Asianet Suvarna News Asianet Suvarna News

ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ವಿದಾಯ, ಕಿಚ್ಚನ ಅಧಿಕೃತ ಘೋಷಣೆ!

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ ನಿರೂಪಕ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. 11ನೇ ಸೀಸನ್ ತಮ್ಮ ಕೊನೆಯ ನಿರೂಪಣೆ ಎಂದು ಘೋಷಿಸಿದ್ದಾರೆ. ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಬೇರೆಡೆಗೆ ತಮ್ಮ ನಡೆಯನ್ನು ಮುಂದುವರಿಸುವ ಸಮಯ ಬಂದಿದೆ ಎಂದು ಸುದೀಪ್ ತಿಳಿಸಿದ್ದಾರೆ.

Kiccha Sudeep announced quit hosting bigg boss kannada show after 11 years gow
Author
First Published Oct 13, 2024, 11:17 PM IST | Last Updated Oct 14, 2024, 12:10 AM IST

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ಗುಡ್‌ ಬೈ ಘೋಷಿಸಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್‌ 11 ನನ್ನ ಕೊನೆಯ ನಿರೂಪಣೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. 10 ವರ್ಷ ಪೂರೈಸಿ 11 ನೇ ವರ್ಷಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಇಷ್ಟು ವರ್ಷ ನಡೆಸಿ ಕೊಟ್ಟ ಸುದೀಪ್ ಈಗ ಏಕಾ ಏಕಿ ಅಧಿಕೃತವಾಗಿ ಘೋಷಣೆ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

#BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು.  ನಾನು ಈಗ  ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು  ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ  ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಲವ್ ಮತ್ತು ಹಗ್‌  ಎಂದು ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಸ್ಟೇಜ್ ಮೇಲೆ ಎಲ್ಲರೆದುರು ಸಲ್ಮಾನ್‌ ಖಾನ್ ಮುದ್ದಾಡಿದ ಮಲ್ಲಿಕಾ ಶೆರಾವತ್!

ಭರ್ಜರಿ ಟಿಆರ್​ಪಿ (Target Rating Point) ಮತ್ತು ಟಿವಿಆರ್​ (Television Rating Point) ಪಡೆದುಕೊಳ್ಳುವ ಮೂಲಕ ಉಳಿದ ಎಲ್ಲಾ ರಿಯಾಲಿಟಿ ಷೋ ಮತ್ತು ಸೀರಿಯಲ್​ಗಳನ್ನು ಹಿಂದಿಕ್ಕಿದೆ. ಇದೇ ಪೋಸ್ಟರ್ ಅನ್ನು ಹಾಕಿ ಸುದೀಪ್‌ ವಿದಾಯದ ಘೋಷಣೆ ಮಾಡಿದ್ದಾರೆ. ಇದೀಗ ಬಿಗ್​ಬಾಸ್​ 9.9. ಟಿವಿಆರ್​   ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ರೇಟಿಂಗ್​ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಅವರು ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೇಕ್​ ಕಟ್​ ಮಾಡುವ ಮೂಲಕ ಬಿಗ್​ಬಾಸ್​ ತಂಡವು ಇದನ್ನು ಸೆಲೆಬ್ರೇಟ್​ ಮಾಡಿದೆ. 

ಕಿಚ್ಚನ ಪೋಸ್ಟ್ ಗೆ ಎಲ್ಲರೂ ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ನೀವಿಲ್ಲದೆ ಬಿಗ್‌ಬಾಸ್ ಇಲ್ಲ ಅಣ್ಣ. ಕಿಚ್ಚನಿಲ್ಲದೆ ಬಿಗ್‌ಬಾಸ್‌ ಇಲ್ಲ ಎಂದು ಕೆಲವು ಮತ್ತೆ ಕೆಲವರು ಗೋಲ್ಡನ್ ಇರಾ ಎಂಡ್‌ ಆಯ್ತು ಎಂದು   ಪ್ರತಿಕ್ರಿಯೆ ನೀಡಿದ್ದಾರೆ.

ರಿಲೇಶನ್‌ಶಿಪ್ ನಲ್ಲಿದ್ದು ಬ್ರೇಕಪ್ ಆಗಿರೋ ಧರ್ಮ-ಅನುಷಾ! ಬಿಗ್‌ಬಾಸ್‌ ಮನೆಯಲ್ಲಿ ವಿಷ್ಯ ತಿಳಿದು ಐಶ್ವರ್ಯಾ ಬೇಸರ

 ಟಿವಿಆರ್ ಎಂದರೆ  ಟಿವಿ ಕಾರ್ಯಕ್ರಮವನ್ನು ವೀಕ್ಷಿಸುವ  ಪ್ರೇಕ್ಷಕರ ಶೇಕಡಾವಾರು ಸಂಖ್ಯೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನಸಂಖ್ಯೆ ಆಧಾರದ ಮೇಲೆ ಎಷ್ಟು ಜನರು ಒಂದು ಸೀರಿಯಲ್​, ರಿಯಾಲಿಟಿ ಷೋ ಅಥವಾ ಇನ್ನಾವುದೇ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ.  ಅದೇ ಇನ್ನೊಂದೆಡೆ, ಟಿವಿ ಆಧರಿತ ಜಾಹೀರಾತು ಪ್ರಚಾರವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆಧಾರದ ಮೇಲೆ ಟಿಆರ್​ಪಿ ಅಳೆಯಲಾಗುತ್ತದೆ. 

Latest Videos
Follow Us:
Download App:
  • android
  • ios