Kapil Sharma: ನಕ್ಕು ನಗಿಸುವ ಹಾಸ್ಯನಟ ಕಪಿಲ್​ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

ತಮ್ಮ ಹಾಸ್ಯದ ಧಾಟಿಯಿಂದ ಎಲ್ಲರನ್ನೂ ನಕ್ಕು ನಗಿಸುವ ಕಪಿಲ್​ ಶರ್ಮಾ ಅವರು, ಹಿಂದೊಮ್ಮೆ ಆತ್ಮಹತ್ಯೆಗೆ ಯೋಚಿಸಿದ್ದರು. ಆ ಶಾಕಿಂಗ್​ ಸತ್ಯವನ್ನು ಅವರು ಈಗ ಬಯಲು ಮಾಡಿದ್ದಾರೆ.
 

Kapil Sharma wanted to cummit suicide here is what we know

ಬಣ್ಣದ ಬದುಕು ಹೊರಗೆ ನೋಡುವಷ್ಟು ಚೆನ್ನಾಗಿ ಇರುವುದಿಲ್ಲ. ಸೆಲೆಬ್ರಿಟಿಗಳ ಲೈಫ್​ನಲ್ಲಿ ಸಾಕಷ್ಟು ಏರಿಳಿತಗಳು ಇರುತ್ತವೆ. ಕೆಲವು ನಟ -ನಟಿಯರು ತುಂಬಾ ಭಾವುಕರಾಗಿದ್ದು, ಚಿಕ್ಕದೊಂದು ಸಮಸ್ಯೆ ಎದುರಾದರೂ ಖಿನ್ನತೆಗೆ ಜಾರುತ್ತಾರೆ. ಅದೇ ರೀತಿ ಎಲ್ಲರನ್ನೂ ನಕ್ಕು ನಗಿಸುವ ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಜೀವನದಲ್ಲಿಯೂ ಎದುರಾಗಿತ್ತು. ಅದನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಕಪಿಲ್​  ಶರ್ಮಾ ಷೋ ಮೂಲಕ ಜನರನ್ನು ನಕ್ಕು ನಗಿಸುವ ಕಪಿಲ್​ ಅವರು, ತಮ್ಮ ಜೀವನದಲ್ಲಿ ಆಗಿದ್ದ ಬಹುದೊಡ್ಡ ದುರಂತದ ಕುರಿತು ಮಾತನಾಡಿದ್ದಾರೆ. ಅದರಿಂದ ಹೊರಕ್ಕೆ ಬರಲಾಗದೇ ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವ ಶಾಕಿಂಗ್​ ಸುದ್ದಿಯನ್ನು ನೀಡಿದ್ದಾರೆ. 41 ವರ್ಷದ ಕಪಿಲ್​ಶರ್ಮಾ 2017ರಲ್ಲಿ ಆಗಿರುವ ಘಟನೆಯೊಂದನ್ನು ನೆನೆಸಿಕೊಂಡು ಅಂದು ತಾವು ಹೇಗೆ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂಬ ಬಗ್ಗೆ ತಿಳಿಸಿದ್ದಾರೆ. 

2017 ರಲ್ಲಿ ನಾನು ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದೆ.  ಖಿನ್ನತೆಗೆ (Depression) ಒಳಗಾಗಿದ್ದೆ.  ಆ ಸಮಯದಲ್ಲಿ ತನ್ನ ಸುತ್ತಮುತ್ತ ಯಾರೂ ಸಹಾಯಕ್ಕೆ ಬಂದಿಲ್ಲ ಎಂಬ ಭಾವನೆ ಮೂಡತೊಡಗಿತ್ತು. ಇದೇ ಕಾರಣಕ್ಕೆ  ಆತ್ಮಹತ್ಯೆಯ ಆಲೋಚನೆ ಮಾಡಿದ್ದೆ.  ಆ ಸಮಯದಲ್ಲಿ ನನಗೆ ಸಾವೇ ಮೇಲು ಎನ್ನಿಸಿತು.  ನಮ್ಮವರು ಯಾರೂ ಇಲ್ಲ ಎಂದು ನಾನು ಭಾವಿಸಿದೆ.  ಸುತ್ತಲೂ ಏನೂ ಕಾಣಿಸಲಿಲ್ಲ. ನನ್ನ ಒಳಗೆ ಆಗುತ್ತಿರುವ ನೋವನ್ನು ವಿವರಿಸಲು ಯಾರೂ ಇರಲಿಲ್ಲ, ಆ ನೋವನ್ನು ತೆಗೆದುಕೊಳ್ಳುವವರೂ  ಇರಲಿಲ್ಲ.ಎಲ್ಲರೂ ಸರಿಯಾದಾಗಷ್ಟೇ ಬರುವವರು,  ಲಾಭಕ್ಕಾಗಿಯಷ್ಟೇ ಸಂಪರ್ಕ ಮಾಡುವವರು ಎಂದು ನನಗೆ ಅನ್ನಿಸಿತು. ಆದ್ದರಿಂದ ಜೀವನ ನಶ್ವರ ಎನ್ನಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದೆ ಎಂದಿದ್ದಾರೆ.

 ಅಷ್ಟಕ್ಕೂ ಆಗ ಆಗಿದ್ದೇನೆಂದರೆ, ಕಪಿಲ್ ಷೋದ ಸಹನಟನಾಗಿರುವ ಸುನಿಲ್ ಗ್ರೋವರ್ (Sunil Grover) ಅವರೊಂದಿಗಿನ ಕಪಿಲ್​ ಶರ್ಮಾ ಅವರ ಜಗಳವಾಗಿತ್ತು. ಅದೇ ಸಮಯದಲ್ಲಿ ಕಪಿಲ್​ ಶರ್ಮಾ ಕಾರ್ಯಕ್ರಮದ ಟಿಆರ್​ಪಿ ಕೂಡ ಕುಸಿಯತೊಡಗಿತ್ತು. ಒಂದೆಡೆ ಕಾರ್ಯಕ್ರಮ ಚೆನ್ನಾಗಿ ಓಡದ ನೋವಾದರೆ,  ಇನ್ನೊಂದೆಡೆ ಬೆಸ್ಟ್​ ಫ್ರೆಂಡ್​ ಸುನಿಲ್​ ಗ್ರೋವರ್​ ನಡುವೆ ಬಿರುಕು... ಇದರಿಂದ ಕಪಿಲ್​ ಶರ್ಮಾ ಅವರು ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಎಲ್ಲರನ್ನೂ ಮರೆಯಲು ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದರು ಕಪಿಲ್​. ಈ ಕುರಿತು ಅವರೇ ಹೇಳಿಕೊಂಡಿದ್ದಾರೆ. 'ದಿ ಕಪಿಲ್ ಶರ್ಮಾ ಶೋನ ರೇಟಿಂಗ್‌ಗಳು ಕ್ಷಿಪ್ರ ಕುಸಿತವನ್ನು ಕಂಡಿತು. ಅದೇ ಇನ್ನೊಂದೆಡೆ ಸುನಿಲ್​ ಜೊತೆ ಬಿರುಕು ಉಂಟಾಯಿತು. ಇದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ಶಾಂತಿ ಬೇಕೆಂದರೆ ಎಲ್ಲರಿಂದಲೂ ದೂರವಾಗಿ ಪ್ರತ್ಯೇಕಿಸಿಕೊಳ್ಳುತ್ತಿದೆ. ತೀವ್ರ ಕುಡಿತದ (Drunken) ದಾಸನೂ ಆದೆ. ಒಂದು ಹಂತದಲ್ಲಿ ಜೀವನ ಅಸಹನೀಯವೆನಿಸಿತು.  ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಯಿತು ಎಂದು ಅವರು ಹೇಳಿದ್ದಾರೆ.

ನಟಿ ಕನಿಹಾಗೆ ಆ್ಯಕ್ಸಿಡೆಂಟ್​? ಫೋಟೋ ನೋಡಿ ಫ್ಯಾನ್ಸ್​ ಶಾಕ್​!

ಇದೇ ಸಂದರ್ಭದಲ್ಲಿ ಅವರ ಆಪ್ತರೊಬ್ಬರು ಕಪಿಲ್​ ಅವರನ್ನು ತಮ್ಮ ಕಡಲತೀರದ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋದರು. ಆ ಸುಂದರ ದೃಶ್ಯವನ್ನು ನೋಡುತ್ತಾ ಮನಸ್ಸನ್ನು ಉಲ್ಲಾಸಗೊಳಿಸಿಕೋ ಎಂದರು. ಆಗಲೇ ಕಪಿಲ್ ಅವರ ಮನಸ್ಸು ಹಗುರವಾದದ್ದು. 'ನಾನು ಅವರ ಬಾಲ್ಕನಿಯಿಂದ ಸಮುದ್ರದ ವಿಶಾಲವಾದ ವಿಸ್ತಾರವನ್ನು ನೋಡಿದೆ , ನನಗೆ ಅದರೊಳಗೆ ಜಿಗಿಯುವಂತೆ ಭಾಸವಾಯಿತು. ಆರಂಭದಲ್ಲಿ ಮತ್ತಷ್ಟು ಖಿನ್ನನಾಗಿದ್ದೆ. ಜಗತ್ತು ನನಗಾಗಿ ಗುಂಡಿ ತೋಡುತ್ತಿದೆ ಎಂದು ಭಾಸವಾಯಿತು. ನಂತರ ಸಮುದ್ರದ ವಿಶಾಲತೆಯನ್ನು ನೋಡಿ ನನ್ನ ಮನಸ್ಸು ಬದಲಾಯಿತು ಎಂದಿದ್ದಾರೆ.

ತಾವು ಖಿನ್ನತೆಗೆ ಒಳಗಾಗಿದ್ದ ಸಂದರ್ಭದಲ್ಲಿ ತಮ್ಮನ್ನು ಅದು ಹೇಗೆ ದುರ್ಬಲಗೊಳಿಸಿತು ಎಂದು ಮಾತನಾಡಿರುವ ಕಪಿಲ್​, 'ನನಗೆ ಪ್ರದರ್ಶನ ನೀಡಲು ವೇದಿಕೆ ಏರಲು ಸಾಧ್ಯವಾಗಲಿಲ್ಲ. ಚಿತ್ರೀಕರಣವನ್ನು ರದ್ದುಗೊಳಿಸಿದೆ.  ನಾನು ಆತಂಕದಿಂದ ಬಳಲುತ್ತಿದ್ದೆ, ವಿಪರೀತ ಕುಡಿಯತೊಡಗಿದೆ.  ನಾನು ನನ್ನ ಸಾಕು ನಾಯಿಯೊಂದಿಗೆ ಕಚೇರಿಯಲ್ಲಿ ಬೀಗ ಹಾಕಿ ಕುಳಿತುಕೊಂಡೆ. ಆ ಸಂದರ್ಭದಲ್ಲಿ ಕೆಲವೊಂದು ಸಿನಿಮಾಗಳಿಗೆ  ಆಫರ್​ ಬಂದಿತ್ತು. ಎಲ್ಲವನ್ನೂ ರದ್ದುಗೊಳಿಸಿದೆ ಎಂದು ಅವರು ಹೇಳಿದ್ದಾರೆ.

16 ಸೆಕೆಂಡ್ ನಗ್ನದೇಹ ತೋರಿಸಿದ್ದಕ್ಕೆ ಮಗನಿಂದಾನೇ ದೂರವಾದೆ: ನಟಿ ಕಣ್ಣೀರು

ಸದ್ಯ ಕಪಿಲ್ ಶರ್ಮಾ ಈ ದಿನಗಳಲ್ಲಿ ಪ್ರಮುಖ ನಾಯಕನಾಗಿ ಅವರ ಮೂರನೇ ಚಿತ್ರ 'ಜ್ವಿಗಾಟೊ' ಪ್ರಚಾರದಲ್ಲಿ ನಿರತರಾಗಿದ್ದಾರೆ, ಅವರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ನಿರ್ದೇಶಕಿ ನಂದಿತಾ ದಾಸ್ ಮತ್ತು ಇದನ್ನು ಅಪ್ಲಾಸ್ ಎಂಟರ್ಟೈನ್ಮೆಂಟ್ (Entertainment) ನಿರ್ಮಿಸಿದೆ. ಈ ಚಿತ್ರದಲ್ಲಿ ಕಪಿಲ್ ಜೊತೆ ಶಹನಾ ಗೋಸ್ವಾಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರ ಮಾರ್ಚ್ 17 ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಕಿಸ್ ಕಿಸ್ಕೊ ​​ಪ್ಯಾರ್ ಕರೂನ್' ಮತ್ತು 'ಫಿರಂಗಿ' ಚಿತ್ರಗಳಲ್ಲಿ ಕಪಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ಕಪಿಲ್ ತಮ್ಮ 'ದಿ ಕಪಿಲ್ ಶರ್ಮಾ ಶೋ' ಕಾರ್ಯಕ್ರಮದ ಮೂಲಕ ನಿರಂತರವಾಗಿ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕಪಿಲ್ ಸ್ವತಃ ಶಹಾನಾ ಗೋಸ್ವಾಮಿ ಮತ್ತು ನಂದಿತಾ ದಾಸ್ ಅವರೊಂದಿಗೆ ತಮ್ಮ ಕಾರ್ಯಕ್ರಮದ ಮೂಲಕ ತಮ್ಮದೇ ಆದ ಚಿತ್ರವನ್ನು ಪ್ರಚಾರ ಮಾಡಲು ಕಾಣಿಸಿಕೊಂಡರು.

Latest Videos
Follow Us:
Download App:
  • android
  • ios