Asianet Suvarna News Asianet Suvarna News

ಸ್ಟಾರ್ ಸುವರ್ಣದಲ್ಲಿ 'ಜಾನಕಿ ಸಂಸಾರ' ಶುರುವಾಗಲಿದೆ; ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ !

'ಜಾನಕಿ ಸಂಸಾರ' ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, 'ಕೃಷ್ಣರುಕ್ಮಿಣಿ' ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು 'ಜಾನಕಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

New Serial Janaki Samsara starts in Star Suvarna on Monday 06 May 2024 srb
Author
First Published May 2, 2024, 6:34 PM IST

ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ ಪರಿಕಲ್ಪನೆಗಳೊಂದಿಗೆ  ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ 'ಜಾನಕಿ ಸಂಸಾರ'.

ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರು ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

'ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ, ಬಂದೇ ಬಿಟ್ಟ ಪುಷ್ಪರಾಜ್; 'ಪುಷ್ಪ 2' ಸಾಂಗ್ ಬಿಡುಗಡೆ!

'ಜಾನಕಿ ಸಂಸಾರ' ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, 'ಕೃಷ್ಣರುಕ್ಮಿಣಿ' ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು 'ಜಾನಕಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೂರಜ್ ಹೊಳಲು, ಕಾವ್ಯ ಶಾಸ್ತ್ರೀ, ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. 

ಶ್ರೀನಿಧಿ ಶೆಟ್ಟಿಯೋ, ರಾಧಿಕಾ ಪಂಡಿತ್ ಆ? ಯಶ್ ಆಯ್ಕೆ ಯಾರೆಂಬ ಪ್ರಶ್ನೆಗೆ ಸಿಕ್ಕಿದೆ ಉತ್ತರ!

ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ನೋವು-ನಲಿವನು ತೂಗೋ ಹೊಸ ಧಾರಾವಾಹಿ 'ಜಾನಕಿ ಸಂಸಾರ'.   ಅಂದಹಾಗೆ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗೆ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿದ್ದು ವೀಕ್ಷಕರ ಮನೆ ಗೆಲ್ಲುತ್ತಿವೆ. ಜತೆಗೆ, ರಿಯಾಲಿಟಿ ಶೋ 'ಸುವರ್ಣ ಜಾಕ್‌ಪಾಟ್‌' ಕೂಡ ಸಾಕಷ್ಟು ಸಂಚಿಕೆಗಳನ್ನು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇನ್ನು, ಸಿಹಿಕಹಿ ಚಂದ್ರು ನೇತೃತ್ವದ 'ಬೊಂಬಾಟ್ ಭೋಜನ' ಸಾವಿರ ಸಂಚಿಕೆಗಳನ್ನು ದಾಟಿ ಸಾಕಷ್ಟು ಮುಂದಕ್ಕೆ ಹೋಗಿದೆ. 

ಕತ್ತಲೆಯಿದ್ದಾಗಲೇ ನಕ್ಷತ್ರಗಳನ್ನು ನೋಡಲು ಸಾಧ್ಯ ಅಂದಿದ್ಯಾಕೆ ನಟಿ ಅನುಪಮಾ ಗೌಡ?

 

Latest Videos
Follow Us:
Download App:
  • android
  • ios