ಬಿಗ್‌ಬಾಸ್‌ ಮನೆಯ ಆನೆ ಎಂದೇ ಹೇಳಿಕೊಳ್ಳುವ ವಿನಯ್ ಅವರು ಎಲ್ಲರನ್ನೂ ತುಳಿದು ಬದುಕುತ್ತಾರೆ. ತಮ್ಮ ಜೊತೆಗೆ ಸೇರಿಸಿಕೊಂಡವರನ್ನೆಲ್ಲಾ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಡ್ರೋನ್ ಪ್ರತಾಪ್‌ ಹೇಳಿದ್ದಾರೆ.

ಬೆಂಗಳೂರು (ಜ.06): ಬಿಬ್‌ಬಾಸ್‌ ಮನೆಯ ಆನೆ ಎಂದೇ ಹೇಳಿಕೊಳ್ಳುವ ವಿನಯ್ ಅವರು ಎಲ್ಲರನ್ನೂ ತುಳಿದು ಬದುಕುತ್ತಾರೆ. ತಮ್ಮ ಜೊತೆಗೆ ಸೇರಿಸಿಕೊಂಡವರನ್ನೆಲ್ಲಾ ಮನೆಗೆ ಕಳುಹಿಸಿ ಅವರ ಎಲ್ಲ ಬೆಡ್‌ಶೀಟ್‌ಗಳನ್ನು ತಮ್ಮ ಬೆಡ್‌ ಕೆಳಗೆ ಹಾಕಿಕೊಂಡಿದ್ದಾರೆ ಎಂದು ಡ್ರೋನ್‌ ಪ್ರತಾಪ್‌ ಹೇಳಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಗ್‌ಬಾಸ್‌ ಮನೆಗೆ ವಾಪಸ್ ಆಗಿರುವ ಡ್ರೋನ್‌ ಪ್ರತಾಪ್‌ ಅವರು ಕಿಚ್ಚನ ಜೊತೆ ವಾರದ ಕಥೆ ಸಂಚಿಕೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಾನು ಆನೆ ಎಂದೇ ಹೇಳಿಕೊಳ್ಳುತ್ತಿದ್ದ ವಿನಯ್‌ಗೆ ಡ್ರೋನ್‌ ಪ್ರತಾಪ್‌ ಭರ್ಜರಿ ಡಿಚ್ಚಿ ಕೊಟ್ಟಿದ್ದಾರೆ. ವಿನಯ್ ಅವರು ಎಲ್ಲರನ್ನೂ ತುಳಿದು ಬದುಕುತ್ತಾರೆ. ತಮ್ಮ ಜೊತೆಗೆ ಸೇರಿಸಿಕೊಂಡವರನ್ನೆಲ್ಲಾ ಮನೆಗೆ ಕಳುಹಿಸಿ ಅವರ ಎಲ್ಲ ಬೆಡ್‌ಶೀಟ್‌ಗಳನ್ನು ತಮ್ಮ ಬೆಡ್‌ ಕೆಳಗೆ ಹಾಕಿಕೊಂಡಿದ್ದಾರೆ ಎಂದು ಡ್ರೋನ್‌ ಪ್ರತಾಪ್‌ ಹೇಳಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿನ ಕಂಟೆಸ್ಟೆಂಟ್‌ಗಳಿಗೆ ಕೆಲವು ಪುಸ್ತಕಗಳನ್ನು ಕೊಟ್ಟು ಅವರ ಯಾವ ಯಾವ ಗುಣಗಳೊಗೆ ಹೋಲುತ್ತಾರೆ ಅವರಿಗೆ ಅಂತಹ ಪುಸ್ತಗಳನ್ನು ನೀಡಬೇಕು ಎಂದು ಕಿಚ್ಚ ಸುದೀಪ್‌ ಹೇಳುತ್ತಾರೆ. ಮೊದಲನೆಯದಾಗಿ ಸಂಗೀತಾ ಅವರು, 'ಅಹಂಕಾರದಿಂದ ಮೆರೆಯೋದು ಹೇಗೆ' ಎಂಬ ಪುಸ್ತಕವನ್ನು ಕಾರ್ತಿಕ್‌ ಮಹೇಶ್‌ ಅವರಿಗೆ ಕೊಡುತ್ತಾರೆ. ಯಾವುದೇ ಸಮಯ, ಸಂದರ್ಭದಲ್ಲಿಯೂ ತನ್ನದೇ ಮಾತು ನಡೆಯಬೇಕೆಂಬ ವರ್ತನೆಯೇ ಅಹಂಕಾರ ಅವರಿಗೆ ಈ ಪುಸ್ತಕ ಕೊಡುತ್ತೇನೆ ಎಂದು ಸಂಗೀತಾ ಹೇಳುತ್ತಾರೆ. ಇದಕ್ಕೆ ತಿರುಗೇಟು ನೀಡಿದ ಕಾರ್ತಿಕ್‌ ಕೂಡ ಅವರು ಹೇಳಿದ್ದೇ ನಡೆಯಬೇಕು ಎಂದು ಯಾವಾಗಲೂ ಹೇಳುತ್ತಾರೆ. ಅದನ್ನು ಪ್ರಶ್ನೆ ಮಾಡುವುದೇ ಅಹಂಕಾರ ಎಂದು ಹೇಳುತ್ತಾರೆ. ಇನ್ನು ಅಹಂಕಾರದಿಂದ ಮೆರೆಯೋದು ಹೇಗೆ ಅಂತ ಅವರೊಂದು ಪುಸ್ತಕ ಬರದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಾನೆ..

ಬಿಗ್‌ಬಾಸ್ ಮನೇಲಿ ಕಿಚ್ಚ ಸುದೀಪ್ ಘರ್ಜನೆ: ಇಷ್ಟವಿದ್ದರೆ ಇರಿ ಇಲ್ಲಾಂದ್ರೆ ಬಾಗಿಲು ತಕ್ಕೊಂಡು ಹೋಗ್ತಾಯಿರಿ!

ಇನ್ನು ವಿನಯ್‌ ಅವರು 'ಬೆನ್ನಿಗೆ ಚೂರಿ ಹಾಕುವುದು ಹೇಗೆ' ಪುಸ್ತಕವನ್ನು ಕಾರ್ತಿಕ್‌ ಅವರಿಗೆ ಕೊಡುತ್ತಾನೆ. ಕಾರ್ತಿಕ್‌ ಪಕ್ಕದಲ್ಲಿಯೇ ಕುಳಿತುಕೊಂಡು ಮಾತನಾಡುತ್ತಾನೆ. ಆದರೆ, ಗೊತ್ತಿಲ್ಲದೇ ಬೆನ್ನಿಗೆ ಚೂರಿ ಹಾಕುತ್ತಾನೆ ಎಂದು ಹೇಳಿದ್ದಾನೆ. ಆದರೆ, ಇದಕ್ಕೆ ಕಾರ್ತಿಕ್ ಪ್ರತಿಕ್ರಿಯೆ ನೀಡಿ ನಾನು ಯಾರಿಗೂ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಹೇಳಿದ್ದಾನೆ. ತುಕಾಲಿ ಸಂತೋಷ್‌ ಅವರು ಸುಳ್ಳಿನ ಅರಮನೆ ಕಟ್ಟುವುದು ಹೇಗೆ? ಪುಸ್ತಕವನ್ನು ಡ್ರೋನ್ ಪ್ರತಾಪ್‌ ಅವರಿಗೆ ಕೊಡುತ್ತಾರೆ. 
ಕೊನೆಗೆ ಡ್ರೋನ್‌ ಪ್ರತಾಪ್‌ ಅವರು 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ?' ಪುಸ್ತಕವನ್ನು ವಿನಯ್‌ಗೆ ಕೊಡುತ್ತಾನೆ. ಅವರನ್ನು ಸರಿ ಎಂದುಕೊಂಡು ಸರಿ ಅನ್ಕೊಂಡು ಜೊತೇಲಿದ್ದವರೆಲ್ಲಾ ಮನೆಗೆ ಹೋಗಿದ್ದಾರೆ. ಹೋಗೆ ಮನೆಗೆ ಹೋದವರ ಬೆಡ್‌ಶೀಟ್‌ಗಳೆಲ್ಲವೂ ಇವರ ಬೆಡ್‌ಗೆ ಸೇರಿಕೊಳ್ಳುತ್ತಿವೆ ಎಂದು ಡ್ರೋನ್ ಪ್ರತಾಪ್‌ ಟಾಂಗ್‌ ಕೊಟ್ಟಿದ್ದಾನೆ.

View post on Instagram

Watch: ವಿರಾಟ್ ಕೊಹ್ಲಿಯ ಹುಡುಗಿ, ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ ಮೊದಲ ಆಡಿಷನ್‌ ವಿಡಿಯೋ ವೈರಲ್!
ಇನ್ನು ಕಳೆದ ಮೂರ್ನಾಲ್ಕು ದಿನದ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಡ್ರೋನ್ ಪ್ರತಾಪ್‌ ಅವರು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೂ ಮುನ್ನ ಬಿಗ್‌ಬಾಸ್‌ ಮನೆಗೆ ವಾಪಸ್ ಆಗಮಿಸಿದ್ದಾರೆ. ಇತ್ತೀಚೆಗೆ ಡ್ರೋನ್‌ ಪ್ರತಾಪ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬೆನ್ನಲ್ಲೇ ಪ್ರತಾಪ್ ಅವರು ಬಿಗ್‌ಬಾಸ್ ಮನೆಯಲ್ಲಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಗ್‌ಬಾಸ್, ಸರಿಯಾಗಿ ಊಟ ಮಾಡದೇ ಇರುವುದರಿಂದ ಫುಡ್‌ ಪಾಯ್ಸನ್ ಆಗಿ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಕೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿತ್ತು. ಇನ್ನು ಇಂದು ಮಧ್ಯಾಹ್ನ ಬಿಡುಗಡೆಯಾದ ಪ್ರೊಮೊದಲ್ಲಿ ಪ್ರತಾಪ್ ಬಿಗ್‌ಬಾಸ್‌ ಮನೆಗೆ ಮರಳಿದ್ದಾರೆ.