ಹೆಂಗಸರು ಕಣ್ಣೀರು ಹಾಕಿದ ತಕ್ಷಣ ಕರಗಿಹೋಗ್ಬೇಡ್ರೋ... ಹೀಗೂ ಆಗತ್ತೆ ನೋಡಿ: ರಾಮ್ ​ಉದಾಹರಣೆ ಕೊಡ್ತಿದ್ದಾರೆ ಸೀರಿಯಲ್​ ಫ್ಯಾನ್ಸ್​

ಹೆಣ್ಣು ಮಕ್ಕಳು ಕಣ್ಣೀರು ಹಾಕಿದ ತಕ್ಷಣ ಅದು ನಿಜ ಎಂದು ಅಂದುಕೊಳ್ಳಬೇಡಿ ಎಂದು ನೆಟ್ಟಿಗರು ಹೇಳ್ತಿರೋದು ಯಾಕೆ? ಇಲ್ಲಿದೆ ನೋಡಿ ಕಾರಣ...
 

netizens say that as soon as girls cry dont assume its true like Bhargavi in Seeta Rama Serial suc

ಹೆಣ್ಣುಮಕ್ಕಳಿಗೆ ದೇವರು ಕೊಟ್ಟಿರೋ ಒಂದು ದೊಡ್ಡ ವರ ಕಣ್ಣೀರು ಎನ್ನುವ ಮಾತಿದೆ. ಏಕೆಂದರೆ ಕೆಲವರು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬೇಕಾದ ಕೆಲಸವನ್ನು ಮಾಡಿಸಿಕೊಂಡು ಬಿಡುತ್ತಾರೆ ಎನ್ನುವ ಗಂಭೀರ ಆರೋಪವೂ ಹೆಂಗಸರ ಮೇಲಿದೆ. ಯಾವುದಕ್ಕೂ ಕರಗದ ಗಂಡಸರು, ಹೆಣ್ಣುಮಕ್ಕಳು ಕಣ್ಣೀರು ಹಾಕಿದ ತಕ್ಷಣ ಕರಗಿಬಿಡುತ್ತಾರೆ ಎನ್ನುವುದು ಹಲವು ಬಾರಿ ಸತ್ಯವೂ ಆಗಿರುತ್ತದೆ. ಇದನ್ನೇ ಧಾರಾವಾಹಿಗಳಲ್ಲಿಯೂ ಬಂಡವಾಳ ಮಾಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಲೇಡಿ ವಿಲನ್​ಗಳು ತಾವು ಇನ್ನೇನು ಖೆಡ್ಡಕ್ಕೆ ಬೀಳುತ್ತೇವೆ ಎಂದು ಗೊತ್ತಾದಾಗ ಕಣ್ಣೀರು ಸುರಿಸಿ ಆ ಕ್ಷಣದಿಂದ ತಪ್ಪಿಸಿಕೊಂಡು ಬಿಡುವ ಸಿದ್ಧ ಸೂತ್ರ ಅನ್ವಯಿಸುತ್ತಾರೆ.

ಇದೀಗ ಸೀತಾರಾಮ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದೆ. ಸೀತಾಳ ಗಂಡ ಯಾರು ಎಂದು ಹುಡುಕಲು ರುದ್ರಪ್ರತಾಪ್‌ಗೆ ಭಾರ್ಗವಿ ಹೇಳಿದ್ದಳು. ಇದೀಗ ಈ ವಿಷಯ ಅತ್ತ ಅಶೋಕ್‌ಗೆ ಗೊತ್ತಾಗಿದೆ. ಇತ್ತ ಭಾರ್ಗವಿ ಫೋನ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ರಾಮ್‌ ಕೂಡ ಕೇಳಿಸಿಕೊಂಡಿದ್ದಾನೆ. ಸೀತಾಳ ಗಂಡನನ್ನು ಹುಡುಕುವ ಭರದಲ್ಲಿ ಭಾರ್ಗವಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಳಾ ಎಂದು ಪ್ರೇಕ್ಷಕರು ಅಂದುಕೊಳ್ಳುವಷ್ಟರಲ್ಲಿಯೇ ಭಾರ್ಗವಿ ತಿರುಗಿ ಬಿದ್ದಿದ್ದಾಳೆ. ತನ್ನ ಮಾತನ್ನು ರಾಮ್​ ಕೇಳಿಸಿಕೊಂಡು ಇನ್ನೇನು ಆವಾಂತರ ಆಗುವುದೋ ಎನ್ನುವ ಕಾರಣಕ್ಕೆ, ಜೋರಾಗಿ ಅತ್ತುಬಿಟ್ಟಿದ್ದಾಳೆ. ಅಸಲಿಗೆ ರಾಮ್​ನ ತಾಯಿ ಅಂದರೆ ತನ್ನ ಅಕ್ಕನನ್ನು ಕೊಲೆ ಮಾಡಿಸಿದ್ದೂ ಇವಳೇ ಎನ್ನುವುದು ಸೀರಿಯಲ್​ ಕಥೆ. ಆದರೆ ಇದೀಗ ರಾಮ್​ಗೆ ಎಲ್ಲಿ ತನ್ನ ಬಂಡವಾಳ ಗೊತ್ತಾಗಿಬಿಡುತ್ತದೋ ಎನ್ನುವ ಕಾರಣಕ್ಕೆ ಜೋರಾಗಿ ಅತ್ತು, ನಿನ್ನ ಮದುವೆಯನ್ನು ಚೆನ್ನಾಗಿ ಮಾಡಿಸಬೇಕು ಅಂದುಕೊಂಡಿದ್ದೆ. ಆದರೆ ಅಕ್ಕನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ನಿನ್ನ ಅಕ್ಕ ನನ್ನ ಮಡಿಲಿನಲ್ಲಿ ನಿನ್ನನ್ನು ಹಾಕಿ ಹೋದಳು ಅಂತೆಲ್ಲಾ ಕಣ್ಣೀರು ಹಾಕಿದ್ದಾಳೆ. ಇದನ್ನು ನೋಡಿ ರಾಮ್​ ಕರಗಿ ಹೋಗಿದ್ದಾನೆ. 

ಡೈರೆಕ್ಟರ್​ಕ್ಕಿಂತ ಮೊದ್ಲೇ ನಾವು ಇದನ್ನೇ ಹೇಳಿದ್ದು ಬಿಡಿ ಅಂತಿರೋದ್ಯಾಕೆ ಫ್ಯಾನ್ಸ್​?

ಇದೇ ಕಾರಣಕ್ಕೆ ನೆಟ್ಟಿಗರು ರಾಮ್​ನನ್ನು ಉದಾಹರಣೆಯಾಗಿಸಿಕೊಂಡು ಎಲ್ಲ ಗಂಡಸರಿಗೂ ಬುದ್ಧಿ ಹೇಳುತ್ತಿದ್ದಾರೆ. ಹೆಣ್ಣುಮಕ್ಕಳು ಅತ್ತ ಮಾತ್ರಕ್ಕೆ ಅವರ ವಶವಾಗಬೇಡಿ, ಕರಗಿ ಹೋಗಬೇಡಿ. ರಾಮ್​ ಸ್ಥಿತಿನೂ ನಿಮಗೆ ಆಗಬಹುದು ಎನ್ನುತ್ತಿದ್ದಾರೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ರಾಮ್​ಗೆ ಏನೇನೋ ಹೇಳಿ ಭಾರ್ಗವಿ ಸಾಗ ಹಾಕಿದ್ದಾಳೆ. ಆದರೆ ಚಿಕ್ಕಮ್ಮ ಒಳ್ಳೆಯವಳು ಎಂದು ನಂಬಿರೋ ರಾಮ್​ಗೆ ಈ ಸತ್ಯ ಗೊತ್ತಾಗುತ್ತಲೇ ಇಲ್ಲ. 

ಅದೇ ಇನ್ನೊಂದೆಡೆ ಇದೀಗ ಅಶೋಕ್‌ಗೆ ಭಾರ್ಗವಿಯ ಕುತಂತ್ರ ತಿಳಿದಿದೆ. ಇನ್ನು ರಾಮ್​ಗೆ ಭಾರ್ಗವಿಯ ಕುತಂತ್ರ ತಿಳಿಯುವುದು ಯಾವಾಗ, ಸೀತಾ-ರಾಮ ಕಲ್ಯಾಣ ಯಾವಾಗ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ರಾಮ್​  ಮತ್ತು ಸೀತಾಳ ಪ್ರೇಮವನ್ನು ದೇಸಾಯಿ ಒಪ್ಪಿಕೊಂಡಿದ್ದಾರೆ. ಸಿಹಿಯಿಂದ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿರೋದು ಸೀತಾಳ ಸಮಸ್ಯೆ. ದೇಸಾಯಿ ಅವರು ತಮ್ಮ ವಂಶವನ್ನು ಮುಂದುವರೆಸಲು ನಿನ್ನ ಮತ್ತು ರಾಮ್​ನಿಂದ ಒಂದು ಮಗು ಬೇಕು ಎಂದಿದ್ದಾರೆ. ಆದರೆ ಇದು ಸೀತಾಳಿಗೆ ಇಷ್ಟವಿಲ್ಲ. ಸಿಹಿಯನ್ನು ಬಿಟ್ಟು ಬೇರೆ ಮಗು ಅವಳಿಗೆ ಬೇಡ. ಮತ್ತೊಂದು ಮಗು ಹೆರಲು ನಾನು ರೆಡಿ ಇಲ್ಲ. ಸಿಹಿ ಒಬ್ಬಳೇ ನನ್ನಮಗಳು ಎಂದಿದ್ದಾಳೆ.  

ಗುರೂ... ನಿಮ್​ ಮಗಳಿಗೆ ಕನ್ನಡದ ಪಾಠನೂ ಮಾಡಿ... ಕನ್ನಡದ ಮಗ್ಗಿನೂ ಕಲ್ಸಿ ಅಂತಿದ್ದಾರೆ ನೆಟ್ಟಿಗರು!

Latest Videos
Follow Us:
Download App:
  • android
  • ios