ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ಡಬ್ಬಿಂಗ್ ಧಾರಾವಾಹಿ 'ರಾಧಾ ಕೃಷ್ಣ'. ಕೃಷ್ಣನ ಪಾತ್ರದಲ್ಲಿ ಮಿಂಚುತ್ತಿರುವ ಸುಮೇಧ್ ಹಾಗೂ ರಾಧಾ ಪಾತ್ರದಲ್ಲಿ ನಟಿಸುತ್ತಿರುವ ಮಲ್ಲಿಕಾ ಸಿಂಗ್ ರಿಯಲ್ ಲೈಫ್‌ನಲ್ಲಿ ಪ್ರೀತಿಸುತ್ತಿದ್ದಾರೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತಿದೆ. ಇದರ ಬಗ್ಗೆ ಸ್ವತಃ ಸುಮೇಧ್ ಸ್ಪಷ್ಟನೆ ನೀಡಿದ್ದಾರೆ.

ಕೃಷ್ಣನ ಪ್ರೇಯಸಿ 'ರಾಧೆ' ಪಾತ್ರಕ್ಕೆ ಜೀವ ತುಂಬಿದ ನಟಿ ಯಾರು ಗೊತ್ತಾ?

ಖಾಸಗಿ ವೆಬ್‌ಸೈಟ್‌ ಜೊತೆ ಮಾತನಾಡಿದ ಸುಮೇಧ್ ತಮ್ಮ ಸಹ ಕಲಾವಿದೆ ಮಲ್ಲಿಕಾ ಜೊತೆ ಇರುವ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದಾರೆ. 'ನನ್ನ ವೈಯಕ್ತಿಕ ಲೈಫ್‌ ಯಾವಾಗಲೂ ವೈಯಕ್ತಿಕವೇ ಆಗಿರುತ್ತದೆ. ಜನರು ಪ್ರೀತಿ, ಮದುವೆ ಬಗ್ಗೆ ಹರಡುವ ಗಾಸಿಪ್‌ಗಳು ಯಾವುದೂ ನನ್ನ ಮನಸ್ಸಿಗೆ ನೋವು ಮಾಡುವುದಿಲ್ಲ. ನಾನು ಹಾಗೂ ಮಲ್ಲಿಕಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ನಮ್ಮಿಬ್ಬರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡುತ್ತೇವೆ' ಎಂದು ಹೇಳಿದ್ದಾರೆ.

ನಿಜಕ್ಕೂ ಲವ್‌ ಆಗಿದ್ಯಾ?

ಸುಮೇಧ್‌ ಹಾಗೂ ಮಲ್ಲಿಕಾ ಹಲವು ವರ್ಷಗಳಿಂದ ರಾಧಾ ಕೃಷ್ಣ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಇದನ್ನು ತಪ್ಪಾಗಿ ತಿಳಿದುಕೊಂಡ ಕೆಲ ನೆಟ್ಟಿಗರು ಗಾಸಿಪ್ ಹಬ್ಬಿಸುತ್ತಿದ್ದಾರೆ. 'ಮಲ್ಲಿಕಾ ಅಭಿನಯದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಾವಿಬ್ಬರು ಗುಡ್‌ ಫ್ರೆಂಡ್ಸ್ ಆಕೆ ತುಂಬಾ ಕೈಂಡ್ ಹಾರ್ಟ್‌ ಆಗಿದ್ದಾಳೆ. ಈ ಗಾಸಿಪ್‌ಗಳ ಬಗ್ಗೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ' ಎಂದು ಸುಮೇಧ್ ಹೇಳಿದ್ದಾರೆ. 

ರಾಧಾ ಕೃಷ್ಣ ಮುನ್ನ ಪೌರಾಣಿಕ ಧಾರಾವಾಹಿ ಮಹಾಭಾರತ ಪ್ರಸಾರವಾಗುತ್ತಿತ್ತು. ಆಧುನಿಕ ತಂತ್ರಜ್ಞಾನದ ಮೆರಗಿನೊಂದಿಗೆ ಪ್ರಸಾರವಾಗಿದ್ದ ಮಹಾಭಾರತ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು . ಇದೀಗ ಡಬ್ಬಿಂಗ್ ಮೂಲಕ ಪ್ರಾದೇಶಿಕ ಭಾಷೆಗಳಲ್ಲೂ ಈ ಧಾರಾವಾಹಿಗಳು ಪ್ರಸಾರಗೊಳ್ಳುತ್ತಿರುವುದು ಮತ್ತಷ್ಟು ಜನರಿಗೆ ಈ ಜೋಡಿಯ ಅಭಿನಯ  ತಲುಪಲು ಸಹಕಾರಿಯಾಗಿದೆ.