Asianet Suvarna News Asianet Suvarna News

ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!

ಕನ್ನಡಿಗರ ಮನೆ ಮತಾಗಿರುವ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 58 ವರ್ಷಗಳಾಗಿತ್ತು. 
 

Karnataka well known television presenter Aparna Vastarey dies at 51 in Bengaluru ckm
Author
First Published Jul 11, 2024, 10:32 PM IST | Last Updated Jul 12, 2024, 1:31 PM IST

ಬೆಂಗಳೂರು(ಜು.11) ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಜುಲೈ 12ರಂದು ಸಂಜೆ  ಅಪರ್ಣಾ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ, ಹಲವು ದಿನಗಳ ವಿಶ್ರಾಂತಿ ಪಡೆದಿದ್ದರು. ಅಪರ್ಣಾ ಸಾವು ಕನ್ನಡಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿನಿಮಾ, ಟಿವಿ, ಸಾಹಿತ್ಯ ಲೋಕ ಸೇರಿ ಅಪ್ರತಿಮ ಪ್ರತಿಭೆಯುಳ್ಳಿ ಅಪರ್ಣಾ ಸಾವಿಗೆ ಹಲವು ದಿಗ್ಗಜರು ಆಘಾತ ವ್ಯಕ್ತಪಡಿಸಿದ್ದಾರೆ.

ತರಾಸು ಕಾದಂಬರಿ ಆಧಾರಿತ 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಪರ್ಣಾ ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ.  ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದು, ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿಗಳು ಬಂದಿದ್ದರೂ ಸರಕಾರಿ ಕಾರ್ಯಕ್ರಮಗಳಿಗೆ ಇವರೇ ನಿರೂಪಣೆಗೆ ಬರಬೇಕೆಂದು ಬಯಸುತ್ತಿದ್ದರು. 

90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ನಮ್ಮ ಮೆಟ್ರೋ ಮಾರ್ಗಗಳ ಉದ್ಘಾಟನೆ ಸೇರಿ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನೆಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದು ಇವರ ಮುಕುಟಕ್ಕೆ ಸೇರಿದ್ದ ಮತ್ತೊಂದು ಗರಿ.  

 

2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದ ಅಪರ್ಣಾ, ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ರು. ಇನ್ನು 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಹಾಸ್ಯ ನಟಿಯಾಗಿಯೂ ಜನರ ಮನಗೆದ್ದಿದ್ದರು. ಮಜಾ ಟಾಕೀಸ್ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಅಪರ್ಣಾ ಕೇವಲ ಗಂಭೀರ ಪಾತ್ರಗಳಲ್ಲಿ ಮಾತ್ರವಲ್ಲ, ಹಾಸ್ಯ ಪಾತ್ರಗಳಲ್ಲೂ ನಟನಾ ಕೌಶಲ್ಯ ಮೆರೆದಿದ್ದರು. 

ಬಹುಮುಖ ಪ್ರತಿಭೆಯ ಅಪರ್ಣಾ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು. ಅಪರ್ಣಾ ತಂದೆ ಕೆಎಸ್ ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಮೊದಲ ಮದುವೆಯಿಂದ ವಿಚ್ಚೇದನ ಪಡೆದಿದ್ದ ಅಪರ್ಣಾ, ಖ್ಯಾತ ಲೇಖಕ ನಾಗರಾಜ ವಸ್ತಾರೆ ಅವರನ್ನು ವರಿಸಿದ್ದರು.  ಅಪರ್ಣಾ ನಿಧನದ ಸುದ್ದಿ ಇಡೀ ಕರ್ನಾಟಕದ ಜನತೆಗೆ ಆಘಾತ ತಂದಿದೆ.

ಕನ್ನಡ ಕುವರಿ, ಮಜಾಟಾಕೀಸ್ ವರಲಕ್ಷ್ಮೀ ಅಪರ್ಣಾಗೆ ವಯಸ್ಸೇ ಆಗಲ್ವಂತೆ!

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಸ್ಮರಣೆ ಕಾರ್ಯಕ್ರಮ ನಿರೂಪಿಸಿದ ಅಪರ್ಣಾ, ಇಂಥ ಕಾರ್ಯಕ್ರಮಗಳಿಗೆ ಮಾತ್ರ ನಿರೂಪಣೆ ಮಾಡುವಂಥ ಅವಕಾಶಗಳ ಬಾರದಿರಲಿ ಎಂದಿದ್ದರು. ವಯಸ್ಸು ಹತ್ತಿರ ಹತ್ತಿರ 60 ಆದರೂ ನಂಗಿನ್ನೂ ಸ್ವೀಟ್ ಸಿಕ್ಟೀನ್ ಎನ್ನುತ್ತಿದ್ದ ಅಪರ್ಣಾ, ನೋಡಲೂ ಸಹ ಅಪ್ರತಿಮ ಸುಂದರಿ ಎಂದೇ ಹೇಳಬಹುದು. ಅವರ ನೈಜ ವಯಸ್ಸನ್ನೂ ಯಾರಿಗೂ ಹೇಳುವುದು ಸಾಧ್ಯವಿರಲಿಲ್ಲ. ಭಾಷೆ, ಆಂಗಿಕ ಭಾಷೆ, ಹಾವ ಭಾವ ಎಲ್ಲವೂ ಸೇರಿ ಅಪರ್ಣಾ ತಮ್ಮದೇ ಆದ ವಿಶೇಷತೆ ಹೊಂದಿದ್ದು, ನಿರೂಪಣೆಯಲ್ಲಿ ಇವರಿಗೆ ಸರಿ ಸಾಟಿ ಯಾರೂ ಇಲ್ಲವೆಂದೇ ಹೇಳಬಹುದು. 

Latest Videos
Follow Us:
Download App:
  • android
  • ios