ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದೊಂದು ಸೀರಿಯಲ್ ಶುರುವಾಗುತ್ತಿದೆ. ಅದು 'ಲಕ್ಷ್ಮಿ ಟಿಫಿನ್ ರೂಮ್'. ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರೋಳು, ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. 

Add Asianetnews Kannada as a Preferred SourcegooglePreferred

ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇದಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರಲಕ್ಷ್ಮಿ ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ.

ಡಾಲಿ ಧನಂಜಯ್ ಸಿನಿಮಾ ಹೀರೋ 'ಪತಿ'ಯಾದ್ರು; ನಾಗಭೂಷಣ್‌ಗೆ ಜೋಡಿಯಾದ್ರು ಮಲೈಕಾ!

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?

ಇದೇ ಸೋಮವಾರದಿಂದ (04 ಮಾರ್ಚ್ 2024)) ಸಂಜೆ 6.30 ಕ್ಕೆ ಶುರುವಾಗ್ತಿದೆ ಪ್ರೀತಿ, ಆಕಾಂಕ್ಷೆ ಒಳಗೊಂಡ ವರಲಕ್ಷ್ಮಿಯ ಕಥೆ 'ಲಕ್ಷ್ಮಿ ಟಿಫಿನ್ ರೂಮ್' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.