ಹರಿದಾಡಿದ್ದ 'ಗ್ರಾನೈಟ್' ಗಾಳಿಸುದ್ದಿಗೆ ಅಪ್ಪು ಹೇಳಿದ್ದೇನು? ನೆಟ್ಟಿಗರು ಏನಂತ ಕಾಮೆಂಟ್ ಮಾಡ್ತಿದಾರೆ?
ನಟರಾದ ಬಳಿಕ ಒಂದು ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಬಗ್ಗೆ ಹಬ್ಬಿದ್ದ ಗಾಳಿಸುದ್ದಿ ಬಗ್ಗೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದರು. ಆ ಬಗ್ಗೆ ಪುನೀತ್ 'ಇನ್‌ಫ್ಯಾಕ್ಟ್ ಆ ಟೈಮಲ್ಲಿ ಪ್ರಾಬ್ಲಂ ಆದಾಗ, ಎಷ್ಟೋ ಕಡೆಗಳಲ್ಲಿ, ಹಲವು ಪೇಪರ್‌ಗಳಲ್ಲಿ ನ್ಯೂಸ್ ಏನಿತ್ತು ಅಂದ್ರೆ..
ಕನ್ನಡದ ಹೆಮ್ಮೆಯ ಕಂದ, 'ಕರ್ನಾಟಕ ರತ್ನ' ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಒಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆಗಿನ್ನೂ ಪುನೀತ್ ಅವರು ಸಿನಿಮಾ ನಟರಾಗಿರಲಿಲ್ಲ, ಬಿಸಿನೆಸ್ ಮಾಡುತ್ತಿದ್ದರು. ಆ ಸಮಯದಲ್ಲಿ ಅದೊಂದು ಗಾಳಿಸುದ್ದಿ ಸಾಕಷ್ಟು ಹಬ್ಬಿತ್ತು. ಅದಕ್ಕೆ ಪುನೀತ್ ರಾಜ್‌ಕುಮಾರ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು.
'ಅಪ್ಪು' ಸಿನಿಮಾ ಬಳಿಕ ಡಾ ರಾಜ್‌ಕುಮಾರ್ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ನಟರೆಂಬ ಪಟ್ಟಕ್ಕೆ ಬಂದಿದ್ದು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಅದಕ್ಕೂ ಮೊದಲು ಅವರು 'ಭಕ್ತ ಪ್ರಹ್ಲಾದ', 'ಚಲಿಸುವ ಮೋಡಗಳು' ಹೀಗೆ ಹಲವು ಸಿನಿಮಾಗಳಲ್ಲಿ ಬಾಲಕಲಾವಿದರಾಗಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪುನೀತ್ ಎಂಟ್ರಿ ಕೊಟ್ಟಿದ್ದು 2002ರಲ್ಲಿ. ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾ 26 ಏಪ್ರಿಲ್ 2002ರಲ್ಲಿ ( 26 April 2002) ತೆರೆಗೆ ಬಂದಿತ್ತು. ಆ ಬಳಿಕ ಸ್ಯಾಂಡಲ್‌ವುಡ್ ಪ್ರೇಕ್ಷಕರು ಅವರನ್ನು 'ಅಪ್ಪು' ಎಂದೇ ಕರೆಯತೊಡಗಿದರು.
ನಟರಾದ ಬಳಿಕ ಒಂದು ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಬಗ್ಗೆ ಹಬ್ಬಿದ್ದ ಗಾಳಿಸುದ್ದಿ ಬಗ್ಗೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದರು. ಆ ಬಗ್ಗೆ ಪುನೀತ್ 'ಇನ್‌ಫ್ಯಾಕ್ಟ್ ಆ ಟೈಮಲ್ಲಿ ಪ್ರಾಬ್ಲಂ ಆದಾಗ, ಎಷ್ಟೋ ಕಡೆಗಳಲ್ಲಿ, ಹಲವು ಪೇಪರ್‌ಗಳಲ್ಲಿ ನ್ಯೂಸ್ ಏನಿತ್ತು ಅಂದ್ರೆ, ನಾನು ಗ್ರಾನೈಟ್ ಬಿಸಿನೆಸ್ ಮಾಡ್ತಿದ್ದೆ, ನನ್ನಿಂದ ತೊಂದ್ರೆಯಾಗಿ ನಮ್ಮ ತಂದೆಯವ್ರು ಕಿಡ್ನಾಪ್ ಆಗ್ಬಿಟಿದ್ರು..
ವೈರಲ್ ಆಗ್ತಿರೋ ಆ್ಯಂಕರ್ ವಿಡಿಯೋ, ಹೀಗ್ ಮಾಡ್ಬಹುದಾ ಅಂತಿರೋ ನೆಟ್ಟಿಗರು!
ಹಲವಾರು ಈ ಥರ ನ್ಯೂಸ್ ಬಂತು.. ಆ ಟೈಮ್‌ನಲ್ಲಿ ನಾನು ಗ್ರಾನೈಟ್ ಬಿಸಿನೆಸ್ (Granite Business) ಮಾಡ್ತೀನಿ ಅಂತ ಹೇಳಿದಾಗ 'ಇಲ್ಲೀಗಲ್ ಗ್ರಾನೈಟ್ ಬಿಸಿನೆಸ್ ಅಂತ ನನ್ ಫೋಟೋನೇ ಬಂದ್ಬಿಟ್ಟಿತ್ತು. ನಮ್ ತಂದೆಯವ್ರು ನೀನು ಈ ಬಿಸಿನೆಸ್ ಮಾಡೋದೇ ಬಿಟ್ಬಿಡು ಅಂತ. ಆದ್ರೆ ನಂಗೆ, ನಾನೇನೋ ಬೇರೆ ಬಿಸಿನೆಸ್ ಮಾಡ್ತಿದೀನಿ, ನಂಗೇನ್ ಹೀಗೆಲ್ಲಾ ಹೇಳಿ ಈ ಥರ ಎಲ್ಲಾ ಹಾಕ್ತಿದಾರೆ ಅಂತ.. ಯಾವ್ದೋ ಸ್ಟೇಜ್ ಮೇಲೆ ಹೋದಾಗ, ನಾನಿನ್ನೂ ಆಗ ಸಿನಿಮಾದಲ್ಲಿ ಆಕ್ಟ್ ಮಾಡ್ತಾ ಇರ್ಲಿಲ್ಲ..
ಮೈಕಲ್ಲಿ ಹಾಗೆಲ್ಲಾ ಕೇಳಿದಾಗ, ನಾನು ಕೆಳಗಡೆ ಬಂದವ್ನು ಹೊಡೆಯೋಕೆಲ್ಲಾ ಹೋಗ್ಬಿಟ್ಟಿದೀನಿ.. 'ನಿನ್ ಕೆಲಸ ಏನಿದ್ಯೋ ನೀನ್ಮಾಡು ಅಂತ! ನನ್ಗೇನು ಅಂದ್ರೆ, ನಂದು ಬಿಸಿನೆಸ್ಸು, ಅಕಸ್ಮಾತ್ ಏನಾದ್ರೂ ಆಗಿದ್ರೆ ಅದಕ್ಕೆ ಲಾ ಅಂಡ್ ಆರ್ಡರ್ ಇದೆ, ಆಚೆ ಕಡೆ ಇರೋನು ಯಾರು ಕಮೆಂಟ್ ಮಾಡೋಕೆ? ಫಾರ್ ವಾಟ್? ಅಂತ ನನ್ನ ಮನಸ್ಸಿಗೆ ಅನ್ನಿಸೋದು.. ಐ ವೆಂಟುದ ಲಾಟ್ ಆಫ್ ಪೇನ್..
ಅದರಲ್ಲೂ ಮುಖ್ಯವಾಗಿ, ಆ ಟೈಮಲ್ಲಿ ಅದನ್ನ ಪೇಪರ್‌ನಲ್ಲಿ ಹಾಕ್ಕೊಂಡ್ರೆ ಓಕೆ ಬಿಡಿ! ಆದ್ರೆ, ನಮ್ ತಂದೆ ಕಿಡ್ನಾಪ್ ಆದಾಗ, ಆ ನ್ಯೂಸ್‌ನ ಇದಕ್ಕೆ ರಿಲೇಟ್ ಮಾಡಿದಾಗ್ಲಂತೂ ನನಗೆ ಸಿಕ್ಕಾಪಟ್ಟೆ ನೋವಾಯ್ತು! ನಾನು ಗ್ರಾನೈಟ್ ಬಿಸಿನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ, ಇಲ್ಲ, ಚಾಮರಾಜ ನಗರದಲ್ಲಿ ಮಾಡ್ತಾ ಇದೀರಾ, ಅಲ್ಲೇನೋ ಆಗ್ತಾ ಇತ್ತಂತೆ, ಹಾಗೆ ಹೀಗೆ.. ಅಲ್ಲ, ನಂಗೇನು ಅಷ್ಟು ಬುದ್ದಿ ಇಲ್ವಾ ನಾನೇನ್ ಮಾಡ್ತಾ ಇದೀನಿ ಅಂತ..
ಕೂಗಿದ್ರೂ ಪಕ್ಕದಲ್ಲಿ ಹೆಂಡತಿಯೂ ಇಲ್ಲ, ಸ್ನೇಹಿತೆಯೂ ಇಲ್ಲ: ಭಾರೀ ಬೆನ್ನು ನೋವು, ಅಯ್ಯೋ ದರ್ಶನ್!
ನಂಗೆ ಆ ಟೈಮ್‌ಲ್ಲಿ ಮನಸ್ಸಿಗೆ ತುಂಬಾ ಎಫೆಕ್ಟ್ ಆಯ್ತು. ಫ್ಯಾಮಿಲಿ ಸಪೋರ್ಟ್ ಇತ್ತು, ಯಾಕಂದ್ರೆ ಅವ್ರಿಗೆಲ್ಲಾ ನಿಜ ಏನು ಅಂತ ಗೊತ್ತು ತಾನೆ? ಅದು ಆಚೆ ಕಡೆ ಮಾತಾಡ್ತಾ ಇರೋ ವಿಷ್ಯ ಅಷ್ಟೇನೇ. ಅದೇನಕ್ಕೆ ಮಾತಾಡ್ತಾ ಇದ್ರು, ಅದು ಎಲ್ಲಿಂದ ರೈಸ್ ಆಯ್ತು ಅಂತಾನೂ ಗೊತ್ತಿಲ್ಲ..!' ಅಂದಿದ್ದಾರೆ ನಟ ಪುನೀತ್ ರಾಜ್‌ಕುಮಾರ್.
ಈಗ ವೈರಲ್ ಆಗ್ತಿರೋ ಈ ವಿಡಿಯೋ ಬಗ್ಗೆ, ಸಹಜವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತಿವೆ. ಕೆಲವರು 'ಹೌದು, ನಟ ಪುನೀತ್ ರಾಜ್‌ಕುಮಾರ್ ಅವ್ರು ಸರಿಯಾಗಿಯೇ ಹೇಳಿದ್ದಾರೆ. ಯಾರೇ ತಪ್ಪು ಮಾಡಿದರೂ ಲಾ ಅಂಡ್ ಆರ್ಡರ್ ಇದೆ, ಬೇರೆಯವರು ಕಾಮೆಂಟ್ ಮಾಡೋದು ಬೇಡ.. ಇಂಥ ದೇವತಾ ಮನುಷ್ಯ ಬಗ್ಗೆ ನೀಚ ಮಾತುಗಳನ್ನು ಆಡೋದು ಬೇಡ' ಎಂದಿದ್ದಾರೆ...' ಎಂದಿದ್ದಾರೆ.