Asianet Suvarna News Asianet Suvarna News

ಗೀತಾ ತಲೆಗೇ ಗನ್ ಗುರಿಯಿಟ್ಟ ಭಾನುಮತಿ; ದೇವಿಯಂತೆ ಕಾಪಾಡಿದ ಹೆಣ್ಣು ಹುಲಿ ಮಹತಿ

ಭಾನುಮತಿ ಈಗ ಅರೆಸ್ಟ್ ಆಗಿದ್ದಾಳೆ. ಗೀತಾ ಆಟ ಶುರುವಾಗಿದೆ, ಭಾನುಮತಿ ಆಟವೀಗ ಮುಕ್ತಾಯದ ಹಂತ ತಲುಪಿದೆ. ಮನೆಯವರೆಲ್ಲರೂ ಸೇರಿ ಭಾನುಮತಿಯನ್ನು ಬೈಯುತ್ತಿರಲು ಭಾನುಮತಿ ತನ್ನ ಕುತಂತ್ರ ಬುದ್ಧಿಯನ್ನು ಉಪಯೋಗಿಸಿ ಪಿಸ್ತೂಲ್ ಕೈಗೆ ತೆಗೆದುಕೊಂಡು ಗೀತಾಳನ್ನೇ ಟಾರ್ಗೆಟ್ ಮಾಡಿ ಅವಳ ತೆಲೆಗೇ ಗುಂಡಿಟ್ಟು ಸಾಯಿಸಲು ರೆಡಿಯಾಗಿದ್ದಾಳೆ. 

Mahathi saves geetha from bhanumathi in colors kannada serial geetha srb
Author
First Published Oct 25, 2023, 6:28 PM IST

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ 'ಗೀತಾ' ಸೀರಿಯಲ್ ಈಗ ಬರೋಬ್ಬರಿ 1000 ಎಪಿಸೋಡ್ ತಲುಪಿದೆ. ಈ ಧಾರಾವಾಹಿಯಲ್ಲಿ ಭಾನುಮತಿ ಈಗ ಅರೆಸ್ಟ್ ಆಗಿದ್ದಾಳೆ. ಗೀತಾ ಆಟ ಶುರುವಾಗಿದೆ, ಭಾನುಮತಿ ಆಟವೀಗ ಮುಕ್ತಾಯದ ಹಂತ ತಲುಪಿದೆ. ಮನೆಯವರೆಲ್ಲರೂ ಸೇರಿ ಭಾನುಮತಿಯನ್ನು ಬೈಯುತ್ತಿರಲು ಭಾನುಮತಿ ತನ್ನ ಕುತಂತ್ರ ಬುದ್ಧಿಯನ್ನು ಉಪಯೋಗಿಸಿ ಪಿಸ್ತೂಲ್ ಕೈಗೆ ತೆಗೆದುಕೊಂಡು ಗೀತಾಳನ್ನೇ ಟಾರ್ಗೆಟ್ ಮಾಡಿ ಅವಳ ತೆಲೆಗೇ ಗುಂಡಿಟ್ಟು ಸಾಯಿಸಲು ರೆಡಿಯಾಗಿದ್ದಾಳೆ. ಆದರೆ, ಪಕ್ಕದಲ್ಲೇ ಮಹತಿ ಇರುವುದನ್ನು ಭಾನುಮತಿ ಮರೆತಿದ್ದಾಳೆ. 

ಗೀತಾಳ ತಲೆಗೇ ಗುರಿಯಿಟ್ಟು ಗನ್ ಹಿಡಿದುಕೊಂಡಿರುವ ಭಾನುಮತಿಯನ್ನು ನೋಡಿದ ಮಹತಿ ಸ್ವಲ್ಪ ಬುದ್ಧಿ ಉಪಯೋಗಿಸಿ "ಬೇಡ ಸಿದ್ಧಾಂತ್.. ಎಂದು ಹೇಳಿ ಭಾನುಮತಿ ತಿರುಗಿ ನೋಡುವಂತೆ ಮಾಡಿ ಅವಳ ಕೈನಲ್ಲಿದ್ದ ಗನ್ ಕಸಿದುಕೊಳ್ಳುತ್ತಾಳೆ. ತಕ್ಷಣ ಅದನ್ನು ಭಾನುಮತಿಯ ತಲೆಗೇ ಹಿಡಿದು ಮಹತಿ 'ಭಾನುಮತಿ, ಇದು ತುಂಬಾ ಹಳೆಯ ಟ್ರಿಕ್ಕು.. ಇದು ಯಾವತ್ತೂ ವರ್ಕ್ ಆಗುತ್ತೆ' ಎಂದು ಹೇಳಿ ನಗಲು ಅಲ್ಲಿದ್ದ ಎಲ್ಲರಿಗೂ ಈಗ ಧೈರ್ಯ ಬಂದು ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಗೀತಾ ಕೂಡ ಭಾನುಮತಿ ಮುಂದೆ ಬಂದು "ಇಲ್ಲಿಗೆ ನಿನ್ನ ಆಟ ಮುಗಿಯಿತು ಭಾನುಮತೀ, ನೀನು ಈಗ ಅರೆಸ್ಟ್ ಆಗ್ತೀಯ" ಎಂದು ಹೇಳುತ್ತಾಳೆ. 

ಅಷ್ಟರಲ್ಲಿ ಮನೆಗೆ ಆಗಮಿಸುವ ಪೊಲೀಸ್ ಭಾನುಮತಿಯನ್ನು ಮನೆಯಿಂದ ಕರೆದುಕೊಂಡು ಹೋಗುತ್ತಾರೆ. ಮನೆಯವರೆಲ್ಲರೂ ನಿಟ್ಟುಸಿರು ಬಿಟ್ಟು ಭಾರೀ ಖುಷಿ ಅನುಭವಿಸುತ್ತಾರೆ. ಈ ಸೀರಿಯಲ್ ಪ್ರಿಯರು ಸೋಷಿಯಲ್ ಮೀಡಿಯಾಗಳಲ್ಲಿ ಗೀತಾ ಸೀರಿಯಲ್ ಈ ಪ್ರೋಮೋ ಬಗ್ಗೆ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. ನಮ್ ಹೆಣ್ಣು ಹುಲಿ ಮಹತಿ ಅಂದ್ರೆ ಸುಮ್ನೇನಾ, ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು 'ಭಾನುಮತಿಗೆ ಹೊಡೆಯುವುದಕ್ಕೆ ನಮಗೊಂದಿಷ್ಟು ಚಾನ್ಸ್ ಕೊಡಿ, ಎಂದಿದ್ದಾರೆ. ಮತ್ತೊಬ್ಬರು 'ನಿಮ್ಮ ಬಾಯಿಗೆ ಮಣ್ಣಾಕ ಗೀತಾ ಎಷ್ಟು ವರ್ಷ ಕಾಟ ಕೊಟ್ಟಿದ್ಲು ನಿಂಗೆ ಆದರೆ ನೀನು ಅವಳನ್ನ ಜೈಲಿಗೆ ಹಾಕಿದೆ ತ್ಪೂ. ಎಲ್ಲೋ ಕೂಡಿಹಾಕಿ ಚಿತ್ರಹಿಂಸೆ ಕೊಡಬೇಕಿತ್ತು' ಎಂದು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. 

ಗೀತಾ ಸೀರಿಯಲ್ ಪ್ರಿಯರಿಗೆ ಭಾನುಮತಿ ಅರೆಸ್ಟ್ ಆಗಿರುವುದು ತುಂಬಾ ಖುಷಿಯಾಗಿದೆ. ಈಗಾಗಲೇ ಸಾವಿ ಸಂಚಿಕೆಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಗೀತಾ ಸೀರಿಯಲ್ ಕಥೆಯಲ್ಲಿ ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಕಲರ್ಸ್ ಕನ್ನಡದ ಗೀತಾ ಸೀರಿಯಲ್, ಸೋಮವಾರದಿಂದ ಶನವಾರ ಸಂಜೆ 6.00 ಗಂಟೆಗೆ ಪ್ರಸಾರ ಕಾಣುತ್ತಿದೆ. 

Follow Us:
Download App:
  • android
  • ios