ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿಡಿಯೋಗಳು ಸೋರಿಕೆಯಾಗುತ್ತಿದ್ದು, ಇತ್ತೀಚೆಗೆ ಮಿನಾಹಿಲ್ ಮಲಿಕ್ ಅವರ ವಿಡಿಯೋ ಸೋರಿಕೆಯಾಗಿದೆ. ಈ ಬಗ್ಗೆ ಮಿನಾಹಿಲ್ ಮಲಿಕ್ ಕಿಡಿಕಾರಿದ್ದು, ಸೈಬರ್ ಸೆಕ್ಯುರಿಟಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮೊದಲು ಇಮ್ಶಾ ರೆಹಮಾನ್‌, ನಂತರ ಮಥಿರಾ, ಈಗ ಮತ್ತೆ ಮಿನಾಹಿಲ್‌ ಮಲೀಕ್‌ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿಡಿಯೋಗಳು ಆನ್‌ಲೈನ್‌ನಲ್ಲಿ ನಿರಂತರವಾಗಿ ಸೋರಿಕೆ ಆಗುತ್ತಿದೆ. ಮಿನಾಹಿಲ್‌ ಮಲೀಕ್‌ ಅವರ ಅಶ್ಲೀಲ ವಿಡಿಯೋ ಕೆಲ ತಿಂಗಳ ಹಿಂದೊಮ್ಮೆ ಸೋರಿಕೆಯಾಗಿತ್ತು. ಆಗ ಇದು ತನ್ನದಲ್ಲ ಎಂದು ತೇಪೆ ಸಾರಿಸಿದ್ದ ಮಿನಾಹಿಲ್‌ ಈ ಬಾರಿ ವಿಡಿಯೋ ಸೋರಿಕೆ ಬೆನ್ನಲ್ಲಿಯೇ ಕಿಡಿಕಿಡಿಯಾಗಿದ್ದಾರೆ.

ಪಾಕಿಸ್ತಾನದಲ್ಲಿ ಪ್ರೈವಸಿ ಅನ್ನೋ ವಿಚಾರವೇ ಇಲ್ಲ ಎನ್ನುವಂತೆ ಪ್ರಖ್ಯಾತ ನಟ-ನಟಿ, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿಡಿಯೋ ತಿಂಗಳಿಗೊಂದರಂತೆ ಟೆಲಿಗ್ರಾಮ್‌ ಹಾಗೂ ವಿವಿಧ ಸೋಶಿಯಲ್‌ ಮೀಡಿಯಾ ಆಪ್‌ಗಳಲ್ಲಿ ಸೋರಿಕೆ ಆಗುತ್ತಲೇ ಇರುತ್ತದೆ.
ತನ್ನ ವಿಡಿಯೋ ಮತ್ತೊಮ್ಮೆ ಸೋರಿಕೆ ಆಗಿದ್ದರ ಬಗ್ಗೆ ಕಿಡಿಕಿಯಾಗಿರುವ ಮಿನಾಹಿಲ್‌ ಮಲೀಕ್‌, 'ಸೋಶಿಯಲ್‌ ಮೀಡಿಯಾದಲ್ಲಿ ಯಾರೂ ಕೂಡ ನನ್ನ ಅಪ್ಪ ಆಗಲು ಬರಬೇಡಿ. ಇಂಥವುಗಳಿಂದ ನನಗೆ ಯಾವುದೇ ಸಮಸ್ಯೆ ಆಗೋದಿಲ್ಲ' ಎಂದು ಹೇಳಿದ್ದಾರೆ.

ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳು, ವಿಶೇಷವಾಗಿ ಟಿಕ್‌ಟಾಕ್‌ಹಾಗೂ ಇನ್ಸ್ಟ್ಗ್ರಾಮ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ಅವರ ಅಪಾರ ಫಾಲೋವರ್ಸ್‌ಗಳು ಹಾಗೂ ಆನ್‌ಲೈನ್‌ ಉಪಸ್ಥಿತಿಯಿಂದಾಗಿ ಅವರನ್ನು ಹೆಚ್ಚಾಗಿ ಟಾರ್ಗೆಟ್‌ ಮಾಡಲಾಗುತ್ತದೆ. ಅವರ ಖಾಸಗಿ ವೀಡಿಯೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಕೆಲವು ತಿಂಗಳ ನಂತರ, ಪಾಕಿಸ್ತಾನದ ಜನಪ್ರಿಯ ಟಿಕ್‌ಟೋಕರ್ ಮಿನಾಹಿಲ್ ಮಲಿಕ್ ಅವರ ವೀಡಿಯೊಗಳು ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಕಂಟೆಂಟ್‌ ಕ್ರಿಯೇಟರ್‌ನ 8-9 ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಎಲ್ಲವೂ ಅಶ್ಲೀಲ ವಿಡಿಯೋಗಳಾಗಿವೆ.ಜನಪ್ರಿಯ ತಮಿಳು ನಟಿ ಶ್ರುತಿ ನಾರಾಯಣನ್ ಅವರ 'ಕಾಸ್ಟಿಂಗ್ ಕೌಚ್' ವೀಡಿಯೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ.

ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಗ್ಗೆ ಅಭಿಮಾನಿಗಳ ಒಂದು ವರ್ಗ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಅನೇಕರು ಸಾಮಾಜಿಕ ಮಾಧ್ಯಮದ ದುರುಪಯೋಗವು ಜೀವನವನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ತಿಳಿಸಿದ್ದಾರೆ.

"ಅದು ಸಹಿಸಲು ಆಗುತ್ತಿಲ್ಲ. ಈದ್‌ನಲ್ಲಿ ಯಾರಾದರೂ ಅಂತಹ ಕೆಲಸವನ್ನು ಹೇಗೆ ಮಾಡಲು ಸಾಧ್ಯ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಂತೆಯೇ, ಮತ್ತೊಬ್ಬ ಯೂಸರ್‌ "ಖಾಸಗಿ ವೀಡಿಯೊಗಳನ್ನು ಸೋರಿಕೆ ಮಾಡುವಲ್ಲಿ ಪಾಕಿಸ್ತಾನಿಗಳು ಭಾರತಕ್ಕಿಂತ ಬಹಳ ಮುಂದಿದ್ದಾರೆ" ಎಂದು ಹಂಚಿಕೊಂಡಿದ್ದಾರೆ. "ಯೇ ಸಾಲೇ ನಹೀಂ ಸುಧ್ರೇಂಗೆ," ಎಂದು ಮತ್ತೊಬ್ಬ ಯೂಸರ್‌ಬರೆದಿದ್ದಾರೆ.

ವೈರಲ್‌ಗಾಗಿ ಬಾಯ್‌ಫ್ರೆಂಡ್ ಜೊತೆಗಿನ ಖುಲ್ಲಂ ಖುಲ್ಲಾ ವಿಡಿಯೋ ಲೀಕ್ ಮಾಡಿದ ರೀಲ್ಸ್ ರಾಣಿ!

ಈ ಆತಂಕಕಾರಿ ಪ್ರವೃತ್ತಿಯು ದೇಶದಲ್ಲಿ ಡಿಜಿಟಲ್ ಭದ್ರತೆ, ವೈಯಕ್ತಿಕ ಗೌಪ್ಯತೆ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಗಂಭೀರ ಕಳವಳಗಳನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ, ಈ ಬೆಳೆಯುತ್ತಿರುವ ಬೆದರಿಕೆಯನ್ನು ಎದುರಿಸಲು ಉತ್ತಮ ಜಾಗೃತಿ ಅಭಿಯಾನಗಳು, ಕಾನೂನು ಸುಧಾರಣೆಗಳು ಮತ್ತು ಕಠಿಣ ನೀತಿಗಳ ತುರ್ತು ಅವಶ್ಯಕತೆಯಿದೆ. 

ಪಾಕಿಸ್ತಾನದ ಟಿಕ್‌ಟಾಕ್ ತಾರೆ ಮಿನಾಹಿಲ್ ಮಲಿಕ್ ಖಾಸಗಿ ವಿಡಿಯೋ ಲೀಕ್!

Scroll to load tweet…