Small Screen
ಬಿಗ್‌ಬಾಸ್ ಕನ್ನಡ 11ರ ಮನೆಯಿಂದ ಶಿಶಿರ್ ಶಾಸ್ತ್ರಿ ಹೊರ ನಡೆದಿದ್ದಾರೆ.
ಹುಟ್ಟುಹಬ್ಬದ ದಿನವೇ ಬಿಗ್‌ಬಾಸ್ ಮನೆಯಿಂದ ಅವರು ಔಟ್ ಆದರು.
ಶಿಶಿರ್ ಶಾಸ್ತ್ರಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಹಾಸನದವರು.
9ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ ಭರತನಾಟ್ಯ ಅಭ್ಯಾಸ ಮಾಡಿದ್ದು, ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ತಮ್ಮದೇಯಾದ ಈವೆಂಟ್ ಮ್ಯಾನೆಮಜ್‌ಮೆಂಟ್ ಕಂಪನಿಯನ್ನು ಹೊಂದಿದ್ದ ಶಿಶಿರ್ ಶಾಸ್ತ್ರಿ, ಆಕಸ್ಮಿಕವಾಗಿ ನಟನೆಗೆ ಬಂದರು.
2012ರಲ್ಲಿ ಸೊಸೆ ತಂದ ಸೌಭಾಗ್ಯ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಶಿಶಿರ್.
ಪುಟ್ಟಗೌರಿ ಮದುವೆ, ಭಾರತಿ ಮತ್ತು ಕುಲವಧು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಲವಧು ಧಾರಾವಾಹಿ ಹೆಚ್ಚು ಹೆಸರು ತಂದುಕೊಟ್ಟಿತು.
ಸೇವಂತಿ ಪ್ರೇಮಲೋಕ ಸೇರಿದಂತೆ ಪರಭಾಷಾ ಸೀರಿಯಲ್‌ಗಳಲ್ಲೂ ಶಿಶಿರ್ ಅಭಿನಯಿಸಿದ್ದಾರೆ.
ಮಿ.ಎಲ್‌ಎಲ್‌ಬಿ ಸಿನಿಮಾ ಮೂಲಕ ಬೆಳ್ಳಿತೆರೆ ಕಾಲಿಟ್ಟ ಶಿಶಿರ್ ಶಾಸ್ತ್ರಿ, ಆನಂತರ ಬಿಲ್ಗೇಟ್ಸ್ , ಅಲೆವ ಮೋಡ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಮುಂತಾದ ಸಿನೆಮಾಗಳಲ್ಲಿ ನಟಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ 75ನೇ ದಿನಕ್ಕೆ ಮನೆಯಿಂದ ಹೊರ ಬಂದಿದ್ದಾರೆ.