Asianet Suvarna News Asianet Suvarna News

ಮಾಲಲ್ಲಿ ಬಿಲ್ ಮಾಡಿಸುತ್ತಿದ್ದ ಚಿನ್ನು ನೋಡಿ ತುಂಬಾ ಹೊತ್ತು ನಿಲ್ಬೇಡ ಎಂದ್ರು ಫ್ಯಾನ್ಸ್

ಲಕ್ಷ್ಮಿ ಬಾರಮ್ಮ ನಟಿ ಕವಿತಾ ಗೌಡ ಸದ್ಯ ಖುಷಿಯಲ್ಲಿದ್ದಾರೆ. ಮನೆಗೊಂದು ಮಗು ಬರ್ತಿದೆ ಎನ್ನುವ ಸಂಭ್ರಮ ಅವರಲ್ಲಿದೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಕವಿತಾ ಮಾಲ್ ನಲ್ಲಿ ಬಿಲ್ ಮಾಡ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರು ದಂಗಾಗಿದ್ದಾರೆ.
 

Lakshmi Baramma Fame Kavita Gowda paying bil lin mall Video Goes Viral roo
Author
First Published Jul 8, 2024, 12:27 PM IST

ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ ಗೌಡ ತಾಯಿಯಾಗ್ತಿದ್ದಾರೆ. ಚಂದನ್ ಹಾಗೂ ಕವಿತಾ ತಮ್ಮ ಖುಷಿ ಸುದ್ದಿಯನ್ನು ಕೆಲ ದಿನಗಳ ಹಿಂದೆ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದರು. ಕವಿತಾ ಗೌಡ ಬೇಬಿ ಬಂಪ್ ವಿಡಿಯೋ ಕೂಡ ಹಂಚಿಕೊಂಡಿದ್ದರು. ಈಗ ಕವಿತಾ ಗೌಡ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ನಂತ್ರ ಕವಿತಾ (Kavita) ನಟನೆ ಕಡಿಮೆ ಮಾಡಿದ್ದರು. ಈ ವರ್ಷ ಪುಣ್ಯವತಿ ಧಾರಾವಾಹಿ (serial) ಯಲ್ಲಿ ಗೆಸ್ಟ್ ರೋಲ್ ಮಾಡಿದ್ದ ಕವಿತಾ ಗೌಡ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಕವಿತಾ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಈಗ ಕವಿತಾ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕವಿತಾ ಮಾಲ್ ನಲ್ಲಿ ಶಾಪಿಂಗ್ ಮಾಡಿದ್ದು, ಅದರ ಬಿಲ್ ತಾವೇ ಮಾಡ್ತಿರೋದನ್ನು ನೋಡ್ಬಹುದು. ಎರಡು ಪಿಲ್ಲೋ ಖರೀದಿ ಮಾಡಿರುವ ಕವಿತಾ, ಅದ್ರ ಬಿಲ್ ಮಶಿನ್ ಸಹಾಯದಿಂದ ತಾವೇ ಮಾಡ್ತಿದ್ದಾರೆ. ಬಿಲ್ ಆಗ್ತಿದ್ದಂತೆ ಖುಷಿಯಲ್ಲಿ ಡಾನ್ಸ್ ಮಾಡೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. 

ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ತಮ್ಮನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್

ಈ ವಿಡಿಯೋಕ್ಕೆ 22 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಅನೇಕರು ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಸಣ್ಣಪುಟ್ಟ ವಿಷ್ಯಗಳನ್ನೂ ವಿಡಿಯೋ ಮಾಡುವ ಅಗತ್ಯತೆ ಏನಿದೆ ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ತುಂಬು ಗರ್ಭಿಣಿ ತುಂಬಾ ಹೊತ್ತು ನಿಲ್ಲಬಾರದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಓವರ್ ಆಕ್ಟಿಂಗ್ ಅಂತಾ ಚಿನ್ನು ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಸೆಲ್ಸ್ ಮೆನ್ ಕೆಲಸ ಒಳ್ಳೆಯದು ಎಂದು ಮತ್ತೊಬ್ಬರು ಚಿನ್ನು ಕಾಲೆಳೆದಿದ್ದಾರೆ. 

ಚಿನ್ನು ಹಾಗೂ ಗೊಂಬೆ ಇಬ್ಬರೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಜನರ ಮನಸ್ಸು ಗೆದ್ದಿದ್ದರು. ಈಗ ಇಬ್ಬರೂ ಒಂದೇ ಸಮಯದಲ್ಲಿ ಫ್ರೆಗ್ನೆಂಟ್. ಅವರನ್ನು ಅಕ್ಕ – ತಂಗಿ ಎಂದೇ ಈಗ್ಲೂ ಜನರು ಗುರುತಿಸ್ತಾರೆ. ಅಕ್ಕ – ತಂಗಿ ಇಬ್ಬರೂ ಒಟ್ಟಿಗೆ ಗರ್ಭಧರಿಸಿದ್ದು, ಸ್ಪರ್ಧೆ ಅಂದ್ರೆ ಇದೇ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. 

ಚಂದನ್ ಹಾಗೂ ಕವಿತಾ ಪ್ರೀತಿಸಿ ಮದುವೆ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆಗ್ಲೇ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ್ಮೇಲೆ ಮೇ 14, 2021ರಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆ ಆದ್ಮೇಲೆ ಚಿನ್ನು ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಕವಿತಾ ಗೌಡ ಬ್ಯುಸಿನೆಸ್ ಗೆ ಹೆಚ್ಚು ಫೋಕಸ್ ಮಾಡಿದಂತಿದೆ. ಪತಿ ಜೊತೆ ಒಂದಾದ್ಮೇಲೆ ಒಂದರಂತೆ ಹೊಟೇಲ್ ಶುರು ಮಾಡಿ, ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. 

ಕೆಲ ದಿನಗಳ ಹಿಂದೆ ಚಂದನ್ ಹಾಗೂ ಕವಿತಾ ಪಾಲಕರಾಗ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಅದಕ್ಕೆ ಈ ಜೋಡಿ ಉತ್ತರ ನೀಡಿದ್ದರು. ಬೇಬಿ ಸ್ಕ್ಯಾನ್ ಫೋಟೋ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದರು. ತಾವು ಶೀಘ್ರದಲ್ಲೇ ಪಾಲಕರಾಗುತ್ತಿದ್ದೇವೆ ಎಂದಿದ್ದರು. ಅದಾದ್ಮೇಲೆ ಕವಿತಾ ತಮ್ಮ ಬೇಬಿ ಬಂಪ್ ವಿಡಿಯೋವನ್ನು ಹಂಚಿಕೊಂಡಿದ್ದರು. 

ಅನುಶ್ರೀ ಕಣ್ಣೀರ ಕಥೆ ಕೇಳಿದರೆ ಕರುಳು ಕಿತ್ತು ಬರುತ್ತೆ, ಕೆನ್ನೆ ಮೇಲೆ ಹನಿ ಜಾರದಿದ್ದರೆ ನಿಮಗಿದೆ ಬಹುಮಾನ..!

ತಮಿಳು ಧಾರಾವಾಗಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಕವಿತಾ, ಮಹಾಭಾರತಂ ಧಾರವಾಹಿಯಲ್ಲಿ ಮೊದಲು ನಟಿಸಿದ್ದರು. ತೆಲುಗಿನ ಧಾರಾವಾಹಿಗಳಲ್ಲಿ ಕೂಡ ಕವಿತಾ ನಟಿಸಿದ್ದರು. ನಂತ್ರ ಕನ್ನಡದ ಧಾರವಾಹಿ ಮೂಲಕ ಚಿನ್ನು ಎಂದೇ ಮನೆಮಾತಾದ ಕವಿತಾ, ಆರು ವರ್ಷಗಳ ಕಾಲ ಈ ಧಾರಾವಾಹಿಯಲ್ಲಿ ನಟಿಸಿದ್ದರು. ವಿದ್ಯಾ ವಿನಾಯಕದಲ್ಲಿಯೂ ನಟಿಸಿದ್ದ ಚಿನ್ನ, ಡಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ಡಾನ್ಸ್ ಕಲೆಯನ್ನು ಪ್ರದರ್ಶಿಸಿದ್ದರು. 

Latest Videos
Follow Us:
Download App:
  • android
  • ios