ಕಪ್ಪು ಬಾಟಂ ಹಾಗೂ ಆಲಿವ್ ಬಣ್ಣದ ಬ್ರೇಸಿಯರ್ಸ್ ಧರಿಸಿರುವ ಭೂಮಿ ಪೋಲ್ ಡ್ಯಾನ್ಸ್ ಕಲಿಕೆಯ ಎರಡನೇ ದಿನವೇ ಅದ್ಬುತ ಮೂವ್‌ಗಳಿಂದ ಅಚ್ಚರಿ ಹುಟ್ಟಿಸಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ 'ಕಿನ್ನರಿ' ನಟಿ ಕೃಷ್ಣ ಸುಂದರಿ ಭೂಮಿ ಶೆಟ್ಟಿ ತಮ್ಮ ಹೊಸ ವಿಡಿಯೋ ಮೂಲಕ ಸೆನ್ಸೇಶನ್ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಬಳಿಕ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಹೊಸ ಫೋಟೋ ಶೂಟ್‌ಗಳು, ಬೈಕ್ ರೈಡ್‌ಗಳ ಮೂಲಕ ಸುದ್ದಿಯಲ್ಲಿರ್ತಾರೆ. 

ಈ ಬಾರಿ ಭೂಮಿ ಶೆಟ್ಟಿ ತಮ್ಮ ಪೋಲ್ ಡ್ಯಾನ್ಸ್ ಮೂವ್ಸ್ ತೋರಿಸಿದ್ದಾರೆ. ಈ ವಿಡಿಯೋಗೆ ಅವರ ಬೆಂಬಲಿಗರು 'ಜಸ್ಟ್ ಲುಕಿಂಗ್ ಲೈಕ್ ಎ ವಾವ್' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಕಪ್ಪು ಬಾಟಂ ಹಾಗೂ ಆಲಿವ್ ಬಣ್ಣದ ಬ್ರೇಸಿಯರ್ಸ್ ಧರಿಸಿರುವ ಭೂಮಿ ಪೋಲ್ ಡ್ಯಾನ್ಸ್ ಕಲಿಕೆಯ ಎರಡನೇ ದಿನವೇ ಅದ್ಬುತ ಮೂವ್‌ಗಳಿಂದ ಅಚ್ಚರಿ ಹುಟ್ಟಿಸಿದ್ದಾರೆ.

ವಿಡಿಯೋ ಜೊತೆಗೆ 'ಇದು ನನ್ನ ಎರಡನೇ ತರಗತಿ ಎಂದರೆ ನೀವು ನಂಬುತ್ತೀರಾ? ನನ್ನ ಮೊದಲ ದಿನದಲ್ಲಿ ನಾನು ನನ್ನ ದೇಹವನ್ನು ತೋರಿಸಲು ಸ್ವಲ್ಪ ಹಿಂಜರಿಯುತ್ತಿದ್ದೆ. ಏಕೆಂದರೆ ನಾನು ಅದನ್ನು ಎಳೆಯಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ಪೋಲ್ ಮೇಲೆ ಅಭ್ಯಾಸ ಮಾಡಲು ಪ್ರಾರಂಭಿಸಿದಾಗ ಒಳಗಿನಿಂದ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸುತ್ತೀರಿ! ಈಗ ನಾನು ಏನು ಬೇಕಾದರೂ ಮಾಡಬಹುದು ಎನ್ನಿಸುತ್ತದೆ! ಮತ್ತು ಮುಂದಿನ ಕ್ಷಣದಿಂದ ನೀವು ಪೋಲ್ ಜೊತೆಗೆ ರೋಮ್ಯಾನ್ಸ್ ಮಾಡುತ್ತೀರಿ! ' ಎಂದಿದ್ದಾರೆ.

ವಿಡಿಯೋದಲ್ಲಿ ಭೂಮಿ ಸಲೀಸಾಗಿ ಪೋಲ್ ಹಿಡಿದು ಇಡೀ ದೇಹವನ್ನು ಗಾಳಿಯಲ್ಲಿ ಸುತ್ತುವುದನ್ನು, ಕಾಲಿನ ಸಹಾಯದಿಂದ ಪೋಲ್‌ಗೆ ಸುತ್ತುವುದು ಸೇರಿದಂತೆ ಕೆಲ ಮೂವ್‌ಗಳನ್ನು ಮಾಡುವುದನ್ನು ಕಾಣಬಹುದು. ಸದಾ ಫಿಟ್ನೆಸ್ ಕಡೆ ಗಮನ ಹರಿಸುವ ಭೂಮಿ ಸಖತ್ ಸ್ಟ್ರಾಂಗ್ ಎಂದು ಬಿಗ್ ಬಾಸ್‌ನಲ್ಲಿ ಪ್ರೂವ್ ಮಾಡಿದ್ದಾರೆ. ಇದೀಗ ಪೋಲ್ ಡ್ಯಾನ್ಸ್ ನೋಡಿ ಅವರ ಫಿಟ್ನೆಸ್ ‌ಗೆ ಎಲ್ಲರೂ ಶಹಬ್ಬಾಸ್ ಹೇಳುತ್ತಿದ್ದಾರೆ.

ಭೂಮಿಯ ಈ ವಿಡಿಯೋಗೆ ಹಲವರು ವಾವ್, ಸೂಪರ್ ಎಂದು ಪ್ರತಿಕ್ರಿಯಿಸಿದ್ದಾರೆ. 

 

View post on Instagram