ಅಯ್ಯೋ ಪೆದ್ದು ಭಾಗ್ಯ... ನಿನಗೂ ಇಬ್ಬರು ಮಕ್ಕಳು ಕಣೆ...ಇಷ್ಟು ಹಿಂಟ್ ಕೊಟ್ರೂ ಅರ್ಥ ಆಗಲ್ವೇನೆ?
ಶ್ರೇಷ್ಠಾ ಮತ್ತು ತಾಂಡವ್ ವಿಷಯ ಭಾಗ್ಯಳಿಗೆ ತಿಳಿಸುವುದಕ್ಕಾಗಿ ಪೂಜಾ ಹಾಗೂ ಮಂತ್ರವಾದಿ ಎಷ್ಟೇ ಹಿಂಟ್ ಕೊಟ್ಟರೂ ಭಾಗ್ಯಳಿಗೆ ಅರ್ಥನೇ ಆಗ್ತಿಲ್ಲ. ಇದರಿಂದ ಸೀರಿಯಲ್ ಪ್ರೇಮಿಗಳು ಅಸಮಾಧಾನಗೊಳ್ಳುತ್ತಿದ್ದಾರೆ.
ತಾಂಡವ್ ಮತ್ತು ಶ್ರೇಷ್ಠಾಳ ಗುಟ್ಟನ್ನು ರಟ್ಟು ಮಾಡಲು ಪೂಜಾ, ಸುಂದ್ರಿ ಹಾಗೂ ಹಿತಾ ಸೇರಿ ಮಂತ್ರವಾದಿ ಪ್ಲ್ಯಾನ್ ಮಾಡಿದ್ದಾರೆ. ಸುಂದ್ರಿ ಕಷ್ಟಪಟ್ಟು ಈ ಜಾಗಕ್ಕೆ ಶ್ರೇಷ್ಠಾಳನ್ನು ಕರೆದುಕೊಂಡು ಬಂದಿದ್ರೆ ಭಾಗ್ಯಳನ್ನು ಪೂಜಾ ಕರೆಸಿದ್ದಾಳೆ. ಅಲ್ಲಿ ಭಾಗ್ಯ ಮತ್ತು ಶ್ರೇಷ್ಠಾಳ ಮುಖಾಮುಖುಯಾಗಿದೆ. ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಈಗ ಏನಿದ್ದರೂ ಇರುವ ಗುಟ್ಟು ಒಂದೇ. ಅದು ತಾಂಡವ್ ಮತ್ತು ಶ್ರೇಷ್ಠಾಳ ಗುಟ್ಟು ರಟ್ಟಾಗುವುದು ಮಾತ್ರ. ಏಕೆಂದ್ರೆ ಇಲ್ಲಿಯವರೆಗೆ, ಇಷ್ಟಾದರೂ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಾಂಡವ್ಗೆ ಇನ್ನೊಂದು ಸಂಬಂಧ ಇದೆ ಎನ್ನುವುದು ಗೊತ್ತಾಗುತ್ತಲೇ ಇಲ್ಲ.ಆತನ ಬಿಹೇವಿಯರ್ನಲ್ಲಿ ಎಷ್ಟೊಂದು ಬದಲಾವಣೆ ಆಗಿದ್ದರೂ ಅದು ಯಾಕೆ ಎಂದು ನೋಡುವ ಗೋಜಿಗೂ ಹೋಗುತ್ತಿಲ್ಲ. ಶ್ರೇಷ್ಠಾ ಒಳ್ಳೆಯವಳಲ್ಲ ಎನ್ನುವುದು ಭಾಗ್ಯಳಿಗೆ ತಿಳಿದಿದ್ದರೂ, ತನ್ನ ಗಂಡನನ್ನೇ ಆಕೆ ಬುಟ್ಟಿಗೆ ಹಾಕಿಕೊಂಡಿರುವ ವಿಷಯ ತಿಳಿಯುತ್ತಿಲ್ಲ. ಶ್ರೇಷ್ಠಾಳ ಮದುವೆ ಎನ್ನುವುದು ಗೊತ್ತು. ಆದರೆ ಅದು ತಾಂಡವ್ ಜೊತೆ ಎಂದು ಇದುವರೆಗೆ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಿಳಿದಿಲ್ಲ. ಪೂಜಾಗೆ ತಿಳಿದಿದ್ದರೂ ಅದನ್ನು ಹೇಗೆ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಪೂಜಾ, ಸುಂದರಿ ಮತ್ತು ಹಿತಾ ಸೇರಿ ಸದ್ಯ ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೀಗ ವರ್ಕ್ಔಟ್ ಆಗಿದೆ.
ಪೂಜಾ ಮತ್ತು ಹಿತಾ ಇಬ್ಬರೂ ಶ್ರೇಷ್ಠಾಳ ಗುಟ್ಟನ್ನು ಭಾಗ್ಯಳ ಎದುರು ರಟ್ಟು ಮಾಡಿದ್ದಾರೆ. ನೀನು ಮದುವೆಯಾಗ್ತಿರೋ ಹುಡುಗನಿಗೆ ಇದಾಗಲೇ ಮದ್ವೆಯಾಗಿದೆ. ಇಬ್ಬರು ಮಕ್ಕಳು ಇದ್ದಾರೆ ಎಂದು ಭಾಗ್ಯನ ಎದುರೇ ಹೇಳಿದ್ದಾರೆ. ಆದರೆ ಭಾಗ್ಯಳಿಗೆ ಶಾಕ್ ಆಗಿದ್ದರೂ ಅದು ತನ್ನ ಗಂಡನೇ ಎನ್ನುವುದು ತಲೆಗೇ ಹೊಳಿಯಲಿಲ್ಲ. ಬೇರೆಯವರ ಮನೆಯನ್ನು ಹಾಳು ಮಾಡುತ್ತಿರುವ ಶ್ರೇಷ್ಠಾಳನ್ನು ಚೆನ್ನಾಗಿ ಉಗಿದಿದ್ದಾಳೆ. ಆದರೆ ತನ್ನ ಗಂಡನೇ ಈಕೆಯ ಭಾವಿ ಪತಿ ಎನ್ನುವುದು ಗೊತ್ತಾಗಲಿಲ್ಲ. ಅದಕ್ಕಾಗಿಯೇ ನೆಟ್ಟಿಗರು ಭಾಗ್ಯಳ ಪೆದ್ದುತನಕ್ಕೆ ಟೀಕೆ ಮಾಡುತ್ತಿದ್ದಾರೆ. ಪೆದ್ದು ಭಾಗ್ಯ, ನಿನಗೂ ಇಬ್ಬರು ಮಕ್ಕಳು ಎನ್ನೋದು ಮರೆತು ಹೋಯ್ತಾ. ನಿನ್ನ ಗಂಡ ಶ್ರೇಷ್ಠಾಳ ಹಿಂದೆ ಮುಂದೆ ಓಡಾಡ್ತಿರೋದು ಗೊತ್ತಾದ್ರೂ ಈ ಮಂತ್ರವಾದಿ ಮಾತು ಅರ್ಥವಾಗ್ತಿಲ್ವಲ್ಲಾ ಛೇ... ಇಷ್ಟು ಪೆದ್ದುನಾ ನೀನು ಎಂದು ಬೈಯುತ್ತಿದ್ದಾರೆ.
ಇನ್ನೊಬ್ಬರ ಲೈಫ್ ಹಾಳು ಮಾಡ್ತಾರೆ... ಯಾಕೆ ಹೀಗೆ? ಸಿನಿಮಾ ಸ್ಥಿತಿಗೆ ನಟ ಜಗ್ಗೇಶ್ ಕಣ್ಣೀರು
ತಾಂಡವ್ ಮತ್ತು ಶ್ರೇಷ್ಠಾ ಮದುವೆಯವರೆಗೂ ಬಂದಿದ್ದಾರೆ. ನಿಶ್ಚಿತಾರ್ಥವೂ ಆಗಿದೆ, ಪ್ರೀ ವೆಡ್ಡಿಂಗ್ ಶೂಟ್ ಕೂಡ ಆಗಿದೆ. ಅದೇ ಇನ್ನೊಂದೆಡೆ ಪದೇ ಪದೇ ಭಾಗ್ಯಳಿಗೆ ಡಿವೋರ್ಸ್ ಕೊಡು ಎಂದು ಪೀಡಿಸುತ್ತಿದ್ದಾನೆ ತಾಂಡವ್. ಭಾಗ್ಯ ತನಗೆ ವಿಚ್ಛೇದನ ಕೊಡಲಿ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾನೆ. ಆಕೆಗೆ ಕೋಪ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆಕೆಯನ್ನು ಪ್ರವೋಕ್ ಮಾಡುತ್ತಿದ್ದಾನೆ. ಆದರೆ ಭಾಗ್ಯ ವಿಚ್ಛೇದನಕ್ಕೆ ಸುತರಾಂ ಒಪ್ಪುತ್ತಿಲ್ಲ.ತನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಡಿವೋರ್ಸ್ ಕೊಡುವುದೇ ಇಲ್ಲ ಎಂದು ಕಡ್ಡಿ ತುಂಡು ಮಾಡಿ ಹೇಳಿದ್ದಾಳೆ. ಕುಸುಮಾ ಕೂಡ ಭಾಗ್ಯಳಿಗೆ ಸಪೋರ್ಟ್ ಮಾಡುತ್ತಿದ್ದಾಳೆ.
ಹಿತಾ ಮಂತ್ರವಾದಿ ವೇಷ ತೊಟ್ಟಿದ್ದಾಳೆ. ಇದು ಸ್ವಲ್ಪ ಅತಿ ಎನಿಸಿದೆ ಎನ್ನುವುದು ಹಲವರ ಅಭಿಮತ. ಈ ಗುಟ್ಟು ರಟ್ಟಾದರೆ ಸೀರಿಯಲ್ ಮುಗಿದ ಹಾಗೆ. ಹಾಗಿದ್ದರೆ ಭಾಗ್ಯಲಕ್ಷ್ಮಿ ಸೀರಿಯಲ್ ಶೀಘ್ರದಲ್ಲಿಯೇ ತೆರೆಬೀಳಲಿದೆಯೇ ಕಾದು ನೋಡಬೇಕಿದೆ. ಮನೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾಳ ವೆಡ್ಡಿಂಗ್ ಕಾರ್ಡ್ ಇದೆ. ಇಷ್ಟೆಲ್ಲಾ ಮಾಡುವ ಬದಲು ವೆಡ್ಡಿಂಗ್ ಕಾರ್ಡ್ ನೋಡಿದ್ರೆ ಎಲ್ಲವೂ ಗೊತ್ತಾಗಿ ಹೊಗ್ತಿತ್ತು ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು.
ಸದಾ ಕಿತ್ತಾಡುತ್ತಿರೋ ಶ್ರೀರಸ್ತು ಶುಭಮಸ್ತು ವಾರೆಗಿತ್ತಿಯರಿಂದ ಜೇನ ದನಿಯೋಳೆ...ಗೆ ಭರ್ಜರಿ ಸ್ಟೆಪ್