ಹೀಟ್‌ನಿಂದ 7 ಸಾರಿ ಅಬಾರ್ಷ್ ಆಗಿತ್ತು; ತಾಯಿ ಕಷ್ಟ ನೆನೆದು ಭಾವುಕಾರದ ಸುಶ್ಮಿತಾ

ನಿಜ ಜೀವನದಲ್ಲಿ ಯಾರು ಸೂಪರ್ ಸ್ಟಾರ್ ಎಂದು ಪ್ರಶ್ನೆ ಮಾಡಿದಾಗ ಸುಶ್ಮಿತಾ ಏನು ಹೇಳಿದ್ದಾರೆ? ಅಪ್ಪ-ಅಮ್ಮ ಎದುರಿಸಿದ ಕಷ್ಟ ಎನು ಗೊತ್ತಾ?

Majabharatha Sushmitha talks about mother love in Suvarna Super star with Shalini Sathyanarayan vcs

ಕನ್ನಡ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು 2 ರಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಸದ್ಯ ದಾಂಪತ್ಯ ಜೀವನ ಎಂಜಾಯ್ ಮಾಡುತ್ತಿದ್ದಾರೆ. ರಿಯಾಲಿಟಿ ಶೋನಲ್ಲಿದ್ದಾಗ ಜಗಪ್ಪ ಮತ್ತು ಸುಶ್ಮಿತಾ ಪ್ರೀತಿಸುತ್ತಿದ್ದರು, ಹಲವು ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ತಮ್ಮ ಜೀವನದ ರಿಯಲ್ ಸ್ಟಾರ್ ಯಾರೆಂದು ರಿವೀಲ್ ಮಾಡಿದ್ದಾರೆ. 

'ನನ್ನ ಜೀವನದ ರಿಯಲ್ ಸೂಪರ್ ಸ್ಟಾರ್ ಅಂದ್ರೆ ಅಮ್ಮ. ತಂಗಿ ಮತ್ತು ನನ್ನನ್ನು ತುಂಬಾ ಕಷ್ಟ ಪಟ್ಟು ಸಾಕಿದ್ದಾರೆ. ನನ್ನ ತಂಗಿ ಮತ್ತು ನನ್ನ ನಡುವೆ 10 ವರ್ಷ ವ್ಯತ್ಯಾಸವಿದೆ. ಸಮಯ ತೆಗೆದುಕೊಂಡು ಪ್ಲ್ಯಾನ್ ಮಾಡಿಲ್ಲ ಆದರೆ ಅದಕ್ಕೂ ಮುನ್ನ ಅಮ್ಮ 7 ಅಬಾರ್ಷನ್ ಆಗಿದೆ. ಇದಕ್ಕೆ ಕಾರಣ ಅಮ್ಮ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ...ಆಲ್ಫಾ ಕಂಪನಿ ಅದಾಗಿದ್ದು ಹೆಣ್ಣು ಮಕ್ಕಳಿಗೆ ಸ್ವಲ್ಪ ವಿರೋಧವಾದ ಕೆಲಸ ಅಂದ್ರೆ ತಪ್ಪಾಗಲ್ಲ. ಆಫೀಸ್‌ ಕೆಲಸ ಕೊಟ್ಟರೆ ಚೆನ್ನಾಗಿರುತ್ತದೆ ಆದರೆ ಫ್ಯಾಕ್ಟರಿ ಔಟ್‌ಲೆಟ್‌ನಲ್ಲಿ ಕೊಟ್ಟರೆ ಕಷ್ಟ ಆಗುತ್ತದೆ ಅಲ್ಲಿ ತುಂಬಾ ಹೀಟ್‌ ಆಗುವಂತ ಜಾಗ. ನಮ್ಮ ತಂದೆ ತಾಯಿ ನಿಜಕ್ಕೂ ಗ್ರೇಟ್‌ ಏಕೆಂದರೆ ನಾವು ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಯೋಚನೆ ಮಾಡಿದ್ದೀವಿ...ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ನನ್ನ ಗಂಡ ದುಡ್ಡು ಮಾಡಬೇಕು ಅದನ್ನು ಸೇವ್ ಮಾಡಬೇಕು ಅನ್ನೋ ಯೋಚನೆ ನಮಗಿತ್ತು. ಈಗ ಮಕ್ಕಳ ಮಾಡಿಕೊಳ್ಳುವುದಕ್ಕೆ ಈಗಾಗಲೆ ಒಂದು ಪ್ರೊಸೀಜರ್‌ ಎದುರಿಸಬೇಕು. ಮಕ್ಕಳು ಬೇಕಾ ಬೇಡ್ವಾ ಅನ್ನೋ ಯೋಚನೆಯಲ್ಲಿ ಅರ್ಧ ಜನರು ಇರುತ್ತಾರೆ ಇಂತಹ ಕಾಲ ಈಗ' ಎಂದು ಸುಶ್ಮಿತಾ ಮಾತನಾಡಿದ್ದಾರೆ.

ನೀನು ಬಂದು ಮಲ್ಕೊಂಡ್ರೆನೇ ಜೀವನ: ಲಾಡ್ಜ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮಜಾ ಭಾರತ ಸುಶ್ಮಿತಾ!

'ಆಗ ನನ್ನ ಅಪ್ಪ ಕೆಲಸಕ್ಕೆ ಹೋಗಿ ಸಂಜೆ ಬರುವಾಗ ಅಪ್ಪ ತರುತ್ತಿದ್ದ ಒಂದು ಬಾಳೆ ಹಣ್ಣಿಗೆ ಕಾಯುತ್ತಿದ್ದರು. ಅದೇ ಇಡೀ ದಿನಕ್ಕೆ ನನ್ನ ತಾಯಿ ಊಟ ಆಗಿರುತ್ತಿತ್ತು. ಅಷ್ಟು ಕಷ್ಟದಲ್ಲಿ ನಾವು ಬೆಳೆದು ಬಂದಿರುವುದು. ಆ ಹೀಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ 7 ಅಬಾರ್ಷ್ ಆಗಿತ್ತು. ಏನ್ ಏನೋ ಯೋಚನೆ ಮಾಡುವ ನಾವು ನಿಜಕ್ಕೂ ದಡ್ಡರು ಆದರೆ ಆಗ ಅವನು ಏನೂ ಯೋಚನೆ ಮಾಡದೆ ಜೀವನ ಮಾಡುತ್ತಿದ್ದರು ನಮ್ಮನ್ನು ಬೆಳೆಸಿದ್ದಾರೆ. ಅವರಿಗೆ ತಿನ್ನಲು ಇರುತ್ತೋ ಇಲ್ವೋ ನಮಗೆ ಮಾತ್ರ ಕೊಡಿಸುತ್ತಾರೆ. ಆಗ ಅಮ್ಮ ಧರಿಸುತ್ತಿದ್ದ ಪ್ಲೇನ್‌ ಸೀರೆ ಅದಕ್ಕೆ ಪ್ಲೇನ್ ಬ್ಲೌಸ್‌ ಧರಿಸುತ್ತಿದ್ದರು ಅದನ್ನು ನಾನು ಕಾಪಾಡಿಕೊಂಡು ಅವರ ಹುಟ್ಟುಹಬ್ಬಕ್ಕೆ ಧರಿಸಬೇಕು ಅನ್ನೋ ಆಸೆ ತುಂಬಾ ಇದೆ' ಎಂದು ಸುಶ್ಮಿತಾ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios