ಖಾಸಗಿ ಟಿವಿ ಮಾಧ್ಯಮಗಳಿಂದ ವರ್ಷದ ಕನ್ನಡಿಗ ಹಾಗೂ ಸ್ತ್ರೀ ಪ್ರಶಸ್ತಿ ಸ್ವೀಕರಿಸಿದ ಕನ್ನಡತಿ ಅಕ್ಕ ಅನು ಅವರು ಫೇಸ್‌ಬುಕ್‌ ಲೈವ್‌ಗೆ ಬಂದು ಗಳಗಳನೇ ಅಳುತ್ತಾ ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು (ಮಾ.12): ಕೆಲವು ಮಾಧ್ಯಮಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದ ಸಮಾಜ ಸೇವಕಿ ಅಕ್ಕ ಅನು ಅವರು ನಾನು ಸಮಾಜಕ್ಕೆ ಯಾವುದೇ ಕೆಟ್ಟ ಸಂದೇಶವನ್ನು ಸಾರಿದ್ದರೆ ನೀವು ನನ್ನನ್ನು ಪ್ರಶ್ನೆ ಮಾಡಿ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ಇನ್ನೊಬ್ಬರ ಮನಸ್ಥಿತಿಯನ್ನು ಹಾಳು ಮಾಡಬೇಡಿ ಎಂದು ಗಳಗಳನೇ ಅಳುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ನಾನು ಶಾಲಾ ಸ್ವಚ್ಛತೆ, ಶಾಲೆಗಳಿಗೆ ಬಣ್ಣ ಬಳಿಯುವುದು, ಮಕ್ಕಳಿಗೆ ಅಗತ್ಯವಿರುವ ವರ್ಣರಂಜಿತ ಚಿತ್ರಗಳನ್ನು ಯಾಕಾದರೂ ಬಿಡಿಸಿದ್ದೇನೋ ಎಂಬ ಕೊರಗು ಕಾಡುತ್ತಿದೆ. ಅದೇನೋ 'ಕೀರ್ತಿ ಶನಿ' ಬೆನ್ನು ಬಿದ್ದರೆ ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಒಳ್ಳೆಯದಾಗಿ ಬದುಕಿದರೂ ಕೆಟ್ಟದಾಗಿಯೇ ಮಾತನಾಡುವವರು ಹೆಚ್ಚಾಗುತ್ತಾರಂತೆ. ನಾನು ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮಕ್ಕೆ ಹೋದಾಗ ಗೆಸ್ಟ್ ಟೀಚರ್‌ಗಳು ಅದೇನು ಪಾಠ ಮಾಡ್ತಾರೋ, ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮಾತನಾಡಿದ್ದೇನೆ. ಆದರೆ, ಇದನ್ನು ಕೆಟ್ಟದಾಗಿ ತಿಳಿದುಕೊಂಡ ರಾಜ್ಯದ ಅತಿಥಿ ಶಿಕ್ಷಕರು ಅನಾಗರೀಕರಂತೆ ಕೆಲವು ಸಂದೇಶಗಳನ್ನು ಕಳಿಸಿದ್ದಾರೆ. ಅದರಲ್ಲಿಯೂ ಮೋಹನ್‌ಗೌಡ ಎನ್ನುವವರು ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ.

ಸುದ್ದಿ ಮಾಧ್ಯಮದಿಂದ 'ವರ್ಷದ ಕನ್ನಡಿಗ ಪ್ರಶಸ್ತಿ' ಹಾಗೂ ಮನರಂಜನಾ ಚಾನೆಲ್ ಒಂದರಿಂದ 'ಸ್ತ್ರೀ ಅವಾರ್ಡ್‌' ಪ್ರಶಸ್ತಿಯನ್ನು ಪಡೆದಿದ್ದೇನೆ. ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ನನಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಶಸ್ತಿಗಾಗಿಯೇ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ನಮ್ಮ ಬಗ್ಗೆ ಅಷ್ಟೊಂದು ಕೀಳಾಗಿ ಮಾಡುವಂತಹ ತಪ್ಪು ನಾನೇನು ಮಾಡಿದ್ದೇನೆ. ಇನ್ನು ಟ್ರೋಲಿಗರು ನಮ್ಮ ಬಗ್ಗೆ ಕೆಟ್ಟದಾಗಿ ಟ್ರೋಲ್‌ ಮಾಡಿ, ಇನ್ನೊಬ್ಬರಿಗೆ ತಪ್ಪು ಸಂದೇಶ ಸಾರುತ್ತಿದ್ದಾರೆ. ನೀವು ನಿಮ್ಮ ಜೀವನ ನೋಡಿಕೊಳ್ಳಿ. ಇನ್ನೊಬ್ಬರ ಜೀವನ ಹಾಳು ಮಾಡುವ ಕೆಲಸ ಮಾಡಬೇಡಿ.

ರಾಮಾಚಾರಿ ಹಾಡನ್ನು 'ಅಪ್ಪು ಸರ್ ಅಣ್ಣಾಬಾಂಡ್' ಸಿನಿಮಾಕ್ಕೆ ಬರೆಯಲಾಗಿತ್ತು: ಸತ್ಯ ಹೇಳಿದ ಯೋಗರಾಜ್ ಭಟ್!

ಯಾರಾರೋ ಬದುಕುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಅಗತ್ಯವಿದ್ದಾಗ ಬೇರೆಡೆಯಿಂದ ಸಾಲ ಮಾಡಿದ್ದೇವೆ. ಅವರು ಕೂಡ ನಮ್ಮ ಯೋಗ್ಯತೆ ನೋಡಿ ಸಾಲ ಕೊಟ್ಟಿದ್ದಾರೆ. ನಾನು ನಿಮ್ಮ ದುಡ್ಡು ಕಬಳಿಸಿಲ್ಲ. ಸಮಾಜದಲ್ಲಿ ಎಂತೆಂಥವರೋ ಬದುಕುತ್ತಿದ್ದಾರೆ. ಆದರೆ, ನಾನು ಶಾಲೆಗಳಲ್ಲಿ ಕೆಲಸ ಅಥವಾ ಸಮಾಜ ಸೇವೆ ಯಾಕೆ ಮಾಡಿದೆನೋ ಎಂಬ ಚಿಂತೆ ಕಾಡುತ್ತಿದೆ. ನನಗೆ ಹೆಸರು, ಪ್ರಶಸ್ತಿ ಅಥವಾ ಯಾವುದೇ ಹಿರಿಮೆ ಪಡೆಯುವ ಆಸೆಯಿಲ್ಲ. ಜೀವನದಲ್ಲಿ ತುಂಬಾ ಜಿಗುಪ್ಸೆ ಬಂದಿದೆ. ಒಬ್ಬ ಮನುಷ್ಯ ಎಲ್ಲಿವರೆಗೂ ತಾಳಿಕೊಳ್ಳುತ್ತಾನೆ ಹೇಳಿ. ನನಗೂ ಈಗ ಆರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಂಡಿದ್ದು, ಸಮಾಜ ಸೇವೆಯಿಂದ ದೂರ ಉಳಿದಿದ್ದೇನೆ. ನಾವೇನಾದರೂ ಅನಾರೋಗ್ಯದಿಂದ ಸತ್ತು ಹೋದರೆ, ನೀವೇನಾದರೂ ಅವರ ಪಾಲಕರಿಗೆ ಏನಾದರೂ ತಂದುಕೊಡ್ತೀರಾ? ಅವರ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಗಂಡಸಿನಂತೆ ಬದುಕಲು ಕಲಿತಿದ್ದೇನೆ. ಅನೇಕ ಹುಡುಗಿಯರು ಕೂಡ ಗಂಡಸರಂತೆ ಮನೆ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ.

ಆದರೆ, ನಾವು ನಮ್ಮ ಕಷ್ಟದ ನಡುವೆಯೂ ಸಮಾಜ ಸೇವೆ ಮಾಡಿದರೆ ಅದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿ ಕಷ್ಟ ಕೊಡ್ತೀರಿ. ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಸಾಮಾಜಿಕ ಜಾಲತಾಣ ಬಿಟ್ಟುಬಿಡಿ ಎಂದು ನೀವು ಹೇಳಬಹುದು. ಆದರೆ, ನಾವು ಕೆಲವೊಂದು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದರಿಂದ, ಸಮಾಜ ಸೇವೆ ಮಾಡಿದ್ದರಿಂದ ಅವುಗಳು ಮರೆಯಾಗಿ ಹೋಗಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದೇವೆ. ನನ್ನೊಂದಿಗೆ ಕೆಲವು ಹೆಣ್ಣು ಮಕ್ಕಳು ಶಾಲೆಗಳಲ್ಲಿ ಕೆಲಸ ಮಾಡಲು ಬಂದಿದ್ದರು. ಒಂದೆರಡು ದಿನಗಳನ್ನು ಕಳೆದು, ಶಾಲೆಗಳಲ್ಲಿ ಗಂಡು ಮಕ್ಕಳೊಂದಿಗೆ ಇರಲಾಗದೇ ಜೊತೆಗೆ ಮಹಿಳಾ ಸಮಸ್ಯೆಗಳನ್ನು ಅನುಭವಿಸಲಾಗದೇ ನನ್ನೊಂದಿಗೆ ಇರದೇ ಹೋಗಿದ್ದಾರೆ. ನಾನು ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಕೆಲಸ ಮಾಡಿದ್ದೇನೆ. ಆದರೂ, ನನ್ನನ್ನು ಕೆಟ್ಟದಾಗಿ ಕಾಣುವುದು ಸರಿಯಲ್ಲ. ನಮಗೂ ಓದುವ, ದುಡಿಯುವ ಹಂಬಲವಿದೆ.

ದೇವರ ಹಾಡು-ಬಟ್ಟೆಗೂ ಹೋಲಿಸಬೇಡಿ ಎಂದು ಹೊಸ ಫೋಟೋ ಶೂಟ್ ಮಾಡಿಸಿದ ಚೈತ್ರಾ ಜೆ.ಆಚಾರ್

ಕೆಲವು ಅಪರಿಚಿತ ವ್ಯಕ್ತಿಗಳು ಕೂಡ ನಮ್ಮ ಜೀವನದಲ್ಲಿ ಬಂದು ಆಟವಾಡುತ್ತಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಸಮಾಜ ಸೇವೆ ಮಾಡಿದ್ದೇನೆ. ನಾನು ಮಾಡಿದ್ದೇ ತಪ್ಪಾ ಹೇಳಿ. ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಇದೇ ರೀತಿ ಕುಗ್ಗಿಸಿದರೆ ಯಾವ ಹೆಂಗಸರೂ ಕೂಡ ಮುಂದೆ ಬರಲು ಬಿಡುವುದಿಲ್ಲ. ಆದರೆ, ಈಗ ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ತಪ್ಪಾಗಿ ಕಮೆಂಟ್ ಮಾಡುತ್ತಿದ್ದಾರೆ. ನಾನು ಎಷ್ಟೇ ಹುಡುಗನಂತೆ ಇದ್ದರೂ, ನಾನು ಒಂದು ಹೆಣ್ಣು. ನನಗೂ ಭಾವನೆಗಳು ಇರುತ್ತವೆ. ಭಾವನೆಗಳೊಂದಿಗೆ ಆಟವಾಡುವ, ಮನಸ್ಸನ್ನು ಕುಗ್ಗಿಸುವ ಕೆಲಸ ಮಾಡಬೇಡಿ. ನನಗೇನಾದರೂ ತೊಂದರೆಯಾದರೆ ನಮ್ಮ ಕುಟುಂಬವನ್ನು (ಅಪ್ಪ, ಅಮ್ಮ, ಅಕ್ಕ-ತಂಗಿಯರನ್ನು) ನೀವು ನೋಡಿಕೊಳ್ತೀರಾ ಎಂದು ಗಳಗಳನೇ ಅತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ದೂರು ನೀಡಿ. ನಾನು ಮಾತನಾಡಿದ್ದಕ್ಕೆ ಸಾಕ್ಷಿ ಕೊಡುತ್ತೇನೆ.

ನಾನು ಕೆಲಸ ಬಿಟ್ಟಿದ್ದೀವಿ. ನಾವು ನಮ್ಮ ಪಾಡಿಗೆ ಬದುಕುತ್ತೇವೆ. ನಮಗೆ ಕುಟುಂಬದಲ್ಲಿ ಕೆಲವು ಜವಾಬ್ದಾರಿಗಳಿದ್ದು, ಅವುಗಳನ್ನು ನಿಭಾಯಿಸಲು ಬಿಡಿ. ಕುಟುಂಬದಲ್ಲಿನ ಜವಾಬ್ದಾರಿ ಮುಗಿಸಿದ ಮೇಲೆ ನಾವು ನಿಮ್ಮಿಂದ ಕಣ್ಮರೆ ಆಗುತ್ತೇವೆ. ನೀವು ನೆಮ್ಮದಿಯಾಗಿರಿ. ನಾವು ನಿಯತ್ತಿನಿಂದ ಬದುಕುತ್ತಿದ್ದೇವೆ, ಬದುಕಲು ಬಿಡಿ ಎಂದು ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಮನವಿ ಮಾಡಿದ್ದಾರೆ.