ಮಧ್ಯಮ ವರ್ಗದ ಸಂವೇದನೆಗಳನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟು ಮನೆ ಮಾತಾಗಿರುವ ಈ ಧಾರಾವಾಹಿಯ ಕುರಿತು ಪ್ರೇಕ್ಷಕರ ಒತ್ತಾಯದ ಮೇರೆಗೆ ಧಾರಾವಾಹಿ ತಂಡ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಧಾರಾವಾಹಿ ತಂಡದ ಜನಪ್ರಿಯ ಕಲಾವಿದರು, ತಂತ್ರಜ್ಞರ ಜತೆಗೆ ಪ್ರೇಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಮರಳಿ ಬಾ ಮನ್ವಂತರವೇ’ ಹೆಸರಿನ ಈ ವಿಶೇಷ ಗೋಷ್ಠಿಯಲ್ಲಿ ಕಲಾವಿದರಾದ ಸೀತಾ ಕೋಟೆ, ಮಾಳವಿಕಾ ಅವಿನಾಶ್, ಮೇಘಾ ನಾಡಿಗೇರ್, ವೀಣಾ ಸುಂದರ್, ಜಯಶ್ರೀ ರಾಜ್, ಸುಷ್ಮಾ ಭಾರದ್ವಾಜ್, ಅಶ್ವಿನಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವರೊಂದಿಗೆ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ, ನ್ಯಾಯಧೀಶರಾದ ಎ.ಜೆ. ಸದಾಶಿವ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತಿತರರು ಹಾಜರಿದ್ದರು.

ಸಂಗೀತ ದಿನಕ್ಕೆ ಇನ್ನೇನು ಬೇಕು? ‘ಮಗಳು ಜಾನಕಿ’ ಸಾಂಗ್ ಸಾಕಲ್ಲವೇ?