹಿ ನಟಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಸೀರಿಯಲ್ ನಟಿ ಹೇಳಿದ್ದೇನು ಗೊತ್ತಾ?
ಮಲೆಯಾಳಂ ಕಿರುತೆರೆ ಪ್ರೇಕ್ಷಕರ ಪ್ರೀತಿಯ ಪಾತ್ರವನ್ನು ಮಾಡುವ ನಿಶಾ ಸಾರಂಗ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಇ ಚರ್ಚೆಯ ವಿಷಯವಾಗಿದ್ದಾರೆ. ನಿಶಾ ಸಾರಂಗ್ ಅವರು ನೀಲು ಅಂತಾನೆ ಎಲ್ಲರಿಗೂ ಗೊತ್ತು. ಉಪ್ಪುಂ ಮುಳಕುಂ ಸೀರಿಯಲ್‌ನಿಂದ ನಿಶಾಗೆ ಜನಪ್ರಿಯತೆ ಸಿಕ್ಕಿದೆ. ಈಗ ಫೇಸ್‌ಬುಕ್‌ನಲ್ಲಿ ನಿಶಾ ಹಾಕಿರೋ ಪೋಸ್ಟ್‌ಗೆ ಫ್ಯಾನ್ಸ್ ಕಮೆಂಟ್ಸ್‌ಗಳ ಮಳೆ ಹರಿಸ್ತಿದ್ದಾರೆ. ಆದರೆ, ನಿಶಾ ಮಾತ್ರ ಯಾವುದನ್ನೂ ಸ್ಪಷ್ಟವಾಗಿ ಹೇಳದೆ ಪೋಸ್ಟ್ ಹಾಕಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
'ನಿಜ ಹೇಳೋರ ಜೀವನದಿಂದ ಜನ ದೂರ ಆಗ್ತಾರೆ. ಯಾಕಂದ್ರೆ, ಸುಳ್ಳೇ ಜನರಿಗೆ ಇಷ್ಟ' ಅಂತ ನಿಶಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
'ನಮ್ಮ ಪ್ರೀತಿಯ ನೀಲು, ಏನಾದ್ರೂ ಇದ್ರೆ ಓಪನ್ ಆಗಿ ಹೇಳಿ. ನಿಮ್ಮನ್ನ ಪ್ರೀತಿಸೋರು ತುಂಬಾ ಜನ ಇದ್ದಾರೆ. ಕೆಲವರು ಏನೇನೋ ಹೇಳ್ತಿದ್ದಾರೆ. ಏನಿದ್ರೂ ಗೊತ್ತಾಗುತ್ತೆ. ಆದ್ರೆ ಬೇಗ ಗೊತ್ತಾಗ್ಲಿ. ಯಾರಿಗೂ ತೊಂದರೆ ಆಗಬಾರದು ಅಂತ ನೀವು ಅಂದುಕೊಳ್ಳೋರು ಅಂತ ನಮಗೆ ಗೊತ್ತು. ಆದ್ರೂ ಹೇಳಲೇಬೇಕು. ನಿಮ್ಮನ್ನ ಪ್ರೀತಿಸೋರು ಕಾಯ್ತಿದ್ದಾರೆ' ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ಮಣಿಹಾರ ಮಾರುವ ಹುಡುಗಿ ಮೋನಾಲಿಸಾಳ ಮೇಕಪ್ ಲುಕ್ ವೈರಲ್!
'ಯಾಕೆ ಸುತ್ತಿಬಳಸಿ ಮಾತಾಡ್ತೀರಾ? ಪ್ರೇಕ್ಷಕರಿಗೆ ಏನಾದ್ರೂ ಹೇಳ್ಬೇಕಿದ್ರೆ ನೇರವಾಗಿ ಹೇಳಿ' ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 'ನಿಶಾ ಅಮ್ಮ, ಏನು ಪ್ರಾಬ್ಲಮ್ ಅಂತ ಹೇಳ್ತೀರಾ?', 'ಯಾರಾದ್ರೂ ಭಯ ಹುಟ್ಟಿಸ್ತಿದ್ದಾರಾ?' ಅಂತೆಲ್ಲಾ ಜನ ಕೇಳ್ತಿದ್ದಾರೆ.
ಉಪ್ಪುಂ ಮುಳಕುಂ ಧಾರಾವಾಹಿಯ ಬಿಜು ಸೋಪಾನಂ ಮತ್ತು ಎಸ್.ಪಿ. ಶ್ರೀಕುಮಾರ್ ವಿರುದ್ಧ ಒಬ್ಬ ನಟಿ ದೂರು ಕೊಟ್ಟಿದ್ದು ದೊಡ್ಡ ವಿವಾದ ಆಗಿತ್ತು. ಈ ವಿಷಯಕ್ಕೂ ನಿಶಾ ಪೋಸ್ಟ್‌ಗೂ ಏನಾದರೂ ಸಂಬಂಧ ಇದೆಯಾ? ದೂರು ಕೊಟ್ಟ ನಟಿ ನಿಶಾ ಅವರೇ ಆಗಿರಬಹುದಾ ಎಂದೆಲ್ಲಾ ಜನರು ಕೇಳುತ್ತಿದ್ದಾರೆ. ಉಪ್ಪುಂ ಮುಳಕುಂ ಸೀರಿಯಲ್‌ನಲ್ಲಿ ಇನ್ನೂ ನಟಿಸ್ತೀರಾ ಅಂತಲೂ ಕೆಲವರು ಕೇಳ್ತಿದ್ದಾರೆ. ಮತ್ತೆ ಮದುವೆ ಆಗ್ಬೇಕು ಅಂತ ನಿಶಾ ಸಾರಂಗ್ ಇತ್ತೀಚೆಗೆ ಹೇಳಿದ್ದರು. 50 ವರ್ಷದ ನಂತರ ತನ್ನ ಬಗ್ಗೆ ಹೆಚ್ಚು ಗಮನ ಕೊಡಬೇಕು, ಇಷ್ಟ ಪಡೋದನ್ನೆಲ್ಲಾ ಮಾಡಬೇಕು ಅಂತ ನಿಶಾ ಹೇಳಿದ್ದರು. ಒಂದು ಯೂಟ್ಯೂಬ್ ಚಾನೆಲ್‌ಗೆ ಕೊಟ್ಟ ಇಂಟರ್‌ವ್ಯೂನಲ್ಲಿ ನಿಶಾ ಮನಸ್ಸು ಬಿಚ್ಚಿ ಮಾತಾಡಿದ್ದರು. ಇದೀಗ ಫೇಸ್‌ಬುಕ್‌ನಲ್ಲಿ ಅರ್ಧಂಬರ್ಧ ಅಸಂಬದ್ಧವಾಗಿ ಬರೆದುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಖ್ಯಾತ ನಟಿ, ರೀಲ್ಸ್ ರಾಣಿ ಅಪಹರಣ: ಅಮ್ಮನೊಂದಿಗೆ ಬರುತ್ತಿದ್ದಾಗ ಕಾರಿನಲ್ಲಿ ಬಂದು ಕಿಡ್ನಾಪ್