Asianet Suvarna News Asianet Suvarna News

'ಜೊತೆ ಜೊತೆಯಲಿ'ಗೆ ಗುಡ್ ಬೈ ಹೇಳಿದ ಮೇಘಾ ಶೆಟ್ಟಿ; ಅನು ಪಾತ್ರಕ್ಕೆ ಇನ್ಯಾರು ಗತಿ?

ಜೊತೆ ಜೊತೆಯಲಿ ಧಾರಾವಾಹಿಗೆ ಗುಡ್‌ ಬೈ ಹೇಳಿದ ನಟಿ ಮೇಘಾ ಶೆಟ್ಟಿ. ಅನು ಪಾತ್ರಕ್ಕೆ ಸೂಟ್‌ ಆಗುವ ನಟಿ ಹುಡುಕಾಟ ಶುರು. 
 

Megha Shetty walks out of zee kannada jothe jotheyalli daily soap vcs
Author
Bangalore, First Published Jul 10, 2021, 11:35 AM IST

ಕಿರುತೆರೆ ಲೋಕದ ಜನ ಮೆಚ್ಚಿದ ಧಾರಾವಾಹಿ 'ಜೊತೆ ಜೊತೆಯಲಿ'. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಮತ್ತು ಅರ್ಯವರ್ಧನ್ ಕಾಂಬಿನೇಷನ್‌ ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯರಿಗೂ ಸಖತ್ ಇಷ್ಟವಾಗಿದೆ. ಅದರಲ್ಲೂ ಆರಂಭದಲ್ಲಿ ಜೊತೆ ಜೊತೆಯಲಿ ಟಿಆರ್‌ಪಿ ಗಗನ ಮುಟ್ಟಿತ್ತು. ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಗೂ ಜನಪ್ರಿಯತೆ ಸಿಕ್ಕಿತ್ತು ಹಾಗೂ ಇನ್ನಿತರ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಪಡೆದುಕೊಂಡರು.

ಇದೀಗ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಉರ್ಫ್ ಮೇಘಾ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಮೇಘಾ ಶೆಟ್ಟಿ ಕೊನೆಯ ಸಂಚಿಕೆಯ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಮೇಘಾ ಶೆಟ್ಟಿ ಅಭಿನಯಿಸಿರುವ ಎಪಿಸೋಡ್‌ಗಳು ಪ್ರಸಾರವಾಗಲಿವೆ. ಈ ಅವಧಿಯಲ್ಲಿ ಜೊತೆ ಜೊತೆಯಲಿ ತಂಡ ಅನು ಸಿರಿಮನೆ ಪಾತ್ರಕ್ಕೆ ಹೊಸ ಕಲಾವಿದೆಯ ಹುಡುಕಾಟ ಶುರು ಮಾಡಿದೆ. 

Megha Shetty walks out of zee kannada jothe jotheyalli daily soap vcs

ವೈಯಕ್ತಿಕ ಹಾಗೂ ಸಿನಿಮಾ ಕಾರಣಗಳಿಂದ ಮೇಘಾ ಶೆಟ್ಟಿ ಧಾರಾವಾಹಿ ಬಿಟ್ಟು ಬಂದಿರುವ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಕೆಲವೊಂದು ಟ್ರೋಲ್ ಪೇಜ್‌ಗಳಲ್ಲಿ ಅನು- ಆರ್ಯ ಕಾಂಬಿನೇಷನ್‌ ಬಗ್ಗೆ ದೊಡ್ಡ ಚರ್ಚೆಯೇ ಆಗಿತ್ತು. ಹಿಟ್ ತಂದುಕೊಟ್ಟ ಪ್ರಾಜೆಕ್ಟ್‌ನಿಂದ ಯಾಕೆ ಹೊರ ಬಂದಿದ್ದು ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮೇಘಾ ಶೆಟ್ಟಿಯಾಗಲಿ ಅಥವಾ ಧಾರಾವಾಹಿ ತಂಡದಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ. 

ಬೀದಿ ನಾಯಿಗೆ ಆಸರೆಯಾದ 'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ!

ಸೋಷಿಯಲ್ ಮೀಡಿಯಾದಲ್ಲಿ ಸಹೋದರಿ ಜೊತೆ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.  ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆ 'ನೋಡು ಶಿವ' ಎಂಬ Rap ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು.

Follow Us:
Download App:
  • android
  • ios