ಹೊಸ ರೂಪದಲ್ಲಿ ವೀಕ್ಷಕರನ್ನು ಮನೋರಂಜಿಸಲು ಮಜಾ ಟಾಕೀಸ್‌ಗೆ ಸ್ವಲ್ಪ ಬ್ರೇಕ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಟಾಕ್‌ ಶೋ 'ಮಜಾ ಟಾಕೀಸ್‌'ಗೆ ಸ್ವಲ್ಪ ದಿನಗಳ ಕಾಲ ಬ್ರೇಕ್‌ ಬೀಳಲಿದೆ. ಲೋಕೇಶ್ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್‌ ಜುಲೈ 3 ಮತ್ತು 4ರಂದು ಗ್ರ್ಯಾಂಡ್ ಫಿನಾಲೆ ಮುಗಿಸಿದೆ. 

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್‌ ಮತ್ತು ಲೋಕೇಶ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರಿಗೂ ಸೃಜನ್ ವೇದಿಕೆಯ ಮೇಲೆ ಕರೆದು, ಧನ್ಯವಾದಗಳನ್ನು ತಿಳಿಸಿದ್ದಾರೆ. ಹೊಸ ರೂಪದಲ್ಲಿ ಜನರನ್ನು ಮನೋರಂಜಿಸಲು ಸೃಜನ್ ರೆಡಿಯಾಗುತ್ತಿದ್ದಾರೆ. ಕಾರ್ಯಕ್ರದ ಅಂತ್ಯದಲ್ಲಿ ಉಪೇಂದ್ರ ಡಾ.ರಾಜ್‌ಕುಮಾರ್ ಹೇಳಿದ ಮಾತನ್ನು ನೆನೆದಿದ್ದಾರೆ. 

'ರಾಮ ರಾಜ್ಯ ಬಿಟ್ಟು ವನವಾಸಕ್ಕೆ ಹೋಗುವಾಗ ಎಲ್ಲರೂ ಉಟ್ಟ ಬಟ್ಟೆಯಲ್ಲಿ ಆತನನ್ನು ಹಿಂಬಾಲಿಸುತ್ತಾರೆ. ಅಣ್ಣ ಪಾದುಕೆ ಹಿಡಿದು ರಾಜ್ಯ ನಡೆಸುವೆ ಎಂದು ಭರತ ಹೇಳುತ್ತಾನೆ. ಅಲ್ಲೇ ಅರ್ಥ ಆಗಬೇಕು ರಾಮ ಎಂಥ ಗ್ರೇಟ್ ವ್ಯಕ್ತಿ ಎಂದು. ಈಗ ಎಲ್ಲಕ ಮಾತು ಕೇಳಿದರೆ ನನ್ನ ಸೃಜನ್‌ ಕೂಡ ರಾಮ್ ಅನಿಸುತ್ತಾರೆ,' ಎಂದು ಉಪೇಂದ್ರ ಹೇಳಿದ್ದಾರೆ. ವೀಕ್ಷಕರಿಗೆ ಹಾಗೂ ತಮ್ಮ ತಂಡದವರಿಗೆ ಸೃಜನ್ ಮಂಡಿಯೂರಿ ನಮಸ್ಕರಿಸಿದ್ದಾರೆ.

ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಆರಂಭ! 

ನಟ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇದೀಗ ಯುಟ್ಯೂಬ್ ಚಾನೆಲ್‌ವೊಂದನ್ನು ತೆರೆದಿದ್ದಾರೆ. ರೈಡರ್, ಟ್ರಾವೆಲರ್ ಮತ್ತು ಒಳ್ಳೆಯ ಕುಕ್ ಕೂಡ ಆಗಿರುವ ಸೃಜನ್‌ ತಮ್ಮ ಪ್ರತಿಭೆಗಳ ಅನಾವರಣ ಇಲ್ಲಿ ನಡೆಯಲಿದೆ. ಅಲ್ಲದೆ ನಟಿ ಗಿರಿಜಾ ಲೋಕೇಶ್ ಕೂಡ ಚಿತ್ರರಂಗಕ್ಕೆ ಹಾಗೂ ಜೀವನಕ್ಕೆ ಸಂಬಂಧಿಸಿ ಕಥೆಗಳನ್ನು ಈ ಚಾನೆಲ್‌ನಲ್ಲಿ ಹಂಚಿಕೊಳ್ಳಲಿದ್ದಾರೆ.