Asianet Suvarna News Asianet Suvarna News

ತೆಲುಗು ಬಿಗ್‌ಬಾಸ್‌ ನಲ್ಲಿ ಪ್ರೇಮಕಥೆ, ಒಂದೇ ಕಪ್‌ ನಲ್ಲಿ ಕಾಫಿ ಹೀರಿದ ಮಂಗಳೂರು ಶೆಟ್ಟಿ ಬೆಂಗಳೂರು ಯಶ್ಮಿ ಗೌಡ!

ಬಿಗ್‌ ಬಾಸ್‌ ತೆಲುಗು 8ನೇ ಸೀಸನ್‌ನಲ್ಲಿ ಮೂರನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಕಾವೇರಿದ್ದು, ಸ್ಪರ್ಧಿಗಳು ರೊಚ್ಚಿಗೆದ್ದು ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ವಿಶೇಷವಾಗಿ ಕನ್ನಡತಿ ಯಶ್ಮಿ ಗೌಡ ರೊಚ್ಚಿಗೆದ್ದಿದ್ದು, ಮಣಿಕಂಠ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

New love stories in Bigg Boss Telugu 8 house, is this the real content, Yashmi Gowda story gow
Author
First Published Sep 18, 2024, 7:09 PM IST | Last Updated Sep 18, 2024, 7:18 PM IST

ಬಿಗ್‌ ಬಾಸ್‌ ತೆಲುಗು 8ನೇ ಸೀಸನ್‌ 16ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಎರಡು ವಾರಗಳು ಪೂರ್ಣಗೊಂಡಿವೆ. ಮೊದಲ ವಾರ ಬೇಬಕ್ಕ, ಎರಡನೇ ವಾರ ಶೇಖರ್‌ ಬಾಷಾ ಹೊರಹೋಗಿದ್ದಾರೆ. ಪ್ರಸ್ತುತ ಮನೆಯಲ್ಲಿ 12 ಮಂದಿ ಇದ್ದಾರೆ. ಈಗ ಮೂರನೇ ವಾರದ ನಾಮಿನೇಷನ್‌ ಪ್ರಕ್ರಿಯೆ ತುಂಬಾ ರೋಚಕವಾಗಿ ನಡೆದಿದೆ. ಕಳೆದ ಎರಡು ವಾರಗಳಿಗಿಂತ ಶೋ ಕಾವು ಹೆಚ್ಚಾಗಿದೆ ಎಂದೇ ಹೇಳಬಹುದು. 

ಸ್ಪರ್ಧಿಗಳು ರೊಚ್ಚಿಗೆದ್ದು ಕಾರಣ ನೀಡಿ ನ್ಯಾಮಿನೇಟ್ ಮಾಡಿದ್ದಾರೆ. ವಿಶೇಷವಾಗಿ ಕನ್ನಡತಿ ಯಶ್ಮಿ  ಗೌಡ ರೊಚ್ಚಿಗೆದ್ದಿದ್ದಾರೆ. ವಾದ ಬಂದಾಗ ತುಂಬಾ ಫೈರ್‌ ಆಗಿ ಬೋಲ್ಡ್ ಆಗಿ ಉತ್ತರ ನೀಡುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಅವರಲ್ಲಿ ಫೈರಿಂಗ್‌ ಕಾಣಿಸುತ್ತಿದೆ ಎಂಬುದು ತರ ಸ್ಪರ್ಧಿಗಳ ಮಾತು. ಮಣಿಕಂಠ ವಿಷಯದಲ್ಲಿ ಅವರು ಸೆನ್ಸೇಷನಲ್ ಕಾಮೆಂಟ್‌ ಕೂಡ ಮಾಡಿದ್ದಾರೆ. ತಾನು ಇರುವವರೆಗೂ ಮಣಿಕಂಠ ಅವರನ್ನು ನಾಮಿನೇಟ್‌ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಮತ್ತೊಮ್ಮೆ ಮಂಗಳೂರು ಹುಡುಗ ಪೃಥ್ವಿರಾಜ್‌ ಶೆಟ್ಟಿ ಮುಂದೆಯೂ ಇದೇ ಮಾತನ್ನು ಹೇಳಿದ್ದಾರೆ.

ತೆಲುಗು ಬಿಗ್‌ ಬಾಸ್‌ ನಲ್ಲಿ ಮಿಂಚುತ್ತಿರುವ ಕನ್ನಡಿಗ, ಮಂಗಳೂರು ಪ್ರತಿಭೆ ಪೃಥ್ವಿರಾಜ್ ಶೆಟ್ಟಿ ಯಾರು?

ಅಷ್ಟೇ ಅಲ್ಲದೆ ಬಿಗ್‌ ಬಾಸ್‌ ಮುಂದೆ ತಮ್ಮ ಗೋಳು ತೋಡಿಕೊಂಡರು. ನನ್ನನ್ನು ಅಪ್ಪಿಕೊಳ್ಳುವುದು  ಇಷ್ಟವಾಗುತ್ತಿಲ್ಲ  ಅವರು ಎಲ್ಲವನ್ನೂ ನಕಲಿ ಮಾಡುತ್ತಿದ್ದಾರೆ ಜೊತೆಗೆ ಇದಲ್ಲದೆ ಮಣಿಕಂಠ ಹಾಗೆ ಮಾಡುವುದು ಮುಜುಗರ ತಂದಿದೆ ಎಂದು  ಕೂಡ ಬಿಗ್‌ ಬಾಸ್‌ ಮುಂದೆ ಕಣ್ಣೀರು ಹಾಕಿದರು. ಇದೇ ವಿಷಯವನ್ನು ಪೃಥ್ವಿರಾಜ್‌ ಅವರ ಬಳಿಯೂ ಹೇಳಿಕೊಂಡರು.  ಆದರೆ ಹೀಗೆ ಹೇಳಿದ ಯಶ್ಚಿ ತನ್ನ 1 ಕಪ್‌ ಕಾಫಿಯನ್ನು ಮಾತ್ರ ಪೃಥ್ವಿರಾಜ್‌ ಅವರೊಂದಿಗೆ ಹಂಚಿಕೊಳ್ಳುವುದು ಅಚ್ಚರಿ ಮೂಡಿಸಿತು. ಇಬ್ಬರೂ ಒಂದೇ ಕಪ್‌ನಲ್ಲಿ ಕಾಫಿ ಕುಡಿಯುವುದು ವಿಶೇಷವಾಗಿತ್ತು.

ಇನ್ನು ಈ ಸಾರಿ ಬಿಗ್‌ ಬಾಸ್‌ಗೆ ಅಸಲಿ ಕಂಟೆಂಟ್‌ ಸಿಕ್ಕಿದೆ. ಮನೆಯಲ್ಲಿ ಲವ್‌ಗೆ ಸಂಬಂಧಿಸಿದ ಚರ್ಚೆ ನಡೆಯಿತು. ನಿಖಿಲ್‌, ಕಿರಾಕ್‌ ಸೀತಾ  ಮಧ್ಯೆ ಕೆಲ ಹೊತ್ತು  ಚರ್ಚೆ ನಡೆಸಿದರು ಬಿಗ್‌ ಬಾಸ್‌. ಆ ತರುವಾಯ ವಿಷ್ಣು ಪ್ರಿಯಾ ಅವರೊಂದಿಗೂ ಈ ಚರ್ಚೆಯನ್ನು ನಡೆಸಿದರು. ಅನಂತರ ಯಶ್ಮಿ ಇದರಲ್ಲಿ ಅವರನ್ನು ತೊಡಗಿಸಿಕೊಂಡರು. ಸೀತಾ, ವಿಷ್ಣು ಪ್ರಿಯಾ ಅವರು   ನಿಖಿಲ್‌ ನಿನ್ನನ್ನು ಫ್ಲರ್ಟ್‌ ಮಾಡಿದ್ದಾರಾ? ಎಂದು ಯಶ್ಮಿಗೆ ಪ್ರಶ್ನಿಸಿದರು. 

ಮಣಿಕಂಠ ವಿಷಯದಲ್ಲಿ ಯಶ್ಮಿ ಅವರ ಪ್ರತಿಕ್ರಿಯೆ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಅವರು ಓವರ್‌ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ಹೊರಗಿನಿಂದ ನೋಡಲು ಭಾಸವಾಗುತ್ತದೆ. ಅದೇ ಸಮಯದಲ್ಲಿ ಯಶ್ಮಿ ಅವರಲ್ಲಿ ಇಂತಹ ಸೇಡಿನ ಕ್ರಮವನ್ನು ಯಾರೂ ಒಪ್ಪುವ ಪರಿಸ್ಥಿತಿ ಇಲ್ಲ. ಈ ವಿಷಯದಲ್ಲಿ ವಿಲನ್‌ ಆಗಿ ಹೋಗಿದ್ದಾರೆ ಯಶ್ಮಿ. 

ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?

ಮತ್ತೊಂದೆಡೆ ನಿಖಿಲ್‌, ಯಶ್ಮಿ ಮಧ್ಯೆ ಟ್ರ್ಯಾಕ್‌ ನಡೆಯುತ್ತಿದೆ ಎಂಬ ಡ್ರಾಮಾ ಕೂಡ ಕ್ರಿಯೇಟ್‌ ಮಾಡಿದ್ದಾರೆ. ಅದೇ ರೀತಿ ಯಶ್ಮಿ, ಪೃಥ್ವಿರಾಜ್‌ ಆಪ್ತವಾಗಿ ಓಡಾಡುತ್ತಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಪೃಥ್ವಿರಾಜ್‌ ಶೆಟ್ಟಿ ಮಾತ್ರ ಎಲ್ಲರ ಜೊತೆಗೂ ಆರಾಮವಾಗಿ ಓಡಾಡಿಕೊಂಡು ಆರಾಮವಾಗಿದ್ದಾರೆ. ಇನ್ನು ನಿಖಿಲ್ ಮತ್ತು ಸೋನಿಯಾ ಅತ್ಯಂತ ಕ್ಲೋಸ್‌ ಆಗಿದ್ದಾರೆ. ಇದು ಕೂಡ ಇನ್ನೊಂದು ಲವ್ ಟ್ರ್ಯಾಕ್ ಆರಂಭಕ್ಕೆ ಮುನ್ನುಡಿಯಂತಿದೆ. ಇವೆಲ್ಲವೂ ಬಿಗ್‌ ಬಾಸ್‌ ನೋಡುಗರಿಗೆ ಉತ್ತಮ ಕಂಟೆಂಟ್‌ ಆಗಿದೆ. ಇಷ್ಟು ದಿನ ಬಿಗ್‌ ಬಾಸ್‌ನಲ್ಲಿ ಇಂತಹ ಟ್ರ್ಯಾಕ್‌ಗಳು ಇಲ್ಲ ಎಂಬ ಕೊರತೆ ಇತ್ತು. ಈಗ ಆ ಕಂಟೆಂಟ್‌ ಸೃಷ್ಟಿಯಾಗುತ್ತಿರುವುದು ವಿಶೇಷ. ಬಿಗ್‌ ಬಾಸ್‌ ಬಯಸಿದ್ದು ಈಗ ಸಿಗುತ್ತಿದೆ ಎಂದೇ ಹೇಳಬಹುದು. ಎಪಿಸೋಡ್‌ ಮುಂದೆ ಹೋದಂತೆ ನಿಜವಾಗಿ ಲವ್‌ ನಲ್ಲಿ ಬೀಳುತ್ತಾರಾ ಕಾದು ನೋಡಬೇಕು.

Latest Videos
Follow Us:
Download App:
  • android
  • ios