ಕಿಚ್ಚ ಸುದೀಪ್ ದಂಪತಿ ಹಳೆಯ ವಿಡಿಯೋ ವೈರಲ್, ಅದರಲ್ಲೇನಿದೆ ಶಾಕಿಂಗ್ ವಿಷ್ಯ?

ಕಿಚ್ಚಸುದೀಪ್ ಹಾಗು ಪ್ರಿಯಾ ಸುದೀಪ್ ಜೋಡಿ ಹಲವರಿಗೆ ಅಚ್ಚುಮೆಚ್ಚು. ಈ ಜೋಡಿಗೆ ಸಾನ್ವಿ ಎಂಬ ಮಗಳಿದ್ದಾಳೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಜೋಡಿ ಬಗ್ಗೆ ಬಹಳಷ್ಟು ಒಳ್ಳೊಳ್ಳೆಯ ಕಾಮೆಂಟ್‌ಗಳು ಹರಿದಾಡುತ್ತ ಇರುತ್ತವೆ. ಇವರಿಬ್ಬರ ಹಳೆಯ ವಿಡಿಯೋ..

Kichcha Sudeep and Priya sudeep in Bigg Boss Kannada season 2 video becomes viral srb

ಸ್ಯಾಂಡಲ್‌ವುಡ್ ನಟ ಕಿಚ್ಚಸುದೀಪ್ (Kichcha Sudeep) ಹಾಗು ಪ್ರಿಯಾ ಸುದೀಪ್ (Priya Sudeep) ಜೋಡಿ ಹಲವರಿಗೆ ಅಚ್ಚುಮೆಚ್ಚು. ಈ ಜೋಡಿಗೆ ಸಾನ್ವಿ ಎಂಬ ಮಗಳಿದ್ದಾಳೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಜೋಡಿ ಬಗ್ಗೆ ಬಹಳಷ್ಟು ಒಳ್ಳೊಳ್ಳೆಯ ಕಾಮೆಂಟ್‌ಗಳು ಹರಿದಾಡುತ್ತ ಇರುತ್ತವೆ. ಇವರಿಬ್ಬರ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅದೀಗ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಆ ವಿಡಿಯೋದಲ್ಲೇನಿದೆ, ನೋಡಿ.. 

ಬಿಗ್ ಬಾಸ್ ವೇದಿಕೆಗೆ ಆಗಮಿಸಿದ ಪ್ರಿಯಾ 'ನಮಸ್ತೇ ಕಿಚ್ಚಾ ಸುದೀಪ್ ಅವರೇ' ಅಂತಾರೆ. ಅದಕ್ಕೆ ಕೌಂಟರ್ ಕೊಟ್ಟ ಸುದೀಪ್ 'ನಮಸ್ತೇ, ಚೆನ್ನಾಗಿದೀರಾ?' ಎಂದು ಕೇಳುತ್ತಾರೆ. ತಾವು ನನ್ನನ್ನು ನೋಡಬಹುದು' ಅಂತಾರೆ. ಅದಕ್ಕೆ ಸುದೀಪ್ 'ಅಯ್ಯೋ. ಬೇಕಾ ನಮಗೆ.. ' ಅಂತಾರೆ. 'ಚೆನ್ನಾಗ್ ಕಾಣಿಸ್ತೀರಾ ಕೂರ್ಚಿ ಮೇಲೆ ಕೂತ್ಕೊಂಡ್ರೆ' ಎಂದು ಪ್ರಿಯಾಗೆ ಸುದೀಪ್ 'ಅಲ್ವೇ..' ಅಂತಾರೆ ಸುದೀಪ್. 

ದೊಡ್ಮನೆಲಿ ಗೊತ್ತಿದ್ದೋ ಗೊತ್ತಿಲ್ದೇನೋ ಒಂದು ಹಾರ್ಟ್ ಕ್ಯಾಪ್ಚರ್ ಆಯ್ತು; ಲಾಯರ್ ಜಗದೀಶ್!

ಮುಂದುವರೆದ ಪ್ರಿಯಾ 'ಅಲ್ಲ, ಪ್ರತಿ ವಾರ ಇಲ್ಲಿ ಈ ಕೂರ್ಚಿನಲ್ಲಿ ಒಬ್ರನ್ನು ಕೂರಿಸಿ ನೀವು ಇಲ್ಲಿ ನಿಂತು ಪ್ರಶ್ನೆಗಳನ್ನ ಕೇಳ್ತಾ ಇದ್ರಿ ಅಲ್ವೇ? ಈಗ ಹೇಗಿನ್ನಿಸ್ತಾ ಇದೆ?' ಎನ್ನಲು ಸುದೀಪ್ ಚೆನ್ನಾಗಿದೆ, ತುಂಬಾ ಚೆನ್ನಾಗಿದೆ..' ಅಂತಾರೆ. ಅಷ್ಟರಲ್ಲಿ ಬಿಗ್ ಬಾಸ್ ಧ್ವನಿ ಕೇಳಿಸುತ್ತೆ, 'ಪ್ರಿಯಾ ಅವರೇ, ನೀವೀಗ ಸುದೀಪ್ ಅವರಿಗೆ ಪ್ರಶ್ನೆ ಕೇಳಬೇಕು ಎಂದು ಅಪೇಕ್ಷಿಸಲಾಗಿದೆ' ಎನ್ನಲು ಪ್ರಿಯಾ ಓಕೆ ಎಂದು ರೆಡಿಯಾಗಿ ಪ್ರಶ್ನೆ ಕೇಳಲು ಶುರು ಮಾಡುತ್ತಾರೆ. 

'ಸುದೀಪ್ ಅವ್ರೇ, ಬಿಗ್ ಬಾಸ್ ಅಂದ್ರೆ ನಿಮ್ ಪ್ರಕಾರ ಏನು?' ಎಂಬ ಪ್ರಿಯಾ ಪ್ರಶ್ನೆಗೆ ಸುದೀಪ್ 'ಬಿಗ್ ಬಾಸ್ ಅಂದ್ರೆ ಇಲ್ಲಿರೋ ಟೆಕ್ನಿಶಿಯನ್ಸ್, ಬಿಗ್ ಬಾಸ್ ಸೀನ್ 1 & 2 ರಲ್ಲಿ ಬಂದ ಕಂಟೆಸ್ಟಂಟ್ಸ್, ಪ್ರಿ ಎಮೋಶನ್ಸ್, ಪ್ರತಿ ಸೆಂಟಿಮೆಂಟ್ಸ್, ಸಂಬಂಧಪಟ್ಟಂತ ಎಲ್ಲಾ ಟಾಸ್ಕ್‌, ಎವ್ರಿತಿಂಗ್ ಈಸ್ ಮೈ ಪಾರ್ಟ್ ಆಫ್ ಲೈಫ್, ಬಿಗ್ ಬಾಸ್ ಈಸ್ ಡೆಫಿನೆಟ್ಲೀ ಗುಡ್ ಲೈಫ್..' ಎನ್ನುತ್ತಾರೆ ನಟ ಸುದೀಪ್. ಅಷ್ಟಕ್ಕೇ ಈ ವಿಡಿಯೋ ಮುಗಿದಿದೆ. ಅಂದಹಾಗೆ, ಆಗ ಬಿಗ್ ಬಾಸ್ ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿತ್ತು. 

ಹರಿದಾಡಿದ್ದ 'ಗ್ರಾನೈಟ್' ಗಾಳಿಸುದ್ದಿಗೆ ಅಪ್ಪು ಹೇಳಿದ್ದೇನು? ನೆಟ್ಟಿಗರು ಏನಂತ ಕಾಮೆಂಟ್ ಮಾಡ್ತಿದಾರೆ?

ಒಟ್ಟಿನಲ್ಲಿ ಹೇಳಬೇಕು ಎಂದರೆ, ಈಗ ಆ ಹಳೆಯ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆಯೋ ಏನೋ! ಸದ್ಯ ಬಿಗ್ ಬಾಸ್ ಸೀಸನ್ 11 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. 10 ಸೀಸನ್ ಮುಗಿಸಿ 11ರಲ್ಲಿ ಹೋಸ್ಟ್ ಮಾಡುತ್ತಿರುವ ಸುದೀಪ್, ಇದೇ ತಮ್ಮ ಕೊನೆಯ ಬಿಗ್ ಬಾಸ್ ಶೋ ಎಂದಿದ್ದಾರೆ. ಮುಂದಿನ ಸೀಸನ್‌ಅನ್ನು ತಾವು ಹೋಸ್ಟ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಕಳೆದ ವಾರ ಸುದೀಪ್ ಅಮ್ಮ ಸರೋಜಾ ಅವರು ಅಸು ನೀಗಿದ ಕಾರಣಕ್ಕೆ, ಈ ವಾರ ಹೋಸ್ಟ್ ಆಗಿ ಸುದೀಪ್ ಬದಲು ನಿರ್ದೇಶಕ ಯೋಗರಾಜ್ ಭಟ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಈ ವಿಡಿಯೋ ವೈರಲ್ ಆಗ್ತಿದೆ!

 

 

Latest Videos
Follow Us:
Download App:
  • android
  • ios