Asianet Suvarna News Asianet Suvarna News

ಅಲ್ಲಿ ಬಿಗ್ ಬಾಸ್‌ಗೇ ಬೆದರಿಸಿದ ಲಾಯರ್ ಜಗದೀಶ: ಇಲ್ಲಿ ವಕೀಲಿಕೆ ಲೈಸೆನ್ಸ್ ರದ್ದುಗೊಳಿಸಿದ ಬಾರ್ ಕೌನ್ಸಿಲ್!

ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರ ವಕೀಲಿಕೆ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ನಕಲಿ ಅಂಕಪಟ್ಟಿಗಳನ್ನು ಬಳಸಿ ಅವರು ಪದವಿ ಪಡೆದಿರುವುದು ಬೆಳಕಿಗೆ ಬಂದಿದೆ.

Bigg Boss fame Advocate Jagdish LLB degree and law license cancel by Bar Council sat
Author
First Published Oct 3, 2024, 3:52 PM IST | Last Updated Oct 3, 2024, 5:23 PM IST

ಬೆಂಗಳೂರು (ಅ.03): ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಹಾಗೂ ನಾನು ಸಿಂಹ ಎಂದೇ ಹೇಳಿಕೊಳ್ಳುತ್ತಿರುವ ವಕೀಲ ಜಗದೀಶ್ ಅವರು ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಇವರು ಫೇಕ್ ಮಾರ್ಕ್ಸ್ ಕಾರ್ಡ್‌ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್‌ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಪದವಿ: ಈಗಾಗಲೇ ಸುಮಾರು 40ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಕೇವಲ 10 ವರ್ಷ ವಕೀಲಿಕೆ ಸೇವೆ ಮಾಡಿದ್ದಾಗಿ ಹೇಳಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಸ್ವಲ್ಪ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಅವರು ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಎಲ್‌ಎಲ್‌ಬಿ ಮೇಲೆ ಬಾರ್ ಕೌನ್ಸಿಲ್‌ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. 

ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ಸಮಿಯು ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ. ಇದಾದ ನಂತರ 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಆಗಿದ್ದು, ಇದರ ಆಧಾರದಲ್ಲಿ ಮಾಡಲಾದ ಪದವಿ ಹಾಗೂ ಎಲ್‌ಎಲ್‌ಬಿ ಸೇರಿ ಎಲ್ಲವೂ ಅಮಾನ್ಯವಾಗಿರುತ್ತವೆ. ಆದ್ದರಿಂದ ಕೆ.ಎನ್ ಜಗದೀಶ್ ಕುಮಾರ್ (ಡಿ/2091/2017) ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ: ಬಿಎಂಟಿಸಿ ಸಿಬ್ಬಂದಿಗೆ ಗನ್ ಲೈಸೆನ್ಸ್ ಕೋರಿಕೆ: ಕಂಡಕ್ಟರ್ ಹಣದ ಬ್ಯಾಗ್‌ನಲ್ಲಿ ಬಂದೂಕು!

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಸಮೇತ ಮಾಹಿತಿ ಹಂಚಿಕೊಂಡಿರುವ ಬಿಜ್‌ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಹಂಚಿಕೊಂಡ ದಾಖಲೆ ಅನುಸಾರ ಸುದ್ದಿ ಪ್ರಕಟಿಸಲಾಗಿದೆ. ಈ ಬಗ್ಗೆ ಪ್ರಶಾಂತ್ ಸಂಬರಗಿ ಅವರು, 'Bigg boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. Don't call him lawyer shaeeb. It's an insult to advocates' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನು ಕಳೆದ 10 ವರ್ಷಗಳಿಂದ ವಕೀಲಿಕೆ ಮಾಡುತ್ತಿದ್ದೇನೆ. ನನ್ನ ಹೆಂಡತಿಯೂ ಲಾಯರ್ ಎಂದು ಹೇಳಿಕೊಂಡಿರುವ ವಕೀಲ ಜಗದೀಶ್ ಕುಮಾರ್ ಅವರು, ಕಪ್ಪು ಕೋಟು ಧರಿಸಿ ರಾಜಕಾರಣಿಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ತಮ್ಮ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ ರಮೇಶ್ ಜಾರಕಿಹೊಳಿ ಕೇಸಿಗೆ ಸಂಬಂಧಿಸಿದಂತೆ ನಾಲಿಗೆ ಹರಿಬಿಟ್ಟಿದ್ದರು. ಇದಾದ ಬಳಿಕ ತಣ್ಣಗಾಗಿದ್ದ ವಕೀಲ ಜಗದೀಶ್, ದರ್ಶನ್ ಕೊಲೆ ಕೇಸಿನ ನಂತರ ಮತ್ತೆ ತಮ್ಮ ಮಾತಿನ ಧಾಟಿಯನ್ನು ಆರಂಭಿಸಿದ್ದರು. ಅದರಲ್ಲಿಯೂ ಶಾಸಕ ಮುನಿರತ್ನ ಅವರು ಬಂಧನವಾದ ನಂತರ ಮುನಿರತ್ನ ವಿರುದ್ಧ ತುಸು ಹೆಚ್ಚೇ ಎಂಬಂತೆ ನಾಲಿಗೆ ಹರಿಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು.

ಇದನ್ನೂ ಓದಿ: ಮಾನಸಾಗೆ ನೀಚ ಪದ ಬಳಸಿದ ಜಗದೀಶ್‌, ತಿರುಗಿಬಿದ್ದ ಮನೆ, ಶೋ ನಡೆಸಲು ಬಿಡಲ್ಲವೆಂದು ಬಿಗ್‌ಬಾಸ್‌ಗೆ ವಕೀಲನ ಚಾಲೆಂಜ್!

ಇದರ ಬೆನ್ನಲ್ಲಿಯೇ ವಕೀಲ ಜಗದೀಶ್ ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಲು ಅವಕಾಶ ನೀಡಲಾಗಿದೆ. ಇದೀಗ ಬಿಗ್ ಬಾಸ್ ಮನೆಗೆ ಹೋಗಿದ್ದು, ಇಲ್ಲಿ ಇಬ್ಬರು ಜೈಲಿಗೆ ಹೋಗಿ ಬಂದವರಿಒದ್ದೇವೆ. ನಾನು ಜೈಲಿಗೆ ಹೋದವರಲ್ಲಿ ಸೀನಿಯರ್ ಆಗಿದ್ದರೆ, ಚೈತ್ರಾ ಕುಂದಾಪುರ ನನ್ನ ಜೂನಿಯರ್ ಆಗಿದ್ದಾರೆ. ಇನ್ನು ನಾನು ಗಂಡು ಹುಲಿಯಾದರೆ, ಚೈತ್ರಾ ಅವರು ಹೆಣ್ಣು ಹುಲಿ ಎಂದೆಲ್ಲಾ ಹೇಳಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ತಮ್ಮದೇಶ ಶೈಲಿಯಲ್ಲಿ ಮಾತಿನ ದಾಟಿ ಮಾಡಿದ್ದಾನೆ. ನನ್ನನ್ನು ಹೊರಗೆ ಕಳಿಸಿದರೆ, ಬಿಗ್ ಬಾಸ್ ಮನೆಯಲ್ಲಿ ನಡೆಸುವ ಎಲ್ಲ ಟಾಸ್ಕ್‌ಗಳ ಬಗ್ಗೆ ಎಲ್ಲರೆದುರೂ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಇಲ್ಲಿ ಅವರ ಲಾಯರ್ ಲೈಸೆನ್ಸ್ ರದ್ದಾಗಿದ್ದು, ಅದೇನು ವಾದ ಮಾಡುತ್ತಾರೋ? ಎಲ್ಲಿ ವಾದ ಮಾಡುತ್ತಾರೋ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios