RIP Samanvi: ಪಂಚಭೂತಗಳಲ್ಲಿ ಲೀನಳಾದ ಪುಟಾಣಿ, ಭಾವುಕರಾದ ಕುಟುಂಬ!

ರಸ್ತೆ ಅಪಘಾತದಿಂದ ಮೃತಪಟ್ಟ ಸಮನ್ವಿ ನೆನೆದು ನನ್ನಮ್ಮ ಸೂಪರ್ ಸ್ಟಾರ್ ಕುಟುಂಬ ಭಾವುಕರಾಗಿದೆ. 

Nanamma Super Star family breakdown recalling memories with Samanvi and Amrutha Naidu vcs

ಕನ್ನಡ ಧಾರಾವಾಹಿ ಮತ್ತು ಸಿನಿಮಾಗಳ ಜನಪ್ರಿಯ ನಟಿ ಅಮೃತಾ ನಯ್ಡು ಮತ್ತು ಅವರ ಪುತ್ರಿ ಸಮನ್ವಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿಕೊಂಡು ಹಿಂದಿರುಗಿ ಬರುವಾಗ ಕನಕಪುರ ರಸ್ತೆ ಮಾರ್ಗದಲ್ಲಿರುವ ಕೊಣನಕುಂಟೆ ಬಳಿ ರಸ್ತೆ ಬಳ ಅಪಘಾತವಾಗಿದೆ. ಅಮೃತಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಗಳು ಆರು ವರ್ಷದ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಬಾಲಕಿಯ ಅಂತ್ಯ ಸಂಸ್ಕಾರ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆದಿದ್ದು, ಬಂಧುಗಳು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟ್ಟು ಮಗುವಿನ ಮೃತ ದೇಹದ ಮುಂದೆ ಪೋಷಕರು ಮಗಳೇ, ಎದ್ದು ಬಾ ಎಂದು ಕಣ್ಣೀರು ಇಡುತ್ತಿದ್ದದ್ದು ಎಂಥವರ ಕರುಳನ್ನಾದರೂ ಚುರ್ ಎನ್ನುವಂತೆ ಮಾಡಿತ್ತು. 

'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ಸಮನ್ವಿ ಇನ್ನಿಲ್ಲ ಎಂಬ ನೋವು ಎಲ್ಲರನ್ನು ಕಾಡುತ್ತಿದೆ. ಏಳು ವಾರಗಳ ಕಾಲ ವೇದಿಕೆ ಮೇಲೆ ತಾಯಿ ಜೊತೆ ಜೀವನ ಪೂರ್ತಿ ಮರೆಯಲಾಗದ ಕ್ಷಣಗಳನ್ನು ಸಮನ್ವಿ ಕಳೆದಿದ್ದಾರೆ. ಸಮನ್ವಿ ಬಗ್ಗೆ ಸ್ನೇಹಿತರು ಮಾತನಾಡಿ ಭಾವುಕರಾಗಿದ್ದಾರೆ. 

ಸೃಜನ್ ಲೋಕೇಶ:
'ನಾನು ಒಂದು ರೀತಿ ಬ್ಲ್ಯಾಂಕ್ ಆಗಿದ್ದೀನಿ. ಎಂಥ ಮುದ್ದಾದ ಮಗು ಅದು. ಯಾಕೆ ಈ ರೀತಿ ಅಗುತ್ತೆ ಅಂತಾಲೇ ಗೊತ್ತಾಗುತ್ತಿಲ್ಲ. ಒಂದು ಅಪಘಾತದಲ್ಲಿ ಮಗು ಸತ್ತೋಗುತ್ತೆ ಅಂದ್ರೆ ಎನು? ಇನ್ನೂ ಜಗತ್ತು ನೋಡಿಲ್ಲ, ಎಷ್ಟು ಚೆನ್ನಾಗಿ ಓದುತ್ತಿತ್ತು. ನನಗೆ ಹೆಣ್ಣು ಮಗುವಿಲ್ಲ ಅನ್ನೋ ಕೊರಗಿದೆ. ನಾನು ಯಾವಾಗಲೂ ಹೇಳುತ್ತಿದ್ದೆ ನನಗೆ ಈ ರೀತಿ ಹೆಣ್ಣು ಮಗು ಬೇಕಿತ್ತು ಅಂತ. ವೈಕುಂಠ ಏಕಾದಶಿ ಅಂತ ಹೇಳ್ತಾರೆ. ಆ ದೇವರು ಇದ್ದಾನಾ ಅಂತಾನೇ ಗೊತ್ತಿಲ್ಲ. ಅಪ್ಪು ಅವರು ಹೋದಾಗ ತುಂಬಾ ಅಪ್ಸೆಟ್ ಅಗಿದ್ದೆ. ಇದು ಆಗ ಇನ್ನೂ ನಂಬಿಕೆ ಹೋಯ್ತು,' ಎಂದು ಸೃಜನ್ ಭಾವುಕರಾಗಿದ್ದಾರೆ. 

Nanamma Super Star family breakdown recalling memories with Samanvi and Amrutha Naidu vcs

ತನುಜಾ:
'ಎಂದೂ ವಾಯ್ಸ್‌ raise ಮಾಡಿಲ್ಲ. ತುಂಬಾನೇ ಸಾಫ್ಟ್‌ ಮಾತನಾಡುತ್ತಿದ್ದಳು. ಅಲ್ಲಿ ಎಲ್ಲರೂ ತರ್ಲೆ ಮಾಡುತ್ತಿದ್ದರು. ಇವಳು ಯಾವತ್ತೂ ತರ್ಲೆ ಮಾಡಿದ್ದೂ ನಾವು ನೋಡಿಲ್ಲ. ನಮ್ಮೆಲ್ಲರ ಮಕ್ಕಳು ಸಮನ್ವಿಗಿಂತ ಎರಡು ಮೂರು ವರ್ಷ ಚಿಕ್ಕವರು. ಎನಾದರೂ ಹಟ ಮಾಡಿದ್ದರೆ ಎಷ್ಟು ಚೆನ್ನಾಗಿ ಪ್ರೀತಿ ಮಾಡುತ್ತಿದ್ದಳು. ಏನೇ ಇದ್ದರೂ ಶೇರ್ ಮಾಡಿಕೊಳ್ಳುತ್ತಿದ್ದಳು. ಅವಳ ಕನ್ನಡ ತುಂಬಾ ಕ್ಯೂಟ್ ಆಗಿತ್ತು. ಅವಳ ಕ್ಯಾಟ್ ವಾಕ್ ಸೂಪರ್. ಸುಮ್ಮನೆ ಬಂದ್ರೂ ಕ್ಯಾಟ್ ವಾಕ್ ಮಾಡಿಕೊಂಡು ಬರುತ್ತಿದ್ದಳು. ನನಗೆ ಸಮನ್ವಿನೇ ಎಲ್ಲಾ ಎಂದು ಅಮೃತಾ ಹೇಳುತ್ತಿದ್ದರು. ಇವತ್ತು ನಾನು ಏನಕ್ಕೆ ಬದುಕಿರಲಿ ಎಂದು ಹೇಳುತ್ತಿದ್ದಾರೆ,' ಎಂದು ತನುಜಾ ಮಾತನಾಡಿದ್ದಾರೆ. 

ಅನು ಪ್ರಭಾಕರ್:
'ಅಮೃತಾ ಅವರು ಪ್ರೆಗ್ನೆಂಟ್. 30ರಂದು ನಾವು ಅವರ ಜೊತೆ ಲಾಸ್ಟ್‌ ಚಿತ್ರೀಕರಣ ಮಾಡಿದ್ದು. ಅವರು ನನಗೆ ಬಂದು ಹೇಳಿದ್ದರು ಮೇಡಂ ನಾನು 6 ವರ್ಷ ಆದ್ಮೇಲೆ ಮತ್ತೆ ಗರ್ಭಿಣಿ ಆಗಿದ್ದೀನಿ ಅಂತ. ಅವರಿಗೆ ಆರೋಗ್ಯ ನೋಡಿಕೊಳ್ಳಿ ಎಂತ ಹೇಳಿದೆ. ನನ್ನ ಟೀಂನವರು ಕಾಲ್ ಮಾಡಿದಾಗ ನನಗೆ ನಂಬೋಕೆ ಆಗಿಲ್ಲ. ತುಂಬಾನೇ ಶಾಕಿಂಗ್. ಸೈಂಟಿಫಿಕಲಿ ಸಾಬೀತು ಅಗಿದೆ, ಮಕ್ಕಳನ್ನು ಕಳೆದುಕೊಳ್ಳುವುದು ಅತಿ ದೊಡ್ಡ ನೀವು ಅಂತ. ಗಂಡ ಹೆಂಡ್ತಿ ಇಬ್ರನ್ನು ದೇವರೇ ಕಾಪಾಡಬೇಕು,' ಎಂದು ಅನು ಮಾತನಾಡಿದ್ದಾರೆ. 

Road Accident: ನನ್ನಮ್ಮ ಸೂಪರ್‌ಸ್ಟಾರ್‌ ಬಾಲಕಿ ಸಮನ್ವಿ ದಾರುಣ ಸಾವು, ಅಮ್ಮನಿಗೂ ಪೆಟ್ಟು

ಕೋಟೆ ಪ್ರಭಾಕರ್:
'ಮಗುವಿಗೆ ಈ ರೀತಿ ಆಗಿರುವುದು ನೋವು ತಡೆದುಕೊಳ್ಳಲು ಆಗುತ್ತಿಲ್ಲ. ಮಾದೇಶ ಸಿನಿಮಾದಿಂದ ಅಮೃತಾ ಅವರು ನನಗೆ ಗೊತ್ತು. ತುಂಬಾ ನೋವು ಆಗುತ್ತಿದೆ. ನಗು ನಗುತ್ತಾ ಇದ್ದ ಹುಡುಗಿ. ಬೆಳಗ್ಗೆಯಿಂದ ಇಲ್ಲೇ ಇದ್ದೀನಿ. ಆ ಮಗುವಿನ ಸೊಂಟ ಫುಲ್ ಟರ್ನ್ ಆಗ್ಬಿಟಿದೆ. ಅಮೃತಾ ಅವರಿಗೆ ಕೈಯಲ್ಲಿ ತರ್ಚಿದೆ. ಸ್ಪಾಟ್ ಡೆತ್ ಅಲ್ಲ ಅಂತ ನನಗೆ ಹೇಳಿದ್ದಾರೆ. ಇಲ್ಲಿ ಒಂದು ಕಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಗಲ್ಲ ಅಂತ ಹೇಳಿದಾಗ ಇನ್ನೊಂದು ಕಡೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಪ್ರಾಣ ಹೋಗಿತ್ತಂತೆ,' ಎಂದು ಪ್ರಭಾಕರ್ ಮಾತನಾಡಿದ್ದಾರೆ. 

ಸುಪ್ರೀತ:
'ಸುಮಾರು ಎರಡು ತಿಂಗಳು ನಾವು ಕುಟುಂಬ ರೀತಿ ಇದ್ದವರು. ಅಮೃತಾ ನಾನು ತುಂಬಾ ಸಲ ಒಟ್ಟಿಗೆ ಕೆಲಸ ಮಾಡಿದ್ದೀವಿ. ಮೊನ್ನೆ ಅವಳು ಎಲಿಮಿನೇಟ್ ಆದ ನೆಕ್ಸ್ಟ್ ದಿನ ಕಾಲ್ ಮಾಡ್ಲಾ ಬೇಡವಾ ಅಂತಿದ್ದೆ. ಎಲಿಮಿನೇಷನ್‌ ದಿನ ಮಕ್ಕಳಿಗೆ ಬೇಜಾರು ಆಗುತ್ತೆ ಅಂತ ಎಲ್ಲರನ್ನೂ ಹೊರಗಡೆ ಕಳುಹಿಸಿ, ರಿಸಲ್ಟ್‌ ಹೇಳಿದ್ದರು. ಅವತ್ತು ಸಮನ್ವಿ ಅಳುತ್ತಾಳೆ ಎಲಿಮಿನೇಷ್‌ ಅಂದ್ರೆ ಅಂತ ನಾನು ಅವಳ ಮುಖ ನೋಡಿದೆ. ಏನೇ ತಂದಿದ್ದರೂ ಪ್ಲೀಸ್‌ ತಿನ್ನಿ ನಾವು ತುಂಬಾ ತಂದಿದ್ದೀವಿ ಅಂತ ಹೇಳುತ್ತಿದ್ದಳು. ಸಮನ್ವಿ ನನ್ನ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು. ಆಗ ಕಾಲ್ ಮಾಡಿ ಅಮೃತಾ ಹೇಳಿದರು, ನಾನು ಬೇಡ ನೀನು ಗರ್ಭಿಣಿ ಇದ್ಯಾ. ಮಗೂಗೆ ಸಮಸ್ಯೆ ಆಗುತ್ತೆ ಅಂತ ಹೇಳಿದ್ದೆ. ಈಗ ನೋಡಿದರೆ ಈ ರೀತಿ ಆಯ್ತು,' ಎಂದು ಸುಪ್ರೀತ ಅತ್ತಿದ್ದಾರೆ.

"

Latest Videos
Follow Us:
Download App:
  • android
  • ios