ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ, ಸಾಕಷ್ಟು ಟ್ರೋಲ್​ಗಳಿಗೆ ಬಳಸಿಕೊಳ್ಳುತ್ತಿರುವ ನಿಖಿಲ್​ ಎಲ್ಲಿದ್ದಿಯಪ್ಪಾ ಡೈಲಾಗ್​ ರೂವಾರಿ ಯಾರು ಗೊತ್ತಾ?    

ನಿಖಿಲ್​ ಎಲ್ಲಿದ್ದೀಯಪ್ಪ ಎನ್ನೋ ಡೈಲಾಗ್​ ಎಷ್ಟು ಫೇಮಸ್​ ಎನ್ನೋದು ಬಹುಶಃ ಎಲ್ಲರಿಗೂ ತಿಳಿದದ್ದೇ. 2019ರಲ್ಲಿನ ಈ ಡೈಲಾಗ್​, ಐದು ವರ್ಷ ಆದ್ರೂ ಸಕತ್​ ಫೇಮಸ್​ ಆಗಿಯೇ ಇದೆ. ಅದರಲ್ಲಿಯೂ ಈ ಡೈಲಾಗ್​ ಅನ್ನು ಟ್ರೋಲ್​ಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ನಿಖಿಲ್​ ಜಾಗದಲ್ಲಿ ಬೇರೆ ಬೇರೆ ಹೆಸರುಗಳು ಸೇರಿಕೊಳ್ಳುತ್ತಿವೆ ಅಷ್ಟೇ. ಎಲ್ಲಿದ್ದೀಯಪ್ಪ ಎನ್ನೋದೇನೂ ಹೊಸ ಶಬ್ದವಲ್ಲ. ದಿನವೂ ಎಲ್ಲರ ಮನೆಯಲ್ಲಿಯೂ ಹೇಳುವುದೇ. ಆದರೆ ಒಂದೊಂದು ಡೈಲಾಗ್​ಗಳು ಹಾಗೇ ಅಲ್ವಾ? ಅದ್ಹೇಗೆ ಅಷ್ಟು ವೈರಲ್​ ಆಗಿ, ಎಲ್ಲರ ಬಾಯಲ್ಲೂ ನಲಿದಾಡಿಬಿಡುತ್ತವೆ ಎಂದು ಹೇಳೋದೇ ಕಷ್ಟ. ಆ ಡೈಲಾಗ್​ ಹೇಳಿದವರು ಕೂಡ ಇದು ಇಷ್ಟೆಲ್ಲಾ ಫೇಮಸ್​ ಆಗುತ್ತೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರುವುದಿಲ್ಲ. 

ಅಷ್ಟಕ್ಕೂ ನಿಖಿಲ್​ ಎಲ್ಲಿದ್ದೀಯಪ್ಪ ಎನ್ನುವುದು ಕಳೆದ ಲೋಕಸಭೆ ಎಲೆಕ್ಷನ್​ ವೇಳೆ ಆಗಿದ್ದು. ಅಂದರೆ 2019ರಲ್ಲಿ. ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಜನರ ಮಧ್ಯೆ ಹುಡುಕಲು ಅಪ್ಪ ಎಚ್​.ಡಿ. ಕುಮಾರಸ್ವಾಮಿ ಅವರು ಇದನ್ನು ಬಳಸಿಕೊಂಡಿದ್ದರು. ನಂತರ ನಿಖಿಲ್​ ಅವರು ಚುನಾವಣೆಯಲ್ಲಿ ಸೋತ ಮೇಲಂತೂ ಈ ಡೈಲಾಗ್​ ಹಿಡಿದು ಟ್ರೋಲ್​ ಮಾಡಿದವರು ಅದೆಷ್ಟೋ ಮಂದಿ. ಸೋಷಿಯಲ್​ ಮೀಡಿಯಾಗಳಲ್ಲಂತೂ ಇದರದ್ದೇ ಹವಾ. ಅಷ್ಟಕ್ಕೂ ನಿಮಗೆ ಈ ಘಟನೆಯೂ ನೆನಪಿರಬಹುದು. ಲೋಕಸಭೆಯ ಎಲೆಕ್ಷನ್​ ಸಮಯದಲ್ಲಿಯೇ ಮಂಡ್ಯದಲ್ಲಿ ನಿಖಿಲ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಜಾಗ್ವರ್' ಆಡಿಯೋ ಲಾಂಚ್ ನಡೆದಿತ್ತು. ಆ ಸಮಯದಲ್ಲಿ ವಿಪರೀತ ಜನ ಜಂಗುಳಿ ಸೇರಿತ್ತು. ಅವರ ಮಧ್ಯೆ ಇದ್ದ ನಿಖಿಲ್​ ಅವರನ್ನು ವೇದಿಕೆ ಮೇಲೆ ಕರೆಯಲು ಕುಮಾರಸ್ವಾಮಿ ಅವರು ನಿಖಿಲ್​ ಎಲ್ಲಿದ್ದೀಯಪ್ಪ ಎಂದು ಪ್ರಶ್ನಿಸಿದ್ದರು ಅಷ್ಟೇ. 

ತಿಳಿಯದೇ ತಪ್ಪಾಗೋಯ್ತು, ಪ್ಲೀಸ್​ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ

ಆದರೆ ಈ ಲೋಕಸಭೆ ಚುನಾವಣೆಯ ರಿಲಸ್ಟ್​ ಹೊತ್ತಿನಲ್ಲಿ ಈ ಡೈಲಾಗ್​ ಹಿಂದಿನ ರೂವಾರಿ ಯಾರು ಎಂಬ ಇಂಟರೆಸ್ಟಿಂಗ್​ ವಿಷಯ ರಿವೀಲ್​ ಆಗಿದೆ. ಅಷ್ಟಕ್ಕೂ ಈ ಡೈಲಾಗ್​ ಅನ್ನು ಕುಮಾರಸ್ವಾಮಿ ಅವರಿಗೆ ಹೇಳಿಕೊಟ್ಟಿದ್ದು, 'ಜಾಗ್ವರ್' ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಆ್ಯಂಕರ್​ ಆಗಿದ್ದ ಶಾಲಿನಿ. ಶಾಲಿನಿ ಎಂದರೆ ಬಹುಶಃ ಕೆಲವರಿಗೆ ತಿಳಿಯಲಿಕ್ಕಿಲ್ಲ. ಪಾಪ ಪಾಂಡು ಖ್ಯಾತಿಯ ನಟಿ ಶಾಲಿನಿ ಎಂದರೆ ಅರ್ಥವಾದೀತು. ಈ ವಿಷಯವನ್ನು ಶಾಲಿನಿ ಅವರು, ಸ್ಪೀಡ್ ಪ್ಲಸ್ ಕರ್ನಾಟಕ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಕಿರಿಕ್ ಕೀರ್ತಿ ಜೊತೆ ರಿವೀಲ್ ಮಾಡಿದ್ದಾರೆ.

ಎಚ್​.ಡಿ.ಕುಮಾರಸ್ವಾಮಿ ಸರ್​ಗೆ ಎಲ್ಲಿದ್ದೀಯಪ್ಪ ನಿಖಿಲ್ ಅಂತ ನಾನೇ ಹೇಳಿಕೊಟ್ಟಿದ್ದು. ಅದು ಸುಮಾರು ನಾಲ್ಕು ಗಂಟೆ ಕಾರ್ಯಕ್ರಮವಾಗಿತ್ತು. ಆದರೆ, ಅದರಲ್ಲಿ 10-15 ಸೆಕೆಂಡಿನ ಈ ಡೈಲಾಗ್​ ಈ ಪರಿ ಫೇಮಸ್ ಆಗತ್ತೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಶಾಲಿನಿ ಹೇಳಿದ್ದಾರೆ. ನನ್ನ ಫ್ರೆಂಡ್ ರೋಹಿತ್ ಪದಕಿ ವಿಡಿಯೋ ಕಳಿಸಿಬಿಟ್ಟು. ಯೋ ಅಮ್ಮ.. ಇದ್ಯಾವಾಗ ಮಾಡಿದೆ ನೀನು ಕೇಳಿದ್ರು. ಆಗಲೇ ನನಗೆ ಗೊತ್ತಾಗಿದ್ದು ಇದು ಇಷ್ಟೆಲ್ಲಾ ಫೇಸಮ್​ ಆಗಿದೆ ಎಂದರು. ಅಷ್ಟಕ್ಕೂ ಆ ದಿನ ಆಗಿದ್ದೇನೆಮದರೆ, ಮೊದಲೇ ಸ್ಕ್ರಿಪ್ಟ್ ಮಾಡಿದಂತೆ ಜನರ ಮಧ್ಯೆ ನಿಖಿಲ್ ಇರುತ್ತಾರೆ. ಅವರನ್ನು ವೇದಿಕೆ ಮೇಲೆ ಇರುವ ಕುಮಾರಸ್ವಾಮಿ ಕರೆಯಬೇಕಿತ್ತು. ಆದರೆ ಅವರು ಎಷ್ಟೇ ಕ್ಲೂ ಕೊಟ್ಟರೂ ಕರೆಯಲಿಲ್ಲ. ಆಗ ನಾನು ಸುಮ್ಮನೆ ನಿಖಿಲ್​ ಎಲ್ಲಿದಿಯಪ್ಪಾ ಅಂತ ಹೇಳಿ ಅಂದೆ. ಅದೇನೂ ಮೊದಲೇ ಪ್ಲ್ಯಾನ್​ ಮಾಡಿದ್ದಲ್ಲ. ವೇದಿಕೆ ಮೇಲೆ ಎಷ್ಟು ಹೊತ್ತಾದರೂ ಕುಮಾರಸ್ವಾಮಿ ಅವರು ಕರೆಯದೇ ಇದ್ದಾಗ, ಸುಮ್ಮನೇ ಹೀಗೆ ಹೇಳಿಕೊಟ್ಟೆ. ಅವರು ಹಾಗೆಯೇ ಕರೆದರು. ಅಷ್ಟೇ... ಘಟನೆ ನಡೆದು ಐದು ವರ್ಷವಾದ್ರೂ ಈಗಲೂ ಅದನ್ನೇ ಬಳಸ್ತಾ ಇದ್ದಾರೆ ಜನ ಎಂದ್ರೆ ನಂಬೋಕೆ ಆಗ್ತಿಲ್ಲ ಎಂದಿದ್ದಾರೆ. 

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!


YouTube video player