-ಮೇಘನಾ ಸುಧೀಂದ್ರ

ಟೀನೇಜ್‌

ಪ್ರೀತಿಯ ಲಿಖಿತಾ,

ನಾನು ಇರುವ ಮನೆಯ ಮೇಲೆ ಒಂದು ಆಂಟಿ ಇದ್ದಾರೆ, (ಆಂಟಿ ಎಂದರೆ ಇಲ್ಲಿ ಜನಕ್ಕೆ ಕೋಪ ಬರುತ್ತದೆ) ಅವರ ಮಗಳಿಗೆ ಈಗ 15ರ ಹರೆಯ. ಮೊನ್ನೆ ಪಾರ್ಕಿನಲ್ಲಿ ಸಿಕ್ಕಿದ್ದಳು. ಇವನು ನನ್ನ ಬಾಯ್‌ ಫ್ರೆಂಡ್‌ ಎಂದು ಪರಿಚಯ ಮಾಡಿಕೊಟ್ಟಳು. ನಾನು ಒಮ್ಮೆ ದಂಗಾದೆ. ಆಮೇಲೆ ಇಲ್ಲೆಲ್ಲಾ ಇದನ್ನ ದೊಡ್ಡ ವಿಷಯ ಮಾಡದೇ ಎಷ್ಟುಸಿಂಪಲ್ಲಾಗಿ ತೆಗೆದುಕೊಳ್ಳುತ್ತಾರೆ ನೋಡು. ಹದಿಹರೆಯದಲ್ಲಿ ಮಕ್ಕಳಿಗೆ ಓದಿನ ಜೊತೆ ಸೆಕ್ಸ್‌ ಎಜ್ಯುಕೇಷನ್‌ ಸಹಾ ಕೊಟ್ಟು ಸಂಗಾತಿಗಳು ಎಷ್ಟುಮುಖ್ಯ ಎಂದು ಕಲಿಸಿಕೊಡುತ್ತಾರೆ. ನಮ್ಮ ಹರೆಯದಲ್ಲಿ ಅದೆಷ್ಟುಇಮೋಷನಲ್‌ ಫäಲ್ಸ್‌ ಆಗಿಬಿಟ್ಟಿದ್ದೆವು ಅಲ್ವಾ, ಸಿಕ್ಕಾಪಟ್ಟೆ. ಇವಳು ನನ್ನ ಬೆಸ್ಟ್‌ ಫ್ರೆಂಡ್‌, ಅವಳು ಬಿಟ್ಟು ಹೋದರೆ ನನಗೆ ಜೀವನವೇ ಇಲ್ಲ ಎಂದು ಅನ್ನೋದು ಎಲ್ಲಾ ನಂಬಿಕೊಂಡು ಗುಗ್ಗು ತರಹ ಆಡುತ್ತಿದ್ದೆವು.

ಈ ಟೀನೇಜಿನಲ್ಲಿ ನಮಗೆ ಪೀರಿಯಡ್ಸ್‌ ಶುರುವಾಗುವ ಮುಂಚೆ ಸಿಕ್ಕಾಪಟ್ಟೆಕೋಪ ಬರುತ್ತಿತ್ತು. ಅದು ಏನೂ ಅಂತಲೇ ನನಗೆ ಅರ್ಥವಾಗುತ್ತಿರಲಿಲ್ಲ. ಆಮೇಲೆ ಬರುವ ಹೊಟ್ಟೆನೋವಿಗೆ ಹೀಗೆ ಕೋಪ ಬರುತ್ತಿತ್ತು ಎಂದು ಅಂದುಕೊಂಡೆ. ಆಮೇಲೆ ಡಾಕ್ಟರುಗಳು ಅದು ಹಾರ್ಮೋನ್ಸು, ಪಿಎಮ್‌ಎಸ್ಸು ಎಂದೆಲ್ಲಾ ಏನೋ ಹೆಸರು ಕೊಟ್ಟರು. ಹೆಣ್ಣುಮಕ್ಕಳನ್ನ ಕಾಣದಿರುವ ಹಾರ್ಮೋನ್ಸ್‌ ಆಟ ಆಡಿಸುತ್ತದೆ ಎಂದು ನಾನು ಬೈದುಕೊಂಡಿದ್ದೆ. ನನಗೆ ಟೀನೇಜಿನಲ್ಲಿ ಅರ್ಥವಾಗದೇ ಇದ್ದದ್ದು ಇದೊಂದೆ.

ಡಯಟಿಷಿಯನ್ ಪೇಚಿನ ಪ್ರಸಂಗಗಳು; ಗೂಗಲ್ ತಂದೊಡ್ಡುವ ಕಷ್ಟಗಳು! 

ಮಿಕ್ಕ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿಯಾಗಿಯೇ ಕಂಡಿದ್ದು. ನೀನು ಕನ್ನಡಿಯ ಮುಂದೆ ನಿಂತು ಹುಬ್ಬು ತೀಡಿಕೊಳ್ಳುತ್ತಿದ್ದೆ. ಚೆಂದವಾದ ಕಾಡಿಗೆ ಹಚ್ಚುತ್ತಿದ್ದೆ, ತುಟಿಗೆ ಅಮ್ಮನಿಂದ ಕದ್ದ ಕೆಂಪು ಲಿಪ್‌ ಸ್ಟಿಕ್‌ ಇವನ್ನೆಲ್ಲಾ ಹಚ್ಚಿಕೊಂಡು ಇರುತ್ತಿದ್ದೆ. ಏತಕ್ಕೆ ಇವೆಲ್ಲಾ ಎಂದರೆ, ನನ್ನಿಷ್ಟಅನ್ನುತ್ತಿದ್ದೆ. ಈ ನನ್ನಿಷ್ಟಅನ್ನೋದರಿಂದ ನಿನ್ನ ಇಡೀ ಜೀವನವನ್ನು ನಡೆಸುತ್ತಿದ್ದೆ ಎಂಬುದು ನನಗೆ ಅರ್ಥವೇ ಆಗಲ್ಲಿಲ್ಲ. ಅದಕ್ಕೆ ಕೆಲವು ಸಂಬಂಧಗಳು ನಿನ್ನನ್ನ ಘಾಸಿಗೊಳಿಸಿತ್ತು. ಅದಕ್ಕೆ ಎಮೋಷನ್ಸಿನಲ್ಲೇ ಜೀವನ ನಡೆಸಬಾರದು ಎಂದು.

ಒಂದು ಹುಡುಗ ಅದೇ ನಮ್ಮ ಕ್ಲಾಸಿನ ಸಂತು ನಿನಗೆ ಒಂದು ಕೀಚೈನ್‌ ಕೊಟ್ಟು ಪ್ರೇಮ ನಿವೇದಿಸಿಕೊಂಡ. ಅವನು ನಿನ್ನನ್ನ ಮಾತ್ರ ಪ್ರೀತಿಸುತ್ತೇನೆ ಎಂದು ಬೇರೆ ಹೇಳಿದ. ನೀನು ನಿನ್ನ ಕೆನ್ನೆಯನ್ನ ಕೆಂಪೇರಿಸಿಕೊಂಡು ‘‘ವಾವ್‌ ನನ್ನ ಶಾರುಖ್‌ ಖಾನ್‌ ಸಿಕ್ಕ’’ ಎಂದು ಸಿಕ್ಕಾಪಟ್ಟೆಹಚ್ಚಿಕೊಂಡಿದ್ದೆ. ಅವನಿಗೆ ಇಂಟೆನ್ಸ್‌ ಆದ ಪ್ರೇಮ ಪತ್ರಗಳನ್ನ ಬರೆಯುತ್ತಿದ್ದೆ. ಆ ವಯಸ್ಸಿನಲ್ಲಿ ಯಾರು ಅಷ್ಟುಇಂಟೆನ್ಸಾಗಿ ಲವ್‌ ಮಾಡುತ್ತಾರೆ. ನಿನ್ನ ಮನಸ್ಸನ್ನು ಆತನಿಗೆ ತೆರೆದುಕೊಂಡೆ, ಆದರೆ ಆತ ನಿನ್ನನ್ನು ದುರುಪಯೋಗ ಪಡಿಸಿಕೊಂಡ. ಅಷ್ಟುಬೇಗ ಒಬ್ಬರ ಹತ್ತಿರ ನಮ್ಮ ಮನಸ್ಸನ್ನ ಅಷ್ಟುತೆರೆದುಕೊಂಡು ನನ್ನ ಇಂಟ್ಯೂಷನ್‌ ಎಂದು ಏನೇನೋ ಮಾತಾಡಿ, ಆಮೇಲೆ ತಿಂಗಳಾನುಗಟ್ಟಲೆ ಬೇಜಾರು ಮಾಡಿಕೊಂಡು ಇದ್ದೆಯಲ್ಲ ಇದಕ್ಕಿಂತಾ ಹೆಚ್ಚು ಇಮೋಷನ್ಸಿಗೆ ಡ್ರೈವ್‌ ಆಗಿ ಸೋತ ಉದಾಹರಣೆ ಇನ್ನೊಂದಿಲ್ಲ.

ಮಾತುಗಳು ಕಪ್ಪೆ ಚಿಪ್ಪಿನಲ್ಲಿ ಮುತ್ತಾಗಲಿ; ಬೇಡ ಎನ್ನುವ ಪದ ಬೇಡ! 

ಇಡೀ ಟೀನೇಜೆ ಇಮೋಷನ್ಸಿಂದ ಆಗುತ್ತಿದೆ ಎಂದು ಒಂದು ಸಾಲನ್ನು ನೀನು ಒಂದು ಶಾಲೆಯ ಡಿಬೇಟಿನಲ್ಲಿ ಹೇಳೋದಕ್ಕೆ ಶುರು ಮಾಡಿದೆ. ಅದನ್ನ ನಮ್ಮ ಬಯಾಲಜಿ ಗುರುಗಳು ನಕ್ಕು ಹಾಗೆಲ್ಲಾ ಅಲ್ಲ, ಅದು ಒಬ್ಬೊಬ್ಬರ ಮನಸ್ಥಿತಿ ಎಂದು ಹೇಳಿದ್ದರು. ಆದರೆ ಟೀನೇಜಿನಲ್ಲಿ ನಮ್ಮ ಎಮೋಷನ್ಸ್‌ ನಮ್ಮನ್ನ ಡ್ರೈವ್‌ ಮಾಡಿ ಅದೆಷ್ಟೆಲ್ಲಾ ಜೀವನದ ಹಾದಿ ತಪ್ಪಿಸುತ್ತಿತ್ತು. ಹೋಗಿ ಹೋಗಿ ಎಂ ಡಿ ಪಲ್ಲವಿಯ ಹಾಡನ್ನು ಗಣೇಶ ಉತ್ಸವದಲ್ಲಿ ಕೇಳಿ ಬಚ್ಚಲುಮನೆಯಲ್ಲಿ ಅದೇ ಹಾಡನ್ನು ಹಾಡಿ ‘‘ಓಹ್‌ ಎಂತ ಸೂಪರಾಗಿತ್ತು’’ ಎಂದು ನಾವಾಗಿ ನಾವೇ ಅಂದುಕೊಂಡಂಗೆ. ಅಷ್ಟೇ ಅರ್ಥವಾಯಿತು. ಭಾವನೆಗಳು ಬಚ್ಚಲುಮನೆಯ ಅಕೋಸ್ಟಿಕ್ಸ್‌ನ ಹಾಗೆ. ಹೇಗೆ ಹಾಡಿದರು ಸುಮಧುರವಾಗಿ ಕೇಳಿಸುತ್ತದೆ. ನಮ್ಮ

ವಾಯ್‌್ಸನ ಅಸಲಿ ತಾಕತ್ತು ಗೊತ್ತಾಗೋದು ಹೀಗೆ ನಾವು ತೆರೆದಿರುವ ಹಾಲಿನಲ್ಲಿ ಹಾಡಿದಾಗ. ಅಪಶ್ರುತಿಗಳು ನಮ್ಮನ್ನಾಗ ಬಾಧಿಸುತ್ತವೆ. ನಿನ್ನ ಹಾಗೆ ಲವ್ವು ಗಿವ್ವು ಮಾಡಿಕೊಂಡು ನನ್ನ ಅತ್ಯಂತ ಒಳ್ಳೆಯ ಬರಹದ ಸಾಲುಗಳನ್ನ ಯಾವುದೋ ಯಕಃಶ್ಚಿತ್‌ ಹುಡುಗನ ಮೇಲೆ ಬರೆದು ದಂಡ ಮಾಡಿಕೊಳ್ಳಲ್ಲಿಲ್ಲ.

ದುಬೈನಲ್ಲಿ ಕನ್ನಡ ಕಂಪು...! ವಾರದ ರಜೆಯಲ್ಲಿ ಕುಳಿತು ಕನ್ನಡ ಕಲೀತಾರೆ ಪುಟ್ಟ ಮಕ್ಕಳು 

ನನ್ನ ನಿನ್ನ ಮುಖದ ಮೇಲೆ ಸಿಕ್ಕಾಪಟ್ಟೆಪಿಂಪಲ್ಸ್‌ ಬರುತ್ತಿತ್ತು. ನಮ್ಮ ಸ್ಕೂಲ್‌ ಫ್ರೆಂಡ್‌ ವರ್ಷಾ, ನಾನು ಮಾತ್ರ ಬಿಂದಾಸಾಗಿ ಇರುತ್ತಿದ್ದೆವು. ಹೋಗತ್ತೆ, ಬರತ್ತೆ ನಮಗೇನಾಗಬೇಕು ಎಂದು. ಆದರೆ ಪಿಂಪಲ್ಸನ್ನು ನಮ್ಮ ಸೀನಿಯರ್ಸ್‌ ನಮ್ಮ ಸೌಂದರ್ಯಕ್ಕೆ ಮಾರಕ ಎಂದೆಲ್ಲಾ ಹೇಳುತ್ತಿದ್ದರು. ಚಿನ್ಮಯಿ ಅಕ್ಕ ಹಾಗೆ ಹೇಳಿದ್ದನ್ನು ನೀನು ಎಷ್ಟುಸೀರಿಯಸ್ಸಾಗಿ ತೆಗೆದುಕೊಂಡೆ ಎಂದರೆ ಅದೇನೇನೋ ಬ್ಯೂಟಿ ಟ್ರೀಟ್ಮೆಂಟೆಲ್ಲಾ ಆಯ್ತು. ಆಮೇಲೆ ನಿನಗೆ ಗೊತ್ತಾಯಿತು ಅದೆಲ್ಲಾ ಅದರ ಪಾಡಿಗೆ ಅದು ಹೋಗುತ್ತದೆ ಅಂತ. ನಾವು ತೀರ ಭಾವನಾತ್ಮಕವಾಗಿ ಯೋಚಿಸಿದಾಗ ಲಾಜಿಕ್‌ ಕಳೆದುಕೊಳ್ಳುತ್ತೇವೆ. ಅದೂ ನಿನಗೆ ಈಗಲಾದರೂ ಗೊತ್ತಾಗಿದೆ ಎಂದು ಭಾವಿಸುತ್ತೇನೆ.

ಇಂತಿ ನಿನ್ನ

ಲಿಪಿ

ಅಕ್ಕರೆಯ ಲಿಪಿ,

ಮುದ್ದು ಲಿಪಿ, ಅಮ್ಮನಿಗೂ ಮತ್ತು ಮಕ್ಕಳಿಗೂ ಖಾಸಗಿಯಾದ ವಿಷಯಗಳು ಯಾವುದ್ಯಾವುದಿರುತ್ತವೆ? ಅಮ್ಮನ ಖಾಸಗಿ ವಿಚಾರ ಮಕ್ಕಳು, ಮಕ್ಕಳ ವಿಚಾರ ಅಮ್ಮ ಪರಸ್ಪರ ಹೇಳದೆಯೇ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಅದು ಕರುಳ ಬಳ್ಳಿಯ ನಂಟು, ಅದು ಹೃದಯಗಳನ್ನು ಬೆಸೆದಿರುತ್ತದೆ, ಅಮ್ಮನಿಗೆ ಹೇಳದೆಯೇ ಯಾಕೆ ವಿಚಾರಗಳು ಅರಿವಾಗುತ್ತದೆ ಹೇಳು? ಈ ಜಗತ್ತಿನ ಎಲ್ಲಾ ಸಂಬಂಧಗಳು ನಿಂತಿರೋದೇ ಭಾವನೆಗಳಿಂದ. ನಾನು ನೀನು ಸಹ ಇರೋದೆ ಹೀಗೆ.

ಎಂಪಥಿಯು ಭಾವದ ಭಾಗವೇ ಅಲ್ವಾ ಲಿಪಿ? ನಾವು ಇನ್ನೊಬ್ಬರ ಜಾಗದಲ್ಲಿ ನಿಂತು ಅವರ ಹಿತಕ್ಕಾಗಿ ಯೋಚಿಸೋದು, ಅದು ಒಂದು ಭಾವನೆಯೇ ಸರಿ, ನೀನು ಪ್ರಾಕ್ಟಿಕಲ್‌ ಪ್ರಾಕ್ಟಿಕಲ್‌ ಎಂದು ಭಾವನೆಗೆಳಿಗೆ ತಿಲಾಂಜಲಿ ಇಡುವ ಕೆಲಸ ಮಾಡುತ್ತಿದ್ದೀಯ. ಅದು ಸಮಂಜಸವಲ್ಲ. ಹಾಗೆ ಮಾಡುವುದು ನಿನಗೆ ಭಾರವಾಗುತ್ತದೆ ಲಿಪಿ. ಯೋಚಿಸು.

ಕನ್ನಡಪ್ರಭ ದೀಪಾವಳಿ ವಿಶೇಷಾಂಕ ಇ-ಪೇಪರ್ ಆವೃತ್ತಿಯೂ ಲಭ್ಯ 

ಟೀನೇಜಿನಂತಹ ಮಸೂಮ್‌ ದಿನಗಳು ಇನ್ನ್ಯಾವುದೂ ಇಲ್ಲ. ಅಲ್ಲಿ ಯಾವುದೇ ಅಪೇಕ್ಷೆ ಇಲ್ಲದೇ ಪ್ರೀತಿ ಮಾಡಿರುತ್ತೇವೆ, ಯಾವುದ್ಯಾವುದನ್ನೋ ಹಚ್ಚಿಕೊಂಡಿರುತ್ತೇವೆ. ಅವು ನಮಗೆ ಮುದ ನೀಡುತ್ತವೆ. ಏನೇ ಹೇಳು ಮೊದಲ ಪ್ರೀತಿಯ, ಆ ಕ್ರಷ್‌ನ ಅನುಭವ ನಮಗೆ ಬರುವುದು ಆಗಲೇ ಅಲ್ಲಾ$್ವ? ಆ ಅನುಭವ ನಮ್ಮನ್ನು ಒಂದು ಹೊಸ ಕಲಿಕೆಗೆ ಎಡೆ ಮಾಡುತ್ತದೆ. ನಮ್ಮ ಬ್ರೈನಿನಲ್ಲಿ ಅದೆಷ್ಟುಎಂಡಾರ್ಫಿನ್ಸ್‌ ರಿಲೀಸ್‌ ಮಾಡುತ್ತದೆ ನೋಡು.

ಖಲೀಲ್‌ ಗಿಬ್ರಾನ್‌ ತನ್ನ ಪ್ರೇಯಸಿಗೆ ಪ್ರೇಮಪತ್ರಗಳನ್ನು, ಕವನಗಳನ್ನೂ ಬರೆದಿದ್ದಾನೆ. ಡಾ ಎಚ್‌ ಎಸ್‌ ಅನುಪಮಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದರಲ್ಲಿ ಒಂದಷ್ಟುಸಾಲುಗಳನ್ನ ಬರೆದಿದ್ದಾರೆ. ನಿನಗಾಗಿ ಇದು,

‘‘ಪ್ರೇಮವು ನಿನ್ನ ಕರೆದರೆ ಹಿಂಬಾಲಿಸು, ಅದು ಕಷ್ಟದ ಕಡಿದಾದ ದಾರಿಯಾದರೂ ಸಹ ಅದರ ರೆಕ್ಕೆಗಳು ನಿನ್ನ ಸುತ್ತುವರಿದಾಗ ಶರಣಾಗು, ರೆಕ್ಕೆ ತುದಿಯಲಡಗಿದ ಕತ್ತಿ ನಿನ್ನ ಗಾಯಗೊಳಿಸಬಹುದಾದರೂ ಸಹಾ’’.

ಈ ಪದ್ಯದಲ್ಲಿ ಗಿಬ್ರಾನ್‌ ಏನು ಹೇಳುತ್ತಾನೆ ಪ್ರೇಮಕ್ಕೆ ಅಷ್ಟುದೈವಿಕವಾದ ಶಕ್ತಿಇದೆ ಅದು ಸಿಕ್ಕಾಗ ನಾವು ಜಾಸ್ತಿ ಯೋಚಿಸದೇ ಮುಂದುವರೆಯುತ್ತೀವಿ ಅಲ್ವಾ? ನಿನ್ನ ಹಾಗೆ ಪ್ರಾಕ್ಟಿಕಲ್ಲಾಗಿ ಯೋಚಿಸಿದ್ದರೆ ಕಡಿದಾದ ಹಾದಿಯನ್ನು ತುಳಿಯುತ್ತಿರಲೇ ಇರಲಿಲ್ಲ ಅಥವಾ ಗಾಯ ಮಾಡುತ್ತದೆ ಎಂದಾದರೂ ನಾವು ಯಾಕೆ ಆ ಜಾಗಕ್ಕೆ ಹೋಗುತ್ತೇವೆ ಎಂಬ ಪ್ರಶ್ನೆ ನಿನ್ನ ಹಾಗೆ ಯೋಚಿಸುವವರಿಗೆ ಬರುತ್ತದೆ.

ಒಸಾಟ್‌ ಕಟ್ಟಿದ ಶಾಲೆಗಳು ಐವತ್ತು; ಒಂದು ಸಲಕ್ಕೆ ಒಂದು ಶಾಲೆ ಯೋಜನೆಯ ಯಶಸ್ವೀ ಕಾರ್ಯಾಚರಣೆ! 

Whaಠಿ ಜಿs ಠಿಛಿಛ್ಞಿaಜಛಿ ಡಿಜಿಠಿhಟ್ಠಠಿ ್ಝಟvಛಿ? ಠಿಛ್ಝ್ಝಿ ಞಛಿ? ಆ ವಯಸ್ಸಿನಲ್ಲಿ ಇಂಥದನ್ನೆಲ್ಲ ಅನುಭವಿಸದ ಥ್ರಿಲ್‌ ಇಲ್ಲದಿದ್ದರೆ ನಮ್ಮ ಭಾವನೆಗಳು ಬೆಳೆಯೋದೆ ಇರೋದಿಲ್ಲ. ನಿನಗೆ ಈ ಫÜಸ್ಟ್‌ ಲವ್‌ ಅಷ್ಟುಗಾಢವಾಗಿ ಆಗದೇ ಇದ್ದಿದ್ದಕ್ಕೆ ಪ್ರೇಮ ಪ್ರೀತಿ ಒಂದು ಲೆಕ್ಕಾಚಾರದ ಉತ್ತರ ಎಂದು ಭಾವಿಸಿರುವುದು. ಅಲ್ವಾ ಲಿಪಿ? ಹೀಗೆ ಮಾಡಿದರೆ ಹಾಗೆ ಆಗುತ್ತದೆ ಎಂಬ ಯಾವ ಯೋಚನೆಯನ್ನೂ ನಾವು ಟೀನೇಜಿನಲ್ಲಿ ಮಾಡೋದೆ ಇಲ್ಲ ಅಲ್ವಾ...

ನಾವು ಭಾವನೆಗಳನ್ನ ನಂಬಿ ತಪ್ಪೇ ಮಾಡದಿದ್ದರೆ ಜೀವನದ ಪಾಠ ಹೇಗೆ ಸಿಗುತ್ತದೆ ಹೇಳು? ರೂಮಿಯ ಪದ್ಯಗಳನ್ನ ಓದುತ್ತಿದ್ದೆ. ಇದನ್ನ ಇಂಗ್ಲಿಷಿನಲ್ಲೇ ಬರೆದರೆ ಚೆನ್ನಾಗಿರೋದಿಲ್ಲ ಆದರೆ ಅದನ್ನ ಕನ್ನಡದಲ್ಲಿ ಬರೆಯಲು ಸ್ವಲ್ಪ ಪ್ರಯತ್ನ ಮಾಡುತ್ತೇನೆ ನಿನಗೆ ಹೇಳೋದಕ್ಕೆ

‘‘ಯಾವುದೋ ಒಂದು ಮುತ್ತಿಗೆ ನಾವು ಜೀವನವಿಡೀ ಕಾಯುತ್ತೇವೆ, ಒಂದು ಸ್ಪರ್ಶ, ದೇಹದೊಂದು ಸ್ಪಿರಿಟ್ಗೋಸ್ಕರ; ಸಮುದ್ರದ ನೀರು ಕಪ್ಪೆಚಿಪ್ಪಿಗೆ ಮುತ್ತಿಗೋಸ್ಕರ ತನ್ನನ್ನು ತಾನೇ ಮುರಿದುಕೊಳ್ಳಲಿ ಎಂಬಷ್ಟೇ ಕಾತುರತೆಯೊಂದಿಗೆ ’’

ನನ್ನಿಷ್ಟಅನ್ನೋದು ನಮ್ಮ ಜೀವನವನ್ನು ಕಾಯುತ್ತದೆ. ಇದು ಸರಿ ಅದು ಸರಿ ಎಂದು ಜೀವನ ನಡೆಸಿದರೆ ನಮಗ್ಯಾವುದು ಸರಿ ಎಂಬುದೇ ಮರೆತುಹೋಗುತ್ತದೆ. ಪದ್ಯ ಬರೆದು ಕವಿಶೈಲದಲ್ಲಿ ಕೂರುವುದು ನನ್ನಿಷ್ಟಅನ್ನುವ ಅನುಭವ ನಾಳೆ ಆಸ್ಪತ್ರೆಯ ಬೆಡ್ಡಿನಲ್ಲಿ ಮಲಗಿದಾಗ ನೆನಪಿಗೆ ಬರುವುದೇ? ಅದಕ್ಕೋಸ್ಕರವೇ ನಾವು ಜೀವನ ಹಿಡಿದಿಟ್ಟುಕೊಳ್ಳುತ್ತೇವೆ, ನನ್ನ ಅತ್ಯಂತ ಒಳ್ಳೆಯ ಪ್ರತಿಭಾನ್ವಿತ ಸಾಲುಗಳನ್ನು ನಾನು ಒಂದು ಹುಡುಗನ ಮೇಲೆ ದಂಡ ಮಾಡಲಿಲ್ಲ, ಅದರ ಬದಲಾಗಿ ಉತ್ಕಟ ಪ್ರೇಮದ ಪರಾಕಾಷ್ಟೆಯನ್ನು ತಲುಪಿದೆ. ಈ ಮಾತುಗಳನ್ನು ಕೇಳಿ ನಗಬೇಡ.

ನಮ್ಮ ಇಂದ್ರಿಯದ ಶಕ್ತಿ ಬಹಳ ನಿಗೂಢವಾದ್ದದ್ದು. ಅದರ ಚಟುವಟಿಕೆಗಳು ನಮಗೆ ತಿಳಿದಿಲ್ಲ. ಅದನ್ನ ನಾವು ತಿಳಿದುಕೊಳ್ಳಲಿ, ಬಿಡಲಿ ಅದು ನಮ್ಮನ್ನು ಹೇಗೋ ಆಟ ಆಡಿಸುತ್ತಲೇ ಇರುತ್ತದೆ. ನಾವು ಅದರ ದಾಸರು. ಅದು ಆಡಿಸಿದಂತೆ ನಾವು ಆಡಬೇಕು. ಆ ಭಾವಗಳು ಯಾಕೆ ಉತ್ಪತ್ತಿಯಾಗುತ್ತವೆ ಎಂದು ನಾವೆಷ್ಟೇ ಸೈನ್ಸ್‌ ಮಾತಾಡಿದರು ಅದು ಕೊಡುವ ಅನುಭವ ದೊಡ್ಡದು..

ನೀನು ಇದನ್ನ ಒಪ್ಪುವುದಿಲ್ಲ, ಆದರೆ ಅದಕ್ಕೆ ಇನ್ನ್ಯಾವ ಲಾಜಿಕ್‌ ಹುಡುಕಲಿ ಹೇಳು? ಟೀನೇಜ್‌ ಬಹಳ ಅಂದವಾಗಿರುವುದು ಇವೆಲ್ಲಾ ಭಾವನೆಗಳ ಏರಿಳಿತ ಇರುವುದಕ್ಕೆ. ಅದು ಬಿಟ್ಟು ಬರೀ ಗೋಲ್‌ ಓರಿಯೆಂಟೆಡಾಗಿ ನನಗೆ ಪೈಥಾನ್‌ ಬರುತ್ತದೆ ಎಂದು ಕ್ಲಾಸಿನಲ್ಲಿ ಕೂತು ಒಂದು ಅಪ್ಲಿಕೇಷನನ್ನ ಬಿಲ್ಡ… ಮಾಡುವುದಾ? ಸಾಧ್ಯವೇ ಇಲ್ಲ. ಅಥವಾ ಇವನು ನನ್ನನ್ನು ಚೆನ್ನಾಗಿ 10 ವರ್ಷಗಳ ನಂತರ ನೋಡಿಕೊಳ್ಳುತ್ತಾನಾ ಎಂಬ ಅಂದಾಜಿನಿಂದಲಾ?

ನಮ್ಮ ಜೀವನದ ಅತ್ಯಂತ ಬೆಚ್ಚಗಿನ ಅನುಭವದ ದಿನಗಳು ಈ ಹದಿಹರೆಯ. ಅಲ್ಲಿ ನಡೆದ ಅದೆಷ್ಟುಸಂಭಾಷಣೆಗಳು ಮತ್ತು ವಿಷಯಗಳು ನಮ್ಮ ಜೀವನ ಇಡೀ ಕಾಯುತ್ತವೆ. ಅಲ್ವಾ?

ನಿನ್ನ

ಲಿಖಿತಾ