Dance Karnataka Dance: ಕೈಯಿಲ್ಲದ ಅದ್ಭುತ ಡ್ಯಾನ್ಸರ್‌ನ ಬಾಚಿ ತಬ್ಬಿದ್ರು ಕಿಚ್ಚ ಸುದೀಪ್
ಜೀ ಕನ್ನಡ(Zee Kannada)ದಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'(Dance Karnataka Dance) ರಿಯಾಲಿಟಿ ಶೋ ನಡೀತಿದೆ. ಇದರಲ್ಲಿ ಈ ವಾರ ಕಿಚ್ಚ ಸುದೀಪ್ ವಿಶೇಷ ಅತಿಥಿ. ಈ ವೇದಿಕೆಯಲ್ಲಿ ನಡೆದ ಡ್ಯಾನ್ಸ್ ಪರ್ಫಾಮೆನ್ಸ್, ಅದರಲ್ಲೂ ಬಳ್ಳಾರಿಯ ತರಕಾರಿ ಮಾರ್ಕೆಟಲ್ಲಿ ತರಕಾರಿ ಮೂಟೆ ಹೊತ್ತು ತೂಕಕ್ಕೆ ಹಾಕೋ ಹುಡುಗನ ಪರ್ಫಾಮೆನ್ಸ್ ಕಂಡು ಸುದೀಪ್ ಮಾತೇ ಬರದೆ ನಿಂತ ಕ್ಷಣಗಳು ಎಂಥಾ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಈ ಸಂಚಿಕೆ ಅಪ್ಪು ಅವರನ್ನೂ ನೆನಪಿಸಿಕೊಂಡದ್ದು ವಿಶೇಷ.
ಜೀ ಕನ್ನಡ ವಾಹಿನಿ(Zee Kannada) ಯಲ್ಲಿ ವೀಕೆಂಡ್(Weekend) ಅಂದರೆ ಶನಿವಾರ ಮತ್ತು ಭಾನುವಾರ ಭರ್ಜರಿ ಮನರಂಜನೆ ನೀಡುತ್ತಿರುವ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'(Dance Karnataka Dance). ಈ ರಿಯಾಲಿಟಿ ಶೋ(Reality Show)ನಲ್ಲಿ ಡ್ಯಾನ್ಸರ್ಸ್ ಅದ್ಭುತ ಪರ್ಫಾಮೆನ್ಸ್(Performance) ನೋಡಿ ಈ ಬಾರಿ ಅಚ್ಚರಿ ಪಡುವ ಸರದಿ ಕಿಚ್ಚ ಸುದೀಪ್(Kichcha Sudeep) ಅವರದು. ಸುದೀಪ್ ಅವರಿಗೆ ತನ್ನ ಕಣ್ಮುಂದೆ ನಡೆದ ಈ ಪಫಾಮೆನ್ಸ್ ಅದೆಷ್ಟು ರೋಮಾಂಚನೆ ನೀಡಿತು ಅಂದರೆ, 'ಈ ಡ್ಯಾನ್ಸರ್ಸ್ ನ ಶೇ.1 ಪರ್ಸೆಂಟ್ ಡ್ಯಾನ್ಸ್ ಮಾಡಲಿಕ್ಕೂ ನನ್ನಿಂದಾಗಲ್ಲ' ಅನ್ನೋ ಮಾತನ್ನು ಅವರು ಉದ್ಗರಿಸಿದರು. 'ನಂಗೆ ಡ್ಯಾನ್ಸ್ ಬರಲ್ಲ, ನಾನು ಒಳ್ಳೆ ಡ್ಯಾನ್ಸರ್ ಅಲ್ವೇ ಅಲ್ಲ' ಅನ್ನೋ ಮಾತನ್ನು ಸುದೀಪ್ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ ಅವರ ಮಾತನ್ನು ಅವರೇ ಸುಳ್ಳು ಮಾಡಿದ್ದು 'ರಾ ರಾ ರಕ್ಕಮ್ಮ'(Ra Ra Rakkamma) ಹಾಡಿನಲ್ಲಿ. ಆದರೆ ಈ ಡ್ಯಾನ್ಸ್ ಪರ್ಫಾಮೆನ್ಸ್ ನ ಕ್ರೆಡಿಟ್(Credit) ಅನ್ನೂ ಸುದೀಪ್ ಡ್ಯಾನ್ಸರ್ ಜಾನಿ ಮಾಸ್ಟರ್(Johnny Master) ಗೆ ಕೊಟ್ಟು ಬಿಟ್ಟರು. ಇದೀಗ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅದ್ಭುತ ಡ್ಯಾನ್ಸ್ ಮಾಡುವ ಕರ್ನಾಟಕದ ಪ್ರತಿಭೆಗಳನ್ನು ಮನದುಂಬಿ ಹೊಗಳಿದ್ದಾರೆ. ಅವರ ಪ್ರತಿಭೆಯ ಮುಂದೆ ತನ್ನದೇನೂ ಅಲ್ಲ ಅಂತ ಹೇಳೋ ಮೂಲಕ ತಾನೆಷ್ಟು ನಿಗರ್ವಿ ಅನ್ನೋದನ್ನು ರಿವೀಲ್(Reveal) ಮಾಡಿದ್ದಾರೆ.
ಇದನ್ನೂ ಓದಿ: ಡ್ರಾಮ ಜೂನಿಯರ್ಸ್ ವೇದಿಕೆಯಲ್ಲಿ ಜನಪ್ರಿಯ ನ್ಯಾ. ಶ್ರೀ ಬಿ ವೀರಪ್ಪ
ಈ ಶೋದಲ್ಲಿ ಕಣ್ಣಲ್ಲಿ ನೀರು ತರಿಸುವಂಥಾ ಪರ್ಫಾಮೆನ್ಸ್ ಒಂದಿತ್ತು. ಬಡತನದ ನೋವು, ನಲಿವುಗಳನ್ನು ಭಾವನಾತ್ಮಕವಾಗಿ ಅಷ್ಟೇ ಅದ್ಭುತ ಸ್ಟೆಪ್ಟ್(Steps) ಮೂಲಕವೂ ಹೇಳಿದ್ದು 'ದೇವರೆ ಬೇಗ ಬಾ' ಅನ್ನೋ ಹಾಡಿಗೆ ಬಳ್ಳಾರಿ ಹುಡುಗ ಹೃಷಿಕೇಶ್ ಮತ್ತು ತಂಡ ಮಾಡಿದ ಡ್ಯಾನ್ಸ್. ಅಣ್ಣಾ ಹಸಿವೂ.. ಅನ್ನುತ್ತಲೇ ಡ್ಯಾನ್ಸ್, ಎಮೋಶನ್ಸ್(Emotions) ಮೂಲಕ ಹಸಿವಿನ ರೌದ್ರತೆಯ ಪ್ರದರ್ಶನ ಮಾಡಿದ ಪುಟ್ಟ ಹುಡುಗಿ, ಅವಳ ನೋವು ಕಂಡೂ ಏನೂ ಮಾಡಲಾಗದೇ ಅಸಹಾಯಕನಾದ ಕೈಯಿಲ್ಲಿದ ಆಕೆಯ ಅಣ್ಣ.. ಅವರ ಜೊತೆಗೆ ರೋಚಕ ಸ್ಟೆಪ್ಸ್ ಮೂಲಕ ಗಮನ ಸೆಳೆದ ಸಹ ನೃತ್ಯಗಾರರು.. ಇದನ್ನು ನೋಡಿ ಜಡ್ಜಸ್ ಗಳಲ್ಲೊಬ್ಬರಾದ ಶಿವಣ್ಣ ಕಣ್ಣೀರಾದರು. 'ಬಡತನದಿಂದ ಬಂದವರಿಗೇ ಬಡತನದ ನೋವು ಗೊತ್ತಾಗೋದು' ಅನ್ನೋ ಮಾತು ಹೇಳಿದ್ರು. ಒಬ್ಬೊಬ್ಬ ತೀರ್ಪುಗಾರರೂ ಈ ಡ್ಯಾನ್ಸ್ ಗೆ ಮನದುಂಬಿ ಚಪ್ಪಾಳೆ ತಟ್ಟಿದರು. ಆದರೆ ಈ ದೃಶ್ಯ ಕಂಡು ಭಾವುಕರಾದ ಕಿಚ್ಚ ಸುದೀಪ್ ವೇದಿಕೆಗೇ ಹೋಗಿ ಕೈಯಿಲ್ಲದ ನೃತ್ಯಪಟುವನ್ನು ಬಾಚಿ ತಬ್ಬಿಕೊಂಡರು. ಈ ಹುಡುಗನ ಹಿನ್ನೆಲೆಯೂ ಬಡತನದಲ್ಲೇ ಇದೆ. ಈತ ಬಳ್ಳಾರಿಯವನು. ಅಲ್ಲಿನ ತರಕಾರಿ ಮಂಡಿಯಲ್ಲಿ ಮೂಟೆ ಹೊತ್ತು ತೂಕಕ್ಕೆ ಹಾಕುವ ಕೆಲಸ ಮಾಡುತ್ತಾನೆ. ಕೈಯಿಲ್ಲದ ಹುಡುಗನ ಕರುಣಾಜನಕ ಬದುಕಿನ ದರ್ಶನ ಒಂದು ಕಡೆ, ಕೈಯಿಲ್ಲದಿದ್ದರೂ ಎಲ್ಲ ಡ್ಯಾನ್ಸರ್ಸ್‌ಗಿಂತ ಅದ್ಭುತ ಪರ್ಫಾಮೆನ್ಸ್ ನೀಡುವ ಪ್ರತಿಭೆ ಇನ್ನೊಂದು ಕಡೆ. ತನ್ನ ಕಣ್ಣೆದುರಿನ ಈ ದೃಶ್ಯ ಕಂಡು ಒಂದು ಕ್ಷಣ ಮಾತು ಬರದೇ ನಿಬ್ಬೆರಗಾಗಿ ನಿಂತ ಸುದೀಪ್, ಮರುಕ್ಷಣ ವೇದಿಕೆಗೇ ಹೋಗಿ ಡ್ಯಾನ್ಸ್ ಮಾಡಿ ಮೈಯೆಲ್ಲ ಬೆವೆರಿದ್ದ ಆ ಹುಡುಗನನ್ನು ಬಾಚಿ ತಬ್ಬಿಕೊಂಡರು. ಸುದೀಪ್‌ರಂಥಾ ಸೂಪರ್ ಸ್ಟಾರ್‌ನಿಂದ ಇಂಥದ್ದೊಂದು ಪ್ರತಿಕ್ರಿಯೆಯ ನಿರೀಕ್ಷೆ ಇಲ್ಲದ ಆ ಕಲಾವಿದನೂ ಭಾವುಕನಾದ.
ಇನ್ನೊಂದೆಡೆ ಅಪ್ಪು(Puneeth Rajkumar) ಅವರನ್ನು ಈ ವೇದಿಕೆಯಲ್ಲಿ ಸ್ಮರಿಸಿಕೊಂಡಿದ್ದೂ ವಿಶೇಷವಾಗಿತ್ತು. ಪೈಲ್ವಾನ್ಸ್ ಚಿತ್ರದ ಆಡಿಯೋ ಲಾಂಚ್(Audio Launch) ವೇಳೆ ಇದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಾಗ ಅಲ್ಲಿ ಅಪ್ಪು ಅವರೂ ಇದ್ದಿದ್ದು ವಿಶೇಷ. ಆ ಸಂದರ್ಭವನ್ನು ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ವಿಶೇಷವಾಗಿ ಸ್ಮರಿಸಲಾಯ್ತು. 'ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ' ಹಾಡು ಬಾಲ್ಯದಲ್ಲಿ ತನ್ನನ್ನು ಹೇಗೆ ಆವರಿಸಿತ್ತು, ಅಪ್ಪು ಅವರು ಬಿಟ್ಟು ಹೋದ ಖಾಲಿತನ ತನ್ನನ್ನು ಯಾವ ರೀತಿ ಕಂಗೆಡಿಸುತ್ತಿದೆ ಅನ್ನೋದನ್ನು ಸುದೀಪ್ ಮನಸ್ಸು ತುಂಬಿ ಸ್ಮರಿಸಿಕೊಂಡರು.
ಇದನ್ನೂ ಓದಿ: Ramachari: ನಾರಾಯಣ ಶಾಸ್ತ್ರಿಗೆ ಮುಂಜಾವದಲ್ಲೇ ಬಿತ್ತು ರಾಮಾಚಾರಿ ಚಾರು ಮದುವೆ ಸಪ್ನ!
ಜಗತ್ತಿನಾದ್ಯಂತ ಸೆನ್ಸೇಶನ್ ಸೃಷ್ಟಿಸಿರುವ 'ರಾ ರಾ ರಕ್ಕಮ್ಮ' ಹಾಡಿಗೆ ಕಿಚ್ಚ ಇಲ್ಲಿ ಡ್ಯಾನ್ಸ್ ಮಾಡಿದರು.
ಜೀ ಕರ್ನಾಟಕದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಇಂದು ರಾತ್ರಿ ಹಾಗೂ ನಾಳೆ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ಜೊತೆಗೆ ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ಚಿನ್ನಿ ಪ್ರಕಾಶ್ ಮಾಸ್ಟರ್, ಅರ್ಜುನ್ ಜನ್ಯಾ ತೀರ್ಪುಗಾರರಾಗಿರುತ್ತಾರೆ.