ತಾಂಡವ್​ಗೆ ಬುದ್ಧಿ ಕಲಿಸಲು ಪಣತೊಟ್ಟಿರುವ ಕುಸುಮಾ, ಮನೆಗೆ ಬಂದ ಸೊಸೆ ಭಾಗ್ಯಲಕ್ಷ್ಮಿ ಮೇಲೆ ರೇಗಾಡಿದ್ದಾಳೆ. ಗಂಡಸರ ಕೊಬ್ಬು ಇಳಿಸೋದು ಹೇಗೆ ಎಂದಿದ್ದಾಳೆ. ನೆಟ್ಟಿಗರು ಏನೆಂದ್ರು?  

 ಮನೆ, ಕುಟುಂಬವನ್ನು ಸಂಭಾಳಿಸುವುದು ಅದೇನೂ ಸುಲಭದ ಕೆಲಸವಲ್ಲ. ಹೆಣ್ಣೆಂದರೆ ಅದರಲ್ಲಿಯೂ ಗೃಹಿಣಿಯೆಂದರೆ ತಾತ್ಸಾರದಿಂದ ಕಾಣುವ ಗಂಡಸರು ಬೇಕಾದಷ್ಟು ಮಂದಿ ಇದ್ದಾರೆ. ಹೊರಗೆ ಹೋಗಿ ದುಡಿದರೆ ಮಾತ್ರ ಅದು ದುಡಿಮೆ ಎನ್ನುವ ಹುಚ್ಚು ಅನಿಸಿಕೆಯಲ್ಲಿ ಇರುವವರು ಸಾಕಷ್ಟು ಮಂದಿ. ಮನೆ, ಕುಟುಂಬ, ಮಕ್ಕಳು, ಪತಿ, ಅತ್ತೆ-ಮಾವ ಎಲ್ಲರನ್ನೂ ಸಂಭಾಳಿಸಿಕೊಂಡು ಎಲ್ಲರ ಆಗುಹೋಗುಗಳನ್ನು ನೋಡಿಕೊಂಡು ತನ್ನ ಆಸೆಗಳನ್ನೆಲ್ಲಾ ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು, ಇತರರಿಗಾಗಿ ದುಡಿಯುವ ಸಾಮಾನ್ಯ ಗೃಹಿಣಿಯ ಬಗ್ಗೆ ಕೆಲವು ಗಂಡಸರಿಗೆ ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸವೇ. ಇದೇ ಕಾರಣಕ್ಕೆ ಆಕೆಯನ್ನು ಹೀಯಾಳಿಸುವವರು ಕಾಣಸಿಗುತ್ತಾರೆ. ಅದರಲ್ಲಿಯೂ ಮನೆ ಒಡೆಯುವುದಕ್ಕಾಗಿಯೇ ಇರುವ ಹೆಣ್ಣು ಸಿಕ್ಕರಂತೂ ಮುಗಿದೇ ಹೋಯ್ತು. ಮನೆಯಲ್ಲಿ ಕೆಲಸ ಮಾಡುವ ಹೆಂಡತಿಯನ್ನು ಸದಾ ಹೀಯಾಳಿಸುವ ಗಂಡನಿಗೆ ಬುದ್ಧಿ ಕಲಿಸಬೇಕು ಎಂದರೆ, ಅವರ ಕೊಬ್ಬು ಇಳಿಸಬೇಕು ಎಂದ್ರೆ ಮನೆ ಕೆಲ್ಸ ಮಾಡಿಸಬೇಕು ಎನ್ನುವ ಚರ್ಚೆ ಇದೀಗ ಶುರುವಾಗಿದೆ.

ಹೌದು. ಇದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ. ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್​ ಪತ್ನಿ ಭಾಗ್ಯಳಿಗೆ ಹೇಳಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳನ್ನೇ ಬಿಟ್ಟು ಹೋಗಿರುವ ತಾಂಡವ್​ಗೆ ಪತ್ನಿ ಭಾಗ್ಯ ಬೇಡವಾಗಿದೆ. ಆದ್ದರಿಂದ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದಾನೆ. ಆಕೆ ಮನೆ ಬಿಟ್ಟು ಕೂಡ ಹೋಗಿಯಾಗಿದೆ.

ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ? ತೆರೆಯ ಹಿಂದಿನ ವಿಡಿಯೋ ರಿಲೀಸ್​

View post on Instagram

ಮನೆಬಿಟ್ಟು ಹೋಗುವ ಸಮಯದಲ್ಲಿ, ಭಾಗ್ಯ ಪತಿಗೆ ಚಾಲೆಂಜ್​ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಖುಷಿಯಾಗಿದ್ದಾನೆ. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್​ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್​ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇಂಥದ್ದೊಂದು ಕುತೂಹಲದ ತಿರುವಿಗೆ ಬಂದು ನಿಂತಿದೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​. 

ಮನೆಯನ್ನು ತಾನು ನಿಭಾಯಿಸಬಲ್ಲೆ ಎಂದು ತೋರಿಸಲು ತಾಂಡವ್​ ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದಾನೆ. ಅದೂ ಸಾಮಾನ್ಯದವಳಲ್ಲ. ಹೈ ಫೈಯವಳು. ತಾನು ಒಂದು ಗಂಟೆಯಲ್ಲಿ ಮನೆಯ ಎಲ್ಲಾ ಕೆಲಸವನ್ನೂ ಮಾಡಿ ಮುಗಿಸುವುದಾಗಿ ಹೇಳಿದ್ದಾಳೆ. ಆದರೆ ಒಂದು ಗಂಟೆಯಲ್ಲಿ ಅರ್ಧಂಬರ್ಧ ತಿಂಡಿ ಮಾಡಿ ಹೋಗಿದ್ದಾಳೆ. ಎಲ್ಲರೂ ಅರೆಹೊಟ್ಟೆಯಲ್ಲಿದ್ದಾರೆ. ಗುಂಡನಿಗೆ ಎರಡು ಇಡ್ಲಿ ಸಾಕಾಗದೇ ಅಮ್ಮನಿಗೆ ಕರೆ ಮಾಡಿದ್ದಾನೆ. ಇರುವ ವಿಷಯ ಎಲ್ಲಾ ತಿಳಿಸಿದ್ದಾನೆ. ಎಷ್ಟೆಂದರೂ ಹೆತ್ತ ಕರುಳಲ್ಲವೆ? ಎಲ್ಲರೂ ಮನೆಯಲ್ಲಿ ಅರೆ ಹೊಟ್ಟೆಯಲ್ಲಿ ಇರುವುದನ್ನು ಕೇಳಿ ಚುರುಕ್​ ಎಂದ ಭಾಗ್ಯ ಊಟ ರೆಡಿಮಾಡಿಕೊಂಡು ಬಂದಿದ್ದಾಳೆ. ಆದರೆ ತಾಂಡವ್​ ಅದನ್ನು ತೆಗೆದುಕೊಳ್ಳುವುದಿಲ್ಲ. ಅದೇ ಇನ್ನೊಂದೆಡೆ, ಷರತ್ತು ಮುಗಿಯುವ ಮುನ್ನವೇ ಮನೆಗೆ ಬಂದ ಸೊಸೆಯನ್ನು ಕಂಡು ಅತ್ತೆ ಕುಸುಮಾ ಕೆಂಡಾಮಂಡಲ ಆಗಿದ್ದಾಳೆ. ನಿನಗೆ ಬುದ್ಧಿ ಇಲ್ವಾ? ನಾವೆಲ್ಲಾ ಸೇರಿ ಮನೆಗೆಲಸ ಮಾಡುವುದು ಎಷ್ಟು ಕಷ್ಟ ಎಂದು ತಾಂಡವ್​ಗೆ ಬುದ್ಧಿ ಕಲಿಸೋಣ ಎಂದುಕೊಂಡ್ರೆ ನೀನು ಮನೆಗೆ ಬಂದಿದ್ದೇಕೆ ಎಂದು ಬೈದಿದ್ದಾಳೆ. ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಗಂಡಸರಿಗೆ ಬುದ್ಧಿ ಬರಬೇಕೆಂದ್ರೆ ಹೀಗೆ ಮಾಡಬೇಕು ಎಂದಿದ್ದಾಳೆ. ಈ ಪ್ರೊಮೋ ನೋಡಿ ಹಲವರು ಕುಸುಮಳ ಮಾತಿಗೆ ತಲೆದೂಗಿದ್ದಾರೆ. ನಿಮ್ಮ ಅನಿಸಿಕೆ ಏನು? 

ಪ್ರೀತಿನಾ? ಮನೆಯವರಾ? ನಿಮ್ಮ ಆಯ್ಕೆ ಯಾವುದು? ಪ್ರೇಕ್ಷಕರು ಹೇಳಿದ್ದೇನು, ನಿಮ್ಮ ನಿಲುವೇನು?

View post on Instagram