ಬಿಗ್‌ಬಾಸ್ ಮನೇಲಿ ಕಿಚ್ಚ ಸುದೀಪ್ ಘರ್ಜನೆ: ಇಷ್ಟವಿದ್ದರೆ ಇರಿ ಇಲ್ಲಾಂದ್ರೆ ಬಾಗಿಲು ತಕ್ಕೊಂಡು ಹೋಗ್ತಾಯಿರಿ!
ಬಿಗ್‌ಬಾಸ್ ಸೀಸನ್ 10ರ ಕಂಟೆಸ್ಟಂಟ್‌ಗಳಾದ ವಿನಯ್, ನಮ್ರತಾ, ತನಿಷಾ ಹಾಗೂ ಮೈಕೆಲ್ ಅವರಿಗೆ ಕಿಚ್ಚ ಸುದೀಪ್ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ.
ಬೆಂಗಳೂರು (ಜ.06): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋ ಮುಕ್ತಾಯಕ್ಕೆ ಇನ್ನೂ ಎರಡು ವಾರಗಳು ಮಾತ್ರ ಬಾಕಿಯಿವೆ. ಆದರೆ, ಬಿಬ್‌ಬಾಸ್ ಕಂಟೆಸ್ಟೆಂಟ್‌ಗಳು ಆಲಸ್ಯದಿಂದ ನಡೆದುಕೊಂಡಿದ್ದಕ್ಕೆ ಕಿಚ್ಚ ಸುದೀಪ್ ಭರ್ಜರಿಯಾಗಿಯೇ ಬೆಂಡಿತ್ತಿದ್ದಾರೆ. ಇಷ್ಟವಾದರೆ ಇರಿ, ಇಲ್ಲಾಂದ್ರೆ ಇಲ್ಲಿಂದ ಬಾಗಿಲು ತೆರೆದುಕೊಂಡು ಹೋಗ್ತಾಯಿರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಿಕೊಡುವಾಗ ಕಂಟೆಸ್ಟಂಟ್‌ಗಳೊಂದಿಗೆ ಮಾತನಾಡುವಾಗ ಅವರ ವಿರುದ್ಧ ಕಿಡಿಕಾರಿದರು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲ ಕಂಟೆಸ್ಟಂಟ್‌ಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಮ್ರತಾ ವಿನಯ್ ಅಂಡ್ ಮೈಕೆಲ್ ಹಾಗೂ ತನಿಷಾ ಅವರು ಯಾವುದಕ್ಕೂ ಕೈ ಎತ್ತಲಿಲ್ಲ. ನಾನು ಇದನ್ನು ಏನಕ್ಕೆ ಮಾಡುತ್ತಿದ್ದೇನೆ. ಈಗ ಒಂದು ಓಟಿಂಗ್ ಮತ್ತು ರೇಟಿಂಗ್ಸ್ ಕೇಳ್ತೀನಿ ಕೈ ಎತ್ತಿರಿ ಅಂತಾ. ನಿಮಗೆ ಏನು ಅನಿಸುತ್ತದೆ ಹೇಳಿ ಅಂತಾನೂ ಕೇಳ್ತೀನಿ. ಅದಕ್ಕೆ ಕರೆಕ್ಟಾಗಿ ನೀವು ಉತ್ತರಾನೂ ಕೊಟ್ಟರೆ, ನೀವು ಸರಿಯಾಗಿ ಸ್ಪಂದಿಸಿದರೆ ನಾವು ಕೂಡ ಏನಾದ್ರು ಮಾತಾಡೋಣ ಅನ್ಕೋತೀವಿ ಎಂದರು.
Watch: ವಿರಾಟ್ ಕೊಹ್ಲಿಯ ಹುಡುಗಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಮೊದಲ ಆಡಿಷನ್ ವಿಡಿಯೋ ವೈರಲ್!
ಮುಂದುವರೆದು, ಸುಮ್ನೆ ಒಂದು ಹಿಂಟ್ ಕೊಡ್ತೇನೆ. ನನ್ನತ್ರ ಬೇಡ, ನಾನು ಸರಿಯಾಗಿಲ್ಲ. ಗೌರವ ಶುರುವಾಗೋದು ನಿಮ್ಮೆಲ್ಲರನ್ನು ನೀಟಾಗಿ ನಿಮ್ಮನ್ನು ಕೂರಿಸಿಕೊಂಡು ನಾನು ನಿಂತುಕೊಂಡು ಮಾತನಾಡುತ್ತಿದ್ದೇನೆ ಅಲ್ವಾ ಅಲ್ಲಿಂದಲೇ ಆರಂಭವಾಗುತ್ತದೆ. ನಿಮಗೆ ಇಷ್ಟವಿದ್ದರೆ ಇಲ್ಲವೆಂದರೆ ಬಾಗಿಲು ತಕ್ಕೊಂಡು ಹೋಗ್ತಾಯಿರಿ ಎಂದು ಬಾಗಿಲ ಕಡೆಗೆ ಕೈ ಮಾಡಿ ತೋರಿಸಿದರು.
ಇನ್ನು ಕಳೆದ ಮೂರ್ನಾಲ್ಕು ದಿನದ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಡ್ರೋನ್ ಪ್ರತಾಪ್ ಅವರು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೂ ಮುನ್ನ ಬಿಗ್‌ಬಾಸ್ ಮನೆಗೆ ವಾಪಸ್ ಆಗಮಿಸಿದ್ದಾರೆ. ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬೆನ್ನಲ್ಲೇ ಪ್ರತಾಪ್ ಅವರು ಬಿಗ್‌ಬಾಸ್ ಮನೆಯಲ್ಲಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಗ್‌ಬಾಸ್, ಸರಿಯಾಗಿ ಊಟ ಮಾಡದೇ ಇರುವುದರಿಂದ ಫುಡ್ ಪಾಯ್ಸನ್ ಆಗಿ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಕೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿತ್ತು.
ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಜಾಹ್ನವಿ ಕಪೂರ್ಗೆ ಪ್ರಶ್ನಿಸಿದ ಕರಣ್! ನಟಿ ಹೇಳಿದ್ದೇನು?
ಇನ್ನು ಇಂದು ಮಧ್ಯಾಹ್ನ ಬಿಡುಗಡೆಯಾದ ಪ್ರೊಮೊದಲ್ಲಿ ಪ್ರತಾಪ್ ಬಿಗ್‌ಬಾಸ್ ಮನೆಗೆ ಮರಳಿದ್ದಾರೆ. ಇನ್ನು ಬಾಗಿಲು ತೆರೆದು ಪ್ರತಾಪ್ ಒಳಗೆ ಬರುತ್ತಿದ್ದಂತೆ ಅವರನ್ನು ಸಂಗೀತಾ ಮತ್ತು ನಮ್ರತಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನಂತರ ದೇವರ ಪೂಜೆ ಮಾಡುವ ಮೂಲಕ ಮತ್ತೆ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು ಈ ವಾರದ ಕಳಪೆ ಪಟ್ಟ ಮೈಕಲ್ ಅವರಿಗೆ ಹೋದರೆ, ಉತ್ತಮ ಪಟ್ಟ ಕಾರ್ತಿಕ್ ಅವರ ಪಾಲಾಗಿದೆ. ಮುಂದಿನ ವಾರದ ಕ್ಯಾಪ್ಟನ್ ಆಗಿ ಸಂಗೀತಾ ಅವರು ಆಯ್ಕೆಯಾಗಿದ್ದಾರೆ. ಆದರೆ, ವರ್ತೂರು ಸಂತೋಷ್, ಕಾರ್ತಿಕ್, ತುಕಾಲಿ ಸಂತೋಷ್, ಮೈಕಲ್ ಪ್ರತಾಪ್ ಈ ವಾರದ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲಕ್ಕೆ ಎಂದು ನಾಳೆ ತಿಳಿಯಲಿದೆ.