ಬೆಂಗಳೂರು [ಜೂ.21] ಟಿ.ಎನ್.ಸೀತಾರಾಂ ನಿರ್ದೇಶನ, ಎಚ್.ಎಸ್.ವೆಂಕಟೇಶ ಮೂರ್ತಿ ಸಾಹಿತ್ಯ, ಪ್ರವೀಣ್ ಡಿ.ರಾವ್ ಸಂಗೀತ, ವಿಜಯ್ ಪ್ರಕಾಶ್ ಸಂಗೀತ ಇನ್ನೇನು ಬೇಕು ಕಿವಿಗೆ ತಂಪೆರೆಯಲು? ಹೌದು.. ಟಿಎನ್ಎಸ್  ನಿರ್ದೇಶನದ ಹೊಸ ಧಾರಾವಾಹಿ ‘ಮಗಳು ಜಾನಕಿ’ಯ ಟೈಟಲ್ ಸಾಂಗ್ ಸದ್ಯದ ಬಿಸಿ ದೋಸೆ.

ಯೋಗ ದಿನದಲ್ಲಿ ಮುಳುಗಿರುವ ಮಹಾಜನತೆಗೆ ಈ ಹಾಡನ್ನು ಕೇಳಲೇಬೇಕು. ನೀವು ಇನ್ನು ಕೇಳಿಲ್ಲವೇ? ಹಾಗಾದರೆ ನಾವು ಕೇಳಿಸುತ್ತಿದ್ದೇವೆ. ಒಮ್ಮೆ ಕೇಳಿದರೆ ಮತ್ತೊಮ್ಮೆ ನೀವು ಕೇಳೆ ಕೇಳುತ್ತೀರಿ ಎಂಬ ಗ್ಯಾರಂಟಿಯನ್ನು ನೀಡುತ್ತೇವೆ.

ಸಂಗೀತ ಗಾರುಡಿಗ ಹಂಸಲೇಖ ಚೊಚ್ಚಲ ಚಿತ್ರ ಹಿಂದಿಗೆ

ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರು ಕಲರ್ಸ್‌ ಸೂಪರ್‌  ವಾಹಿನಿಗಾಗಿ ‘ಮಗಳು ಜಾನಕಿ' ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಧಾರಾವಾಹಿ ಮುಂದಿನ ತಿಂಗಳನಿಂದ ಪ್ರಸಾರ ಆರಂಭವಾಗಲಿದ್ದು ‘ಮಹಾಪರ್ವ’ದ ನಂತರ ಟಿಎನ್ಎಸ್ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ.

ನಾವು ಜಾಸ್ತಿ ಏನೂ ಬರೆಯೋಕೆ ಹೋಗಲ್ಲ.. ಸುಮ್ಮನೆ ಶೀರ್ಷಿಕೆ ಗೀತೆನ ಆಸ್ವಾದಿಸಿ....