Asianet Suvarna News Asianet Suvarna News

KBC 15: ಸರಿ ಉತ್ತರ ಗೊತ್ತಿದ್ರೂ ಏಳು ಕೋಟಿ ಕಳಕೊಂಡ ಸ್ಪರ್ಧಿ! ಉತ್ತರ ನೀವು ಹೇಳಬಲ್ಲಿರಾ?

ಕೌನ್​ ಬನೇಗಾ ಕರೋರ್​ಪತಿಯಲ್ಲಿ ಜಸ್ನಿನ್​ ಕುಮಾರ್​ ಏಳು ಕೋಟಿ ರೂಪಾಯಿ ಗೆಲ್ಲಬಹುದಾಗಿದ್ದ ಪ್ರಶ್ನೆಗೆ ಉತ್ತರಿಸದೇ ಬಿಟ್ಟರು. ನೀವು ಅದನ್ನು ಗೆಸ್​ ಮಾಡಬಲ್ಲಿರಾ?
 

KBC 15 Ep 28 Jasnil loses Rs 7 crore despite guessing the right answer suc
Author
First Published Sep 22, 2023, 3:44 PM IST

ಅಮಿತಾಭ್​ ಬಚ್ಚನ್​ ಅವರ ಅವರ ಜನಪ್ರಿಯ ಕಾರ್ಯಕ್ರಮ  ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ.  ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್​. 14 ಕಂತುಗಳನ್ನು ಪೂರೈಸಿರುವ ಈ ಷೋ, ಇದೀಗ 15ನೇ ಕಂತಿಗೆ ಪದಾರ್ಪಣೆ ಮಾಡಿದೆ. ಸಹಸ್ರಾರು ಮಂದಿ ಕೋಟ್ಯಧಿಪತಿಯಾಗುವ ಕನಸು ಹೊತ್ತು ಈ ಷೋನಲ್ಲಿ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಒಂದು ಕೋಟಿ ಗೆಲ್ಲುವ ಅವಕಾಶವಿತ್ತು. ಅದನ್ನೀಗ ಏಳು ಕೋಟಿಗೆ ಏರಿಸಲಾಗಿದೆ. ಪ್ರತಿ ಹಂತದಲ್ಲಿಯೂ ಕುತೂಹಲ ತಣಿಸುವ ಈ ಕಾರ್ಯಕ್ರಮದಲ್ಲಿ ಇದಾಗಲೇ  21 ವರ್ಷದ ಯುವಕ ಜಸ್ಕರನ್ ಸಿಂಗ್ (Jaskaran Singh)  ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. ಇದೀಗ ಜಸ್ನಿಲ್​ ಕುಮಾರ್​ ಎನ್ನುವವರು ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 

ಇಷ್ಟು ಗೆಲ್ಲುತ್ತಿದ್ದಂತೆಯೇ  ಜಸ್ನಿಲ್ ಕುಮಾರ್ ತುಂಬಾ ಭಾವುಕರಾದರು. ಇಷ್ಟು ದೊಡ್ಡ ಗೆಲುವಿನ ನಂತರ ಏನನ್ನಿಸುತ್ತಿದೆ ಎಂದು ಬಿಗ್ ಬಿ ಕೇಳಿದಾಗ  ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಜಸ್ನಿಲ್  "ಸರ್, ನನಗೆ ಕೆಬಿಸಿ ಬಗ್ಗೆ ತಿಳಿದಿರುವುದರಿಂದ, ಈ ವೇದಿಕೆಯಲ್ಲಿರಬೇಕು ಎಂಬುದು ನನ್ನ ಕನಸಾಗಿತ್ತು. 2011 ರಿಂದ ನಾನು ಇಲ್ಲಿಗೆ ಬರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.  ಜನರು ನನ್ನನ್ನು ಅಪಹಾಸ್ಯ ಮಾಡಿದರು. ಆದರೆ ಒಂದು ದಿನ ನಾನು ಅವರೆಲ್ಲರನ್ನೂ ತಪ್ಪು ಎಂದು ಸಾಬೀತುಪಡಿಸುತ್ತೇನೆ ಎಂದು ನಾನು ಭಾವಿಸಿದೆ. ಮುಂದೊಂದು ದಿನ ನನ್ನ ಇಡೀ ಜೀವನವೇ ಬದಲಾಗುತ್ತದೆ ಎಂದು ಕನಸು ಕಂಡೆ. ಇಲ್ಲಿಗೆ ಬಂದು ನನ್ನ ಬದುಕೇ ಬದಲಾಯಿತು ಎಂದರು. 

KBC-15: ಇದು ಏಳು ಕೋಟಿ ಗೆಲ್ಲಬಹುದಾಗಿದ್ದ ಪ್ರಶ್ನೆ: ನಿಮಗೇನಾದರೂ ಉತ್ತರ ಗೊತ್ತಾ?

ತಮ್ಮ  5 ವರ್ಷದ ಮಗ ತಮ್ಮನ್ನು  ಹೇಗೆ ಪ್ರೇರೇಪಿಸಿದನೆಂದು ಜಸ್ನಿಲ್ ಇದೇ ಸಂದರ್ಭದಲ್ಲಿ ಹೇಳಿಕೊಂಡರು. ಕೆಬಿಸಿಯ ಕರೆ ಬರದಿದ್ದಾಗ ನಾನು ನನ್ನ ಮಗನನ್ನು ಕೇಳುತ್ತಿದ್ದೆ, ಈ ಬಾರಿ ಕರೆ ಬರುತ್ತದೆಯೆ ಎಂದರು. ನನ್ನ ಐದು ವರ್ಷದ ಮಗ ಈ ಸಾರಿ ಖಂಡಿತ ಬರುತ್ತದೆ ಎಂದ. ಅವನ ಮಾತಿನಿಂದ ನಾನು ಸ್ಫೂರ್ತಿಗೊಂಡೆ ಅದು ನಿಜವಾಯಿತು. ನನಗೆ ಕರೆ ಬಂದಾಗ, ವಾಪಸ್​ ಬರುವಾಗ ಖುಷಿಖುಷಿಯಿಂದ ಬಾ ಎಂದು ಹೇಳಿದ. ಒಂದು ಕೋಟಿ ಗೆದ್ದ ಖುಷಿಯಲ್ಲಿ ವಾಪಸಾಗುತ್ತಿದ್ದೇನೆ ಎಂದಿದ್ದಾರೆ.
 
ಸ್ವಲ್ಪ ಮನಸ್ಸು ಮಾಡಿದ್ದರೆ ಜಸ್ನಿಲ್​ ಏಳು ಕೋಟಿ ರೂಪಾಯಿಯನ್ನು ಸುಲಭದಲ್ಲಿ ಗೆಲ್ಲಬಹುದಿತ್ತು. ಆದರೆ ಏಳು ಕೋಟಿಯ ಗೆಲ್ಲಬಹುದಾಗಿದ್ದ 16ನೇ ಪ್ರಶ್ನೆಯನ್ನು ಕೇಳಿದಾಗ ಜಸ್ನಿಲ್​ ಅವರಿಗೆ ಗೊಂದಲ ಉಂಟಾಯಿತು. ಉತ್ತರ ತಪ್ಪಾಗಿದ್ದರೆ ಬಹುದೊಡ್ಡ ಮೊತ್ತವನ್ನು ಕಳೆದುಕೊಳ್ಳಬೇಕಿತ್ತು. ಆದ್ದರಿಂದ ಆಟವನ್ನು ಒಂದು ಕೋಟಿ ರೂಪಾಯಿಗೇ ಬಿಟ್ಟುಬಿಟ್ಟರು. ಒಂದು ಕೋಟಿ ಗೆದ್ದ ಬಳಿಕ, ಸಹಜವಾಗಿ ಮುಂದಿನ ಪ್ರಶ್ನೆಯನ್ನು ಅಮಿತಾಭ್​ ಕೇಳುತ್ತಾರೆ. ಅದರಂತೆ ಅವರು ಏಳು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಗೆ ಜಸ್ನಿಲ್​ ಸರಿಯಾಗಿಯೇ ಉತ್ತರಿಸಿದ್ದರು. ಆದರೆ ಏಳು ಕೋಟಿ ಗೆಲ್ಲುವ ಅವಕಾಶ ಅವರಿಗೆ ಸಿಗಲಿಲ್ಲ. ಏಕೆಂದರೆ ಅವರು ಆಟವನ್ನು ಕೈಬಿಟ್ಟಾಗಿತ್ತು.

ಅಷ್ಟಕ್ಕೂ ಆ ಏಳು ಕೋಟಿ ರೂಪಾಯಿಗಳ ಪ್ರಶ್ನೆ ಯಾವುದು ಎಂದು ನೋಡುವುದಾದರೆ,  ಲೀನಾ ಗಾಡೆ, ಭಾರತೀಯ ಮೂಲದ ವ್ಯಕ್ತಿ. ಇವರು ಈ ಕೆಳಗಿನ ಯಾವ ರೇಸ್‌ಗಳನ್ನು ಗೆದ್ದ ಮೊದಲ ಮಹಿಳಾ ರೇಸ್ ಇಂಜಿನಿಯರ್?
(ಎ) ಇಂಡಿಯಾನಾಪೊಲಿಸ್ 500 (ಬಿ) 24 ಗಂಟೆಗಳ ಲೆ ಮ್ಯಾನ್ಸ್ (ಸಿ) 12 ಗಂಟೆಗಳ ಸೆಬ್ರಿಂಗ್ (ಡಿ) ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್. ನಿಮಗೇನಾದರೂ ಇದರ ಉತ್ತರ ಗೊತ್ತಾ? ಜಸ್ನಿಲ್​ ಸಂದೇಹವಿದ್ದುದರಿಂದ ಮೊದಲೇ ಪಂದ್ಯ ತ್ಯಜಿಸಿದರು. ನಂತರ ಅಮಿತಾಭ್​ ಅವರು ಒಂದು ವೇಳೆ ಉತ್ತರ ಹೇಳಿದ್ದರೆ, ಯಾವುದನ್ನು ಚಾಯ್ಸ್​ ಮಾಡುತ್ತಿದ್ದೀರಿ ಎಂದು ಕೇಳಿದಾಗ, ಜಸ್ನಿಲ್​ ಅವರ  ಬಿ ಅಂದರೆ 12 ಗಂಟೆಗಳ ಸೆಬ್ರಿಂಗ್ ಆಯ್ಕೆ ಮಾಡಿದರು. ಅಸಲಿಗೆ ಇದು ಸರಿಯಾದ ಉತ್ತರವಾಗಿತ್ತು. ನಿಮಗೆ ಉತ್ತರ ಗೊತ್ತಿತ್ತಾ?

KBC: ಕೆಲಸ ಕಳೆದುಕೊಳ್ಳೋ ಭಯದಲ್ಲಿ ಅಮಿತಾಭ್ ಬಚ್ಚನ್​- ನಟ ಹೇಳಿದ್ದೇನು?

Follow Us:
Download App:
  • android
  • ios