"ಲಕ್ಷ್ಮೀ ನಿವಾಸ" ಧಾರಾವಾಹಿಯಲ್ಲಿ ವೆಂಕಿ ಪಾತ್ರಧಾರಿ ಚಂದ್ರಶೇಖರ್ ಶಾಸ್ತ್ರಿ ಮೊದಲು ಸಂತೋಷ್ ಪಾತ್ರಕ್ಕೆ ಆಡಿಷನ್ ನೀಡಿದ್ದರು. ಆದರೆ, ವೆಂಕಿ ಪಾತ್ರಕ್ಕೆ ಆಯ್ಕೆಯಾದರು. ರಂಗಭೂಮಿ ಹಿನ್ನೆಲೆಯಿರುವ ಚಂದ್ರಶೇಖರ್, "ನಮ್ಮ ಲಚ್ಚಿ", "ದಾಸ ಪುರಂದರ" ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa) ದೊಡ್ಡ ತಾರಾ ಬಳಗವೇ ಇದೆ. ಇದು ಲಕ್ಷ್ಮೀ ಶ್ರೀನಿವಾಸರ ಕುಟುಂಬದ ಕಥೆ ಹೇಳೋದರಿಂದ, ಆ ದೊಡ್ಡ ಕುಟುಂಬದಲ್ಲಿ ಇರುವ ಎಲ್ಲಾ ಪಾತ್ರಗಳು ಸಹ ಮುಖ್ಯವಾಗಿವೆ. ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಜನರಿಗೆ ಇಷ್ಟವಾಗುತ್ತಿದ್ದರೂ, ತನ್ನ ಮುಗ್ಧಪಾತ್ರದಿಂದ ಗಮನ ಸೆಳೆದದ್ದು ಅಂದ್ರೆ ವೆಂಕಿ ಪಾತ್ರಧಾರಿ. ವೆಂಕಿ ಲಕ್ಷ್ಮೀ ಶ್ರೀನಿವಾಸರ ದತ್ತು ಪುತ್ರ, ಆದರೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ಚೆನ್ನಾಗಿ ತಂದೆ -ತಾಯಿಯನ್ನು ನೋಡಿಕೊಳ್ಳುವ ಬಾಯಿ ಬರದ ಮಗ ವೆಂಕಿ. ಈ ಅತ್ಯದ್ಭುತವಾದ ವೆಂಕಿ ಪಾತ್ರಕ್ಕೆ ಜೀವ ತುಂಬಿದ ನಟ ಚಂದ್ರಶೇಖರ್ ಶಾಸ್ತ್ರೀ. ಆದರೆ ನಿಮಗೆ ಗೊತ್ತಾ ಚಂದ್ರಶೇಖರ್ ನಿಜವಾಗಿಯೂ ಆಡಿಶನ್ ಕೊಟ್ಟಿದ್ದು ಬೇರೆ ಪಾತ್ರಕ್ಕಂತೆ.
ಹಣಕ್ಕಾಗಿ ಮನುಷ್ಯತ್ವ ಮರೆತ ಸಂತೋಷ್ : ಇಂಥ ಮಗ ಯಾರಿಗೂ ಬೇಡಪ್ಪ ಅಂತ ಬೇಡ್ಕೊಂಡ ವೀಕ್ಷಕರು
ಇಟ್ಸ್ ಮಜಾ ಎನ್ನುವ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಚಂದ್ರಶೇಖರ್ ಶಾಸ್ತ್ರೀಯವರ (Chandrashekhar Shastry) ಸಂದರ್ಶನದ ತುಣುಕೊಂದು ರಿಲೀಸ್ ಆಗಿದೆ. ಅದರಲ್ಲಿ ಶಾಸ್ತ್ರೀ ತಾವು ಯಾವ ಪಾತ್ರಕ್ಕೆ ಆಡಿಶನ್ ಕೊಟ್ಟಿರೋದು ಅನ್ನೋದನ್ನು ಹೇಳಿದ್ದಾರೆ. ‘ಲಕ್ಷ್ಮೀ ನಿವಾಸಕ್ಕೆ ಆಡೀಶನ್ ಕೊಟ್ಟಿದ್ದು, ಇನ್ನೂ ಕಣ್ಣ ಮುಂದೇನೆ ಇದೆ. ನಾನು ಮೊದಲು ಆಡಿಶನ್ ಕೊಟ್ಟಿದ್ದು ಸಂತೋಷ್ ಕ್ಯಾರೆಕ್ಟರ್ ಗೆ (ಲಕ್ಷ್ಮೀ ಶ್ರೀನಿವಾಸರ ಹಿರಿಯ ಮಗ ಜಿಪುಣ, ಸ್ವಾರ್ಥಿ ಸಂತೋಷ್ ಪಾತ್ರಕ್ಕೆ). ಅಂದ್ರೆ ನನ್ನ ತಮ್ಮನ ಪಾತ್ರ ಮಾಡ್ತಿದ್ದಾರಲ್ಲ ಆ ಪಾತ್ರಕ್ಕೆ, ಅಲ್ಲಿ ಆಡಿಶನ್ ಕೊಟ್ಟಾಗ್ಲೇ ನನಗೆ ಗೊತ್ತಾಯ್ತು, ನಾನು ಆ ಪಾತ್ರಕ್ಕೆ ಸೂಕ್ತ ಅಲ್ಲ ಎಂದು. ಇನ್ನು ಆಡಿಶನ್ (Audition for Santhosh role) ತೆಗೆದುಕೊಳ್ಳುತ್ತಿದ್ದವರ ಮುಖ ನೋಡಿದಾಗಲೂ ಗೊತ್ತಾಯ್ತು, ನಾನು ಈ ಪಾತ್ರಕ್ಕೆ ಓಕೆ ಆಗಲ್ಲ ಅಂತ. ಅಷ್ಟೊತ್ತಿಗಾಗಲೇ ಅವರು ವೆಂಕಿ ಅನ್ನೋ ಪಾತ್ರದ ಬಗ್ಗೆ ಬರೆಯುತ್ತಿದ್ದರು. ವೆಂಕಿ ಪಾತ್ರದ ಡೈಲಾಗ್ ಕೊಟ್ಟು ನಟಿಸುವಂತೆ ಹೇಳಿದ್ರಂತೆ, ಶಾಸ್ತ್ರಈ ಮೈಕ್ ಎದುರು ನಿಂತು ಡೈಲಾಗ್ ಹೇಳಿಕೊಂಡು ನಟಿಸೋದಕ್ಕೆ ಶುರು ಮಾಡಿದ್ರಂತೆ, ಅದಕ್ಕೆ ಆಡಿಶನ್ ತೆಗೊಳಿತ್ತಿದ್ದವರು ನಕ್ಕು, ನಾವು ಡೈಲಾಗ್ ಕೊಟ್ಟಿದ್ದು, ನಿಮ್ಮ ರಿಯಾಕ್ಷನ್ ಗೆ ಮಾತ್ರ, ನೀವು ಇದರಲ್ಲಿ ಮೂಗ ಎಂದು ಬಿಟ್ಟರಂತೆ. ಆ ಟೈಮಾಲ್ಲೇ ಶಾಕ್ ಆಗಿದ್ರಂತೆ ಶಾಸ್ತ್ರಿ. ಬಳಿಕ ಆ ಕಂಟೆಂಟ್ ಅರ್ಥ ಮಾಡಿಕೊಂಡು ಅಭಿನಯಿಬಿಟ್ಟರಂತೆ. ಸಂತೋಷ್ ಪಾತ್ರ ಮಾಡುವಾಗ ಹೇಗೆ ಈ ಪಾತ್ರ ನನಗೆ ಸೂಕ್ತ ಅಲ್ಲ ಅನಿಸ್ತೋ, ಅದೇ ರೀತಿ ವೆಂಕಿ ಪಾತ್ರ ಮಾಡುವಾಗ ಕ್ಷಣಾರ್ಧದಲ್ಲಿ ನಾನು ಈ ಪಾತ್ರ ಮಾಡಬಲ್ಲೇ ಅನಿಸಿತ್ತಂತೆ ವೆಂಕಿ ಆಲಿಯಾಸ್ ಚಂದ್ರ ಶೇಖರ್ ಶಾಸ್ತ್ರಿಗೆ.
ಲಕ್ಷ್ಮಿ ನಿವಾಸ ವೆಂಕಿ -ಚೆಲುವಿ ಜೋಡಿ ಸೂಪರೋ ಸೂಪರ್ ರಂಗ…. ಅಂತಿದ್ದಾರೆ ವೀಕ್ಷಕರು
ಲಕ್ಷ್ಮೀ ನಿವಾಸದಲ್ಲಿ ಮನೆಗಾಗಿ ಮನೆಯವರಿಗಾಗಿ ಮರುಗುವ ಮುಗ್ಧ ಪಾತ್ರ ವೆಂಕಿಯದ್ದು, ತಮ್ಮನವರಿಂದ ಸದಾ ಹೀಯಳಿಸಲ್ಪಟ್ಟ, ಹಾಗೂ ಇಬ್ಬರು ಮುದ್ದಿನ ತಂಗಿಯರ ಪ್ರೀತಿಯ ಅಣ್ಣ ವೆಂಕಿ. ಒಂದು ಅಕ್ಷರ ಮಾತನಾಡದೇ ಇದ್ದರೂ ತಮ್ಮ ಅಭಿನಯದ ಮೂಲಕವೇ ವೀಕ್ಷಕರ ಕಣ್ನಂಚನ್ನು ಇದ್ದೆ ಮಾಡಿದ ಮಹಾನ್ ನಟ ಚಂದ್ರಶೇಖರ್ ಶಾಸ್ತ್ರಿ. ಧಾರಾವಾಹಿಯಲ್ಲಿ ವೆಂಕಿ ಕಥೆ ಇನ್ನಷ್ಟೇ ರಿವೀಲ್ ಆಗಬೇಕಿದೆ. ವೆಂಕಿಗೂ - ಜಯಂತ್ ಗೂ ನಡುವೆ ಏನು ಸಂಬಂಧ ಇದೆ. ವೆಂಕಿ ಮಾತನಾಡದೇ ಇರಲು ಜಯಂತ್ ನೇ ಕಾರಣವೇ ಅನ್ನೋದು ಸಹ ತಿಳಿದು ಬರಬೇಕಾಗಿದೆ.
ಮೂಲತಃ ಶಿವಮೊಗ್ಗದವರಾದ ವೆಂಕಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಚಂದ್ರಶೇಖರ್ ಶಾಸ್ತ್ರಿ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಲಚ್ಚಿಯ ಮಾವ ಆಗಿದ್ದರು, ದಾಸ ಪುರುಂದರ ಧಾರಾವಾಹಿಯಲ್ಲಿ ದೀಪಕ್ ಸುಬ್ರಹ್ಮಣ್ಯ (Deepak Subramanya) ಜೊತೆ ಇವರು ಕೂಡ ನಟಿಸಿದ್ದರು. ಶಾಸ್ತ್ರಿ ರಂಗಭೂಮಿ ಕಲಾವಿದರು ಆಗಿದ್ದು, ನಾಟಕಗಳಲ್ಲಿ ಅಭಿನಯಿಸಿದ್ದರಿಂದಲೆ ಇವರ ಅಭಿನಯ ಅಮೋಘವಾಗಿ ಮೂಡಿ ಬರುತ್ತಿದೆ. ಉಘೇ ಉಘೇ ಮಾದೇಶ್ವರ ಧಾರಾವಾಹಿಯಲ್ಲೂ ಶಾಸ್ತ್ರಿ ನಟಿಸಿದ್ದರು.
