Asianet Suvarna News Asianet Suvarna News

ಕಾಫಿ ಹೀರುತ್ತಾ ಸುದೀಪ್​ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕೊಡ್ತಿರೋ ಮುನ್ಸೂಚನೆ ಏನು? ಕುತೂಹಲದ ಎಪಿಸೋಡ್​

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್​ ಕಾಫಿ ಕೊಟ್ಟಿದ್ದಾರೆ. ಏನಿದರ ಮುನ್ಸೂಚನೆ? 
 

Kiccha Sudeep gave coffee to the contestants in the Bigg Boss house suc
Author
First Published Dec 30, 2023, 4:04 PM IST

ಈ ಬಾರಿಗೆ ಬಿಗ್​ಬಾಸ್​ನಲ್ಲಿ ನೆಗೆಟಿವ್​ ವಿಷಯಗಳೇ ಜಾಸ್ತಿ ಆಗಿಬಿಟ್ಟಿವೆ. ಆರಂಭದಲ್ಲಿ ವರ್ತೂರು ಸಂತೋಷ್​ ಅರೆಸ್ಟ್​ ಆಗಿದ್ದು, ನಂತರ ಟಾಸ್ಕ್​ ಹೆಸರಿನಲ್ಲಿ ಸಂಗೀತಾ, ಡ್ರೋನ್​ ಪ್ರತಾಪ್​ ಆಸ್ಪತ್ರೆ ಸೇರಿದ್ದು ಸೇರಿದಂತೆ ಅಗತ್ಯಕ್ಕಿಂತ ಹೆಚ್ಚಿಗೆ ಗಲಾಟೆ, ರಾದ್ಧಾಂತ ನಡೆದುಹೋಗಿವೆ. ಆದರೆ ಇದನ್ನು ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವಾಗತಿಸಿದ್ದು, ಬಿಗ್​ಬಾಸ್​ನ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಎಲ್ಲಾ ರಿಯಾಲಿಟಿ ಷೋ, ಸೀರಿಯಲ್​ಗಳನ್ನು ಹಿಂದಿಕ್ಕಿ ಬಿಗ್​ಬಾಸ್​ ಟಾಪ್​1 ರೇಟಿಂಗ್​ ಪಡೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಬಿಗ್​ಬಾಸ್​ ಅನ್ನು ಇನ್ನೂ ಎರಡು ವಾರಗಳ ಕಾಲಮುಂದೂಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಸಾಮಾನ್ಯವಾಗಿ ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳು 100 ದಿನ ಮನೆಯಲ್ಲಿ ಇರಲಿದ್ದಾರೆ. ಆದರೆ ಈ ಹಿಂದೆ 117 ದಿನ ಬಿಗ್​ಬಾಸ್​ ಸ್ಪರ್ಧೆ ನಡೆದಿತ್ತು. ಇದೀಗ ಅದಕ್ಕೂ ಮೀರಿ ಎರಡು ವಾರ ಬಿಗ್​ಬಾಸ್​ ಸ್ಪರ್ಧೆ ಮುಂದೂಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ.
 
ಇದರ ನಡುವೆಯೇ ಪ್ರತಿ ವಾರ ಕಿಚ್ಚನ ಪಂಚಾಯಿತಿ ನಡೆಯುವುದು ಗೊತ್ತೇ ಇದೆ. ಅದರಲ್ಲಿ ಕೆಲವು ಕುತೂಹಲ, ವಿಶೇಷವೂ ಇರಲಿದೆ. ಈ ವಾರ ಸುದೀಪ್​ ಅವರು ಕಾಫಿ ಹೀರುತ್ತಾ ಸ್ಪರ್ಧಿಗಳಿಗೂ ಕಾಫಿ ಕೊಟ್ಟಿ ದ್ದಾರೆ. ವಾರದ  ಕಥೆ  ಮಾತನಾಡಲು ಶುರು ಮಾಡಿದ್ದಾರೆ. ಮನೆಯವರೆಲ್ಲರೂ ಬಂದಿದ್ದು, ಎಲ್ಲರೂ ವಾಪಸ್​ ಹೋಗಿದ್ದಾರೆ. ಈಗ ಆಟ ಮುಂದುವರೆಯಲಿದೆ ಎಂದಿದ್ದಾರೆ ಸುದೀಪ್​. ಇದರ ಪ್ರೊಮೋ ಕಲರ್ಸ್​  ಕನ್ನಡ ವಾಹಿನಿ ಶೇರ್​ ಮಾಡಿದೆ.ಫಿ ಮೂಲಕ ಕಿಚ್ಚ ಯಾವುದರ ಮುನ್ಸೂಚನೆ ಕೊಡ್ತಿದ್ದಾರೆ? ಎಂದು ಶೀರ್ಷಿಕೆ ಕೊಡಲಾಗಿದೆ. ಇದರ ಊಹೆಯನ್ನು ಸದ್ಯ ಪ್ರೇಕ್ಷಕರಿಗೆ ಬಿಡಲಾಗಿದೆ. ಎಲ್ಲರೂ ಕಾಫಿ ಹೀರುವುದನ್ನು ನೋಡಬಹುದು. ಬಿಸಿಬಿಸಿ ಕಾಫಿ ಕೊಡುತ್ತಲೇ ಸ್ಪರ್ಧಿಗಳಿಗೆ ಬಿಸಿಬಿಸಿ ಮಾತು ಆಡುತ್ತಾರೆಯೋ ಕಾದು ನೋಡಬೇಕಿದೆ. 

'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ' ಬರೆದವ್ರು ಇವ್ರಂತೆ! ಹಿಟ್ಲರ್​ ಕಲ್ಯಾಣದ ಅಂತರಾ ಹೇಳ್ತಾರೆ ಕೇಳಿ...

ಇದರ ನಡುವೆಯೇ, ವಿನಯ್‌ ಮತ್ತು ಸಂಗೀತಾ ನಡುವಿನ ಬಿರುಸು ಜೋರಾಗಿದೆ. ವಿನಯ್​ ಪತ್ನಿ ಅಕ್ಷತಾ ಕೂಡ ಬಿಗ್​ಬಾಸ್​ ಮನೆಗೆ ಬಂದಾಗ ಈ ವಿಷಯ ತಿಳಿಸಿದ್ದರು. ಅವರ ಪತ್ನಿ ಮಾತನಾಡಿರುವುದು ಸಾಕಷ್ಟು ಕುತೂಹಲ ಮೂಡಿತ್ತು. ಅದರ ನಡುವೆಯೇ ಡ್ರೋನ್​ ಪ್ರತಾಪ್​ ಪಾಲಕರು ಮನೆಗೆ ಎಂಟ್ರಿ ಕೊಟ್ಟಿದ್ದು ಅವರ ಮಾತುಕತೆ ನೋಡಿ ಫ್ಯಾನ್ಸ್​ ಭಾವುಕರಾಗಿದ್ದರು. ಇವೆಲ್ಲವುಗಳ ನಡುವೆಯೇ ಸಂಗೀತಾ ಮತ್ತು ಪ್ರತಾಪ್​ ಬಗ್ಗೆ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಇವರಿಬ್ಬರು ಗೆಲ್ಲಬೇಕು ಎಂಬ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿ ಪ್ರಚಾರ ಜಾಸ್ತಿಯಾಗಿದೆ. ಇವರಿಬ್ಬರಿಗೂ ಫ್ಯಾನ್ಸ್​ ಸಂಖ್ಯೆ ಜಾಸ್ತಿಯೇ ಆಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಪರಿಣಾಮ ಏನು ಎಂದು ಕಾಣಿಸಲಿದೆ.  ಇದರ ನಡುವೆಯೇ ಇಂದು 12ನೇ ವಾರದಲ್ಲಿ ಇಂದು ಕಿಚ್ಚನ ಪಂಚಾಯ್ತಿ ನಡೆಯುತ್ತದೆ. ಪ್ರತಿ ವಾರದಂದತೆ ಇಂದು ಕೂಡ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಯಲಿದೆ. ಸದ್ಯ ಇದರ ಪ್ರೋಮೋವನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾಗಲೇ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಟ್ಟು 12 ವಾರಗಳೇ ಕಳೆದು ಹೋಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ಸಂಖ್ಯೆ ವಾರದಿಂದ ವಾರಕ್ಕೆ ಇಳಿಯುತ್ತಿದೆ. ಕಿಚ್ಚ ವೇದಿಕೆಗೆ ಎಂಟ್ರಿ ಕೊಡುತ್ತಲೇ ಕಾರ್ತಿಕ್​, ವಿನಯ್​ರನ್ನು ಕರೆದು​ ಸ್ಟೋರ್​ ರೂಮ್​ಗೆ ಹೋಗಿ ಬನ್ನಿ ಎಂದು ಹೇಳುವುದು ಕೂಡ ಕುತೂಹಲಕ್ಕೆ  ಕಾರಣವಾಗಿದೆ. ಏನಿದು ಎನ್ನುವುದನ್ನು ಕಾದು ನೋಡಬೇಕಿದೆ. 

1+1=5 ಅಂದ್ರೂ ನಿಜನೇ: ಇದು ಕರೀನಾ ಕಪೂರ್​ ಹೊಸ ವರ್ಷದ ಮಂತ್ರವಂತೆ! ಏನಿದರ ಅರ್ಥ ಗೊತ್ತಾ?
 

Follow Us:
Download App:
  • android
  • ios