Asianet Suvarna News Asianet Suvarna News

BIGG BOSS: ಎಣ್ಣೆ ಮಸಾಜ್​ ಮಾಡ್ತಾ ಮಾಡ್ತಾ ಲವ್ ಶುರು? ಕಾರ್ತಿಕ್​- ಸಂಗೀತಾ ಪ್ರೇಮ್​ ಕಹಾನಿ

ಬಿಗ್​ಬಾಸ್​ ಮನೆಯಲ್ಲಿ ಸಂಗೀತಾ ಮತ್ತು ಕಾರ್ತೀಕ್​ ನಡುವೆ ಲವ್​ ಸ್ಟೋರಿ ಶುರುವಾಗಿ ಎಂದು ಗುಸುಗುಸು ಶುರುವಾಗಿದೆ. ಅಷ್ಟಕ್ಕೂ ಆಗಿದ್ದೇನು?  
 

Love  has started between Sangeetha and Karthik in the Bigg Boss Kannada house suc
Author
First Published Oct 17, 2023, 2:25 PM IST

ಬಿಗ್​ ಬಾಸ್​ ಎಂದ ಮೇಲೆ ಭಾಷೆ ಯಾವುದೇ ಆಗಿರಲಿ, ಅಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್​ ಆಗಿವೆ. ಕೆಲವೊಮ್ಮೆ ಇದು ಸ್ಕ್ರಿಪ್ಟೆಡ್​ ಎಂದೂ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದವರು ಹೇಳುವುದು ಇದೆ. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್​ ಮಾಡಿ ಕೊಡಲಾಗುತ್ತದೆ ಎಂದೂ ಹೇಳಲಾಗುತ್ತದೆ.  ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ. ಇದೀಗ ಬಿಗ್​ಬಾಸ್​-10ರಲ್ಲಿಯೂ ಲವ್​ ಸ್ಟೋರಿ ಶುರುವಾಗಿದೆ.  Bigg Boss Session 10 ಶುರುವಾಗಿ ಎರಡನೆಯ ವಾರ ಕಾಲಿಡುವಾಗಲೇ ಸ್ಪರ್ಧಿಗಳಾದ ಸಂಗೀತಾ ಮತ್ತು ಕಾರ್ತಿಕ್​ ನಡುವೆ ಕುಚ್​ ಕುಚ್​ ಶುರುವಾಗಿದೆ. ಕಾರ್ತಿಕ್​ ಅವರಿಗೆ ಎಣ್ಣೆ ಮಸಾಜ್​ ಮಾಡುತ್ತಲೇ ಸಂಗೀತಾಗೆ ಲವ್​ ಆಗಿಬಿಟ್ಟಿದೆ. ಇವರ ಫ್ರೆಂಡ್​ಷಿಪ್​ ದಿನೇ ದಿನೇ ಬೆಳೆಯುತ್ತಿತ್ತು, ಇದೀಗ ಪ್ರೇಮಕ್ಕೆ ತಿರುಗಿದೆ ಎನ್ನುವ ಸುದ್ದಿ ದೊಡ್ಮನೆಯಲ್ಲಿ ಹರಿದಾಡುತ್ತಿದೆ.

 ಎರಡನೇ ವಾರದ ಮೊದಲ ದಿನವೇ ಕೆಲವರಿಗೆ ಟಾಸ್ಕ್‌ ಸಿಕ್ಕಿತ್ತು. ಎಲಿಮಿನೇಷನ್‌ ಆದವರನ್ನು ಉಳಿಸಿಕೊಳ್ಳುವ ಚಾನ್ಸ್‌ ನೀಡಲಾಗಿತ್ತು. ಆ ಪೈಕಿ ಸಂಗೀತಾ ಅವರನ್ನು ಎಲಿಮಿನೇಷನ್​ನಲ್ಲಿ ಬಚಾವ್​ ಮಾಡಲು  ಕಾರ್ತಿಕ್‌ ಪಣತೊಟ್ಟಿದ್ದರು. ಆದರೆ ಅವರಿಗೆ ಕೊಟ್ಟ ಟಾಸ್ಕ್‌ ಸೋತಿದ್ದಾರೆ. ಆದರೆ  ಸಂಗೀತಾ ಅವರ ಪ್ರೀತಿ ಸಂಪಾದನೆ ಮಾಡಿದ್ದಾರೆ.   ಅಷ್ಟಕ್ಕೂ ಎರಡನೇ ವಾರದ ಮೊದಲ ದಿನವಾದ ಸೋಮವಾರ, ಬೆಳಂಬೆಳಗ್ಗೆ ಸ್ಪರ್ಧಿಗಳಿಗೆ ಶಾಕ್‌ ನೀಡಿದ್ದರು ಬಿಗ್‌ಬಾಸ್‌. ಎಲ್ಲರೂ ಮಲಗಿದ್ದಾಗಲೇ, ಈ ವಾರದ ಎಲಿಮಿನೇಷನ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.   ಹಲವರಿಗೆ ಎಲಿಮಿನೇಷನ್‌ ಶಾಕ್​ ಉಂಟಾಗಿತ್ತು. ಆ ಪೈಕಿ ಕೆಲವರನ್ನು ಉಳಿಸಿಕೊಳ್ಳಲು ಟಾಸ್ಕ್‌ ಸಹ ನೀಡಿದ್ದರು. ಅದರಲ್ಲಿ ಒಬ್ಬರು ಸಂಗೀತಾ.

ಬಿಗ್​ಬಾಸ್​ನಲ್ಲಿ ಸುಂದರಿಯರ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ರ‍್ಯಾಂಪ್​ ವಾಕ್​: ವ್ಹಾರೆವ್ಹಾ ಅಂತಿದ್ದಾರೆ ಫ್ಯಾನ್ಸ್​!
 
 ಸಂಗೀತಾರನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಪರವಾಗಿ ಟಾಸ್ಕ್‌ಗೆ ಇಳಿದಿದ್ದರು ಕಾರ್ತಿಕ್‌. ಇತ್ತ ಭಾಗ್ಯಶ್ರೀ ಪರವಾಗಿ ಸಿರಿ, ತುಕಾಲಿ ಸಂತು ಪರವಾಗಿ ರಕ್ಷಕ್‌, ಮೈಕಲ್‌ ಪರವಾಗಿ ವಿನಯ್‌ ಗೌಡ ಕಠಿಣ ಟಾಸ್ಕ್‌ಗೆ ಇಳಿದಿದ್ದರು. ಕೊನೆಯದಾಗಿ ವಿನಯ್‌ ಮತ್ತು ಕಾರ್ತಿಕ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆ ಪೈಕಿ ವಿನಯ್‌ ಗೌಡ ವಿನ್‌ ಆಗುವ ಮೂಲಕ ಮೈಕಲ್‌ನನ್ನು ಈ ವಾರದ ಎಲಿಮಿನೇಷನ್‌ನಿಂದ ಸೇವ್‌ ಮಾಡಿದ್ದರು.  ಬಿಗ್ ಬಾಸ್​ ನೀಡಿದ ಟಾಸ್ಕ್​ ವೇಳೆ ಕಾರ್ತಿಕ್​ ಬೆನ್ನಿಗೆ ಗಾಯವಾಗಿದೆ. ಇದನ್ನು ಸಂಗೀತಾ ಅವರಿಗೆ  ನೋಡಲು ಆಗಲಿಲ್ಲ. ಗಾಯಕ್ಕೆ ಎಣ್ಣೆ ಹಚ್ಚಿ ಮಸಾಜ್ ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರೀತಿ ಮತ್ತಷ್ಟು ಉಕ್ಕಿ ಬಂದಿದೆ. ಇದಾದ ಬಳಿಕ, ಕಾರ್ತೀಕ್​ ಅವರು ಸಂಗೀತಾರನ್ನು ತಬ್ಬಿಕೊಂಡು ಸಮಾಧಾನ ಮಾಡಿ ಮತ್ತಷ್ಟು ಪ್ರೀತಿ ಮೆರೆದಿದ್ದಾರೆ. ಇದರ  ಪ್ರೋಮೋ ಈಗ ವೈರಲ್​ ಆಗಿದೆ.
 
ಅಷ್ಟಕ್ಕೂ ಬಿಗ್​ ಬಾಸ್​ ಶುರುವಿನಿಂದಲೂ ಕಾರ್ತಿಕ್ ಹಾಗೂ ಸಂಗೀತಾ ಕ್ಲೋಸ್  ಆಗಿದ್ದರು.  ಕಾರ್ತಿಕ್ ಹಾಗೂ ಸಂಗೀತಾ ಒಟ್ಟಿಗೆ ಕಾಲ ಕಳೆಯುತ್ತಿರುತ್ತಾರೆ. ತುಂಬಾ ಕ್ಲೋಸ್​ ಆಗಿರುವ ಕಾರ್ತಿಕ್​-ಸಂಗೀತಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಬಿಗ್​ಬಾಸ್​ ಮನೆಯಲ್ಲಿ ಶುರುವಾಗಿದ್ದು, ಇದೀಗ ಎಣ್ಣೆ ಮಸಾಜ್​ ಮೂಲಕ ಸುದ್ದಿ ಮತ್ತಷ್ಟು ಬಲಗೊಂಡಿದೆ.  

ಬಿಗ್​ಬಾಸ್​ಗೆ ಹೋಗ್ತೀರಾ ಎಂದಾಗ ಡ್ರೋನ್​ ಪ್ರತಾಪ್ ಹಿಂದೆ​ ಹೇಳಿದ್ದೇನು? ವಿಡಿಯೋ ವೈರಲ್- ಸಕತ್​ ಟ್ರೋಲ್​​

Follow Us:
Download App:
  • android
  • ios