Asianet Suvarna News Asianet Suvarna News

ದೇಗುದಲ್ಲಿ ಫೋಟೋಶೂಟ್ ಮಾಡಿಸಿದ ಕಿರುತೆರೆ ನಟಿ ನಿಮಿಷಾ ಬಂಧನ!

ದೇಗುಲದಲ್ಲಿ ಫೋಟೋಶೂಟ್ ಮಾಡಿಸಿದ ಕಿರುತೆರೆ ನಟಿ ನಿಮಿಷಾ ಬಿಜೋ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ.

Malayalam tv actress Nimisha accused of violating temple custom vcs
Author
Bangalore, First Published Sep 14, 2021, 4:49 PM IST
  • Facebook
  • Twitter
  • Whatsapp

ನಟಿ ಮಣಿಯರು ಹಾಗಾಗ ಫೋಟೋ ಶೂಟ್ ಮಾಡಿಸುವುದು ಈಗಿನ ದಿನಗಳಲ್ಲಿ ತುಂಬಾನೇ ಕಾಮನ್. ಡಿಫರೆಂಟ್ ಆಗಿ ಟ್ರೈ ಮಾಡಬೇಕು ಎಂದು ವಿವಿಧ ಸ್ಥಳಗಳಲ್ಲಿ, ವಿವಿಧ ಲುಕ್‌ಗಳಲ್ಲಿ ಮಿಂಚುತ್ತಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇದರಿಂದ ಮಲಯಾಳಂ ನಟಿ ಸಂಕಷ್ಟದಲ್ಲಿದ್ದಾರೆ....

ಲೇಟೆಸ್ಟ್ ಶೂಟ್‌ನಲ್ಲಿ ಕರಿಮಣಿ ಧರಿಸಿದ ಪ್ರಿಯಾಂಕ ಚೋಪ್ರಾ

ಹೌದು! ಮಲಯಾಳಂನ ಖ್ಯಾತ ಕಿರುತೆರೆ ನಟಿ  ನಿಮಿಷಾ ಬಿಜೋ ಕೆಲವು ದಿನಗಳ ಹಿಂದೆ ಕೇರಳದ ಪಥನಂತಿಟ್ಟ ಜಿಲ್ಲೆಯ ಅರಣ್‌ಮುಲಾ ದೇವಾಲಯದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ದೇಗುಲದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ದೇವಾಲಯ ಸಮಿತಿಯವರು ದೂರು ನೀಡಿದ್ದರು. ಈ ಆಧಾರದ ಮೇಲೆ ನಟಿ ಹಾಗೂ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 

Malayalam tv actress Nimisha accused of violating temple custom vcs

ದೇಗುಲದಲ್ಲಿ ಪಲಿಯೋಡಮ್ ಎಂಬ ದೋಣಿಯ ಮೇಲೆ ಕುಳಿತು ಫೋಟೋ ತೆಗೆದುಕೊಂಡಿದ್ದಾರೆ. ಪಲಿಯೋಡಮ್ ಒಂದು ಹಾವಿನ ರಚನೆಯ ದೋಣಿ ಆಗಿದ್ದು, ಇವುಗಳನ್ನು ಪಂಪಾ ನದಿಯಲ್ಲಿ ದೇವರ ಉತ್ಸವ ಮಾಡಲು ಬಳಸುತ್ತಾರೆ.  ಈ ಪಲಿಯೋಡಮ್‌ ಮೇಲೆ ಮಹಿಳೆಯರು ಹತ್ತುವಂತಿಲ್ಲ ಅದರಲ್ಲೂ ಶೂ ಧರಿಸಿಕೊಂಡೇ ಈ ನಟಿ ಹತ್ತಿದ್ದಾರೆ. ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪೊಲೀಸರು ಬಂಧಿಸಿದ ಕೆಲವೇ ನಿಮಿಷಗಳಲ್ಲಿ ಜಾಮೀನು ಪಡೆದುಕೊಂಡು ಇಡೀ ತಂಡ ಹೊರಗೆ ಬಂದಿದೆ.

Follow Us:
Download App:
  • android
  • ios