ಬೀದಿ ನಾಯಿಗೆ ಆಸರೆಯಾದ 'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ!
ತಮ್ಮ ರಸ್ತೆಯಲ್ಲಿರುವ ಬೀದಿ ನಾಯಿಗಳಿಗೆ ನಟಿ ಮೇಘಾ ಶೆಟ್ಟಿ ಆಸರೆಯಾಗಿದ್ದಾರೆ. ನೀವೂ ಆಸರೆ ಆಗುತ್ತೀರಾ ಅಲ್ವಾ?
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ಮೇಘಾ ಶೆಟ್ಟಿ ಇದೀಗ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಸಿನಿ ಜರ್ಮಿ ಆರಂಭಿಸಿದ್ದಾರೆ. ಕೊರೋನಾ ಲಾಕ್‌ಡೌನ್ ಇರುವ ಕಾರಣ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ನಡುವೆಯೂ ಮಾನವೀಯ ಕೆಲಸಕ್ಕೆ ಮುಂದಾಗಿದ್ದಾರೆ.
ಲಾಕ್‌ಡೌನ್ ಸಂಕಷ್ಟ ಮನುಷ್ಯರಿಗೆ ಮಾತ್ರವಲ್ಲ. ಬೀದಿ ನಾಯಿಗಳಿಗೂ ತೊಂದರೆ ಆಗುತ್ತಿದೆ. ಆಹಾರವಿಲ್ಲದೆ ಒದ್ದಾಡುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಅದೆಷ್ಟೋ ಶ್ವಾನ ಪ್ರೇಮಿಗಳು ರಸ್ತೆಗಿಳಿದು ಅವುಗಳಿಗೆ ಅನ್ನ ನೀಡುತ್ತಿದ್ದಾರೆ. ಈ ಸಮಯದಲ್ಲಿ ನಟಿ ಮೇಘಾ ಶೆಟ್ಟಿ ಕೂಡ ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ.
ಕೆಲವು ಮೂಲಕಗಳ ಪ್ರಕಾರ ಮೇಘ ಶೆಟ್ಟಿ ತಮ್ಮ ರಸ್ತೆಯಲ್ಲಿರುವ ನಾಯಿಗಳಿಗೆ ದಿನ ನಿತ್ಯ ಆಹಾರ ಒದಗಿಸುತ್ತಿದ್ದಾರೆ. ಕಠಿಣ ಲಾಕ್‌ಡೌನ್ ಇರುವ ಕಾರಣ ತಮ್ಮ ರಸ್ತೆಯಲ್ಲಿರುವ ಶ್ವಾನಗಳಿಗೆ ಮಾತ್ರ ಸೇವೆ ಮಾಡಲು ಸಾಧ್ಯವಾಗುತ್ತಿದೆ. ಕಳೆದ ವರ್ಷವೂ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಿದ್ದಾರೆ ಇವರು. ಸೆಲೆಬ್ರಿಟಿ ಮಾಡುತ್ತಿರುವ ಸೇವೆ ಮೆಚ್ಚಿಕೊಂಡ ಅದೆಷ್ಟೋ ಸಾಮಾನ್ಯರೂ ಸ್ಫೂರ್ತಿ ಪಡೆದು, ಸೇವೆಗೆ ಮುಂದಾಗಿದ್ದಾರೆ.
ಜೊತೆ ಜೊತೆಯಲಿ ಅನು ಸಿರಿಮನೆಯಿಂದ ನಟ ಗಣೇಶ್‌ಗೆ ನೆಗಡಿ, ಕೆಮ್ಮು!
ನಟಿ ರಚಿತಾ ರಾಮ್ ಹಾಗೂ ಆರ್‌ಜೆ ಮಯೂರ್ ಕೂಡ ಮೈಸೂರಿನಲ್ಲಿರುವ ಶ್ವಾನಗಳಿಗೆ ಆಹಾರ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.