ವಿಲನ್ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ರಾಧಿಕಾ ಮತ್ತು ನಟ ಶ್ರವಂತ್ ಕುಟುಂಬಕ್ಕೆ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಇಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. 

ಕುಟುಂಬಕ್ಕೆ ಪುಟ್ಟ ಕಂದಮ್ಮನ ಬರ ಮಾಡಿಕೊಳ್ಳುತ್ತಿರುವ ಕಿರುತೆರೆ ನಟಿ ರಾಧಿಕಾ ಹಾಗೂ ನಟ ಶ್ರವಂತ್! 

'Its a Girl. ನಿಮ್ಮಲ್ಲರ ಪ್ರೀತಿ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. 20.11.2020. ನಮ್ಮ ಪುತ್ರಿಯನ್ನು ಬರ ಮಾಡಿಕೊಂಡಿದ್ದೀವಿ' ಎಂದು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಗರ್ಭದಲ್ಲಿದ್ದಾಗ ಮಾಡಿಸಿದ್ದ ಗರ್ಭದ ಸ್ಕ್ಯಾನ್‌ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿಯ  ಪ್ರೆಗ್ನೆಂನ್ಸಿ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

 

ರಾಧಿಕಾ ಹಾಗೂ ಶ್ರವಂತ್ ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. 2020ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ವಿಲನ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ರಾಧಿಕಾ, ಧಾರಾವಾಹಿಯಿಂದ ಹೊರ ಬಂದಿದ್ದರು. ನಟನೆ ಜೊತೆಗೆ ಶ್ರವಂತ್ ನಿರ್ದೇಶನ ಮಾಡುತ್ತಾರೆ. ಇತ್ತೀಚಿಗೆ ಮುಕ್ತಾಯವಾದ ರಂಗನಾಯಕಿ ಧಾರಾವಾಹಿ ನಿರ್ದೇಶನ ಮಡುತ್ತಿದ್ದರು ಶ್ರವಂತ್.