ಸದ್ಯ ಕನ್ನಡತಿ ಸೀರಿಯಲ್‌ನ ಭುವಿ ಪಾತ್ರಧಾರಿ ರಂಜಿನಿ ರಾಘವನ್‌ಗೆ ಜನ ಮೆಚ್ಚಿದ ನಾಯಕಿ ಅನ್ನೋ ಗೌರವ ಸಿಕ್ಕಿದೆ. ಹರ್ಷ ಅಲಿಯಾಸ್ ಕಿರಣ್ ಜನ ಮೆಚ್ಚಿನ ಹೀರೋ ಆಗಿದ್ದಾರೆ. ಸೀರಿಯಲ್‌ನಲ್ಲಿ ಮುಂದೆ ಇವರಿಬ್ಬರು ಬೇರೆ ಆಗಬಹುದೇನೋ. ಆದರೆ ಜನಕ್ಕೆ ಇವರಿಬ್ಬರನ್ನು ಬೇರೆ ಬೇರೆಯಾಗಿ ನೋಡೋಕೆ ಇಷ್ಟ ಇಲ್ಲ. ಇವ್ರಿಬ್ರು ಸದಾ ಜೊತೆಯಲ್ಲಿ ಇರೋದೇ ಇಷ್ಟ ಅನ್ನೋದಕ್ಕೆ ಈ ತೀರ್ಪೇ ಸಾಕ್ಷಿ. ಇದೀಗ ನಮ್ಮ ರಂಜಿನಿ ಮೂಗುತಿ ಸುಂದರಿಯೂ ಆಗಿದ್ದಾರೆ. ಹಿಂದೆ ಸಾನಿಯಾ ಮಿರ್ಜಾ ಹಾಕ್ಕೊಳ್ತಿದ್ದ ರೀತಿಯ ಮೂಗುತಿಯಲ್ಲೇ ಮಿಂಚುತ್ತಿದ್ದಾರೆ. ಈ ಸ್ಟೈಲೂ ಜನಕ್ಕೆ ಇಷ್ಟ ಆಗಿದೆ.

ಇನ್ನು ಕನ್ನಡತಿ ಸೀರಿಯಲ್ ವಿಚಾರಕ್ಕೆ ಬಂದ್ರೆ ಅಪ್ಪನ ಸಾವಿನ ದುಃಖದ ಛಾಯೆಯ ನಡುವೆಯೂ ಹರ್ಷ ಭುವಿಯ ನಡುವೆ ಸಣ್ಣಗೆ ಪ್ರೀತಿಯ ಹೂವು ಅರಳುತ್ತಿದೆ. ಅದರ ಘಮ ವೀಕ್ಷಕರಿಗೂ ಪಸರಿಸಿದೆ. ಆದರೂ ಪ್ರೀತಿಯನ್ನು ಡೈರೆಕ್ಟಾಗಿ ಹೇಳೋದು ಆಕೆಯಿಂದ ಸಾಧ್ಯವಾಗ್ತಾ ಇಲ್ಲ. ಹಾಗೆ ನೋಡಿದರೆ ಆರಂಭದಿಂದಲೂ ಭುವಿಗೆ ಹರ್ಷನ ಮೇಲೆ ಉಳಿದವರಿಗಿಂತ ಬೇರೆ ಬಗೆಯ ಭಾವ. ಆಗಷ್ಟೇ ಪರಿಚಯವಾದರೂ ತನ್ನ ಮನೆಯಲ್ಲೇ ಹರ್ಷನನ್ನು ಕ್ವಾರೆಂಟೇನ್ ಮಾಡ್ತಾಳೆ ಭುವಿ. ಅದೇ ತಾನೇ ಪರಿಚಯವಾದ ಹುಡುಗನ ಬಗ್ಗೆ ಹಳ್ಳಿ ಹುಡುಗಿ ಭುವಿಗೆ ಅದು ಹೇಗೆ ಆ ಮಟ್ಟಿನ ನಂಬಿಕೆ ಬರುತ್ತೆ ಅನ್ನೋದು ಸ್ವತಃ ಭುವಿಗೂ ಗೊತ್ತಿಲ್ಲ.

ಇದೀಗ ಭುವಿ ಮತ್ತು ಹರ್ಷ ಪರಸ್ಪರ ಪ್ರೀತಿಸೋದು ಇಬ್ಬರಿಗೂ ಗೊತ್ತು, ಆದರೆ ಹೇಳೋಕೆ ಆಗುತ್ತಿಲ್ಲ ಅಷ್ಟೇ. ಅತ್ತ ವರೂಧಿನಿಯೂ ತನ್ನ ಪ್ರೀತಿಯ ಹೀರೋ ಹರ್ಷನಿಗಾಗಿ ಏನು ಮಾಡೋದಕ್ಕೂ ಸಿದ್ಧ ಅನ್ನೋ ಸ್ಥಿತಿಯಲ್ಲಿದ್ದಾಳೆ. ಈ ಹರ್ಷ ಭುವಿ ತನ್ನನ್ನು ನೋಡಲು ಬಂದ ಹುಡುಗನ ಎದುರು 'ಕೃಷ್ಣಾ ನೀ ಬೇಗನೆ ಬಾರೋ..' ಅಂದಿದ್ದೇ ತನ್ನನ್ನೇ ಕರೆಯುತ್ತಿದ್ದಾಳೋ ಎಂಬ ಹಾಗೆ ಆಕೆಯ ಮನೆಯತ್ತ ಬರುತ್ತಾನೆ.

ಭುವಿಯ ಕನ್ನಡ ಕ್ಲಾಸ್ ಅಂದ್ರೆ ಹುಡುಗ್ರಿಗೆ ಯಾಕಷ್ಟು ಇಷ್ಟ! ...

ಇದೆಲ್ಲ ಸೀರಿಯಲ್ ಕತೆ. ಆದರೆ ಈ ಭುವಿ ಪಾತ್ರ ಮಾಡೋ ರಂಜಿನಿ ರಾಘವನ್ಗೆ ರಿಯಲ್ಲೈಫ್ ನಲ್ಲಿ ಬಾಯ್‌ಫ್ರೆಂಡ್ ಇದ್ದಾರಾ? ಆಕೆಗೆ ಯಾರನ್ನು ಕಿಸ್ ಮಾಡೋಕೆ ಇಷ್ಟ ಅನ್ನೋದನ್ನು ಕೇಳಿದ್ರೆ ನೀವು ನಿಜಕ್ಕೂ ಬೆರಗಾಗ್ತೀರ. ಯಾಕೆಂದರೆ ಕನ್ನಡತಿ ಸೀರಿಯಲ್ನಲ್ಲಿ ಈಕೆ ಹರ್ಷನನ್ನ ಆ ಪರಿ ಇಷ್ಟ ಪಡ್ತಿದ್ದರೂ ಇವರಿಬ್ಬರ ನಡುವೆ ರೊಮ್ಯಾಂಟಿಕ್ ಸೀನ್ಗಳಿಲ್ಲ. ಬರೀ ಮಾತಲ್ಲೇ ಅವರಿಬ್ಬರ ಪ್ರೀತಿ ವ್ಯಕ್ತವಾಗುತ್ತಾ ಹೋಗುತ್ತೆ. ಅವರಿಗೆ ಸಿನಿಮಾಗಳಿಂದ ಬಂದಿರೋ ಆಫರ್‌ಗಳೂ ಅಂತವೇ. ಅಲ್ಲೆಲ್ಲ ಈಕೆ ಬಹಳ ಡೀಸೆಂಟ್ ಹುಡುಗಿ. ಗ್ಲಾಮರ್ ಅನ್ನೋದರಿಂದ ಬಹಳ ದೂರ ಅನ್ನೋ ಥರದ ಪಾತ್ರಗಳು.

ರಂಜಿನಿ ರಿಯಲ್ ಲೈಫ್‌ನಲ್ಲೂ ಹೀಗೆ ಸಾಂಪ್ರದಾಯಿಕವಾಗಿಯೇ ಇರುತ್ತಾ? ಅವರು ಬೋಲ್ಡ್ ಡ್ರೆಸ್ ಹಾಕೋದೇ ಇಲ್ವಾ ಅನ್ನೋದು ಬಹಳ ಜನರ ಪ್ರಶ್ನೆ. ಆದರೆ ರಂಜಿನಿ ಅವರು ನೀವಂದುಕೊಂಡ ಹಾಗಲ್ಲ. ಈಕೆ 2017ರ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಟೈಟಲ್ ವಿಜೇತೆ ಗೊತ್ತಾ? ಸಾಕಷ್ಟು ಸಲ ramp ವಾಕ್ ಮಾಡಿದ್ದಾರೆ. ಸಖತ್ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಆದರೆ ರಂಜಿನಿಗೆ ಸಿಗ್ತಾ ಇರೋದೆಲ್ಲ ಸಾಂಪ್ರದಾಯಿಕ ಪಾತ್ರಗಳು.

ಅಪ್ಪನ ಅಂತ್ಯ ಸಂಸ್ಕಾರ ಭುವಿಯ ಮನಸು ತಟ್ಟಿದ್ದೇಕೆ..? ರಂಜನಿ ಈ ಅನುಭವದ ಬಗ್ಗೆ ಏನಂತಾರೆ? ...

ಈಗ ಮತ್ತೊಂದು ಪ್ರಶ್ನೆ- ರಂಜಿನಿ ರಾಘವನ್ ಗೆ ಯಾರಿಗೆ ಕಿಸ್ ಮಾಡೋದಕ್ಕೆ ಇಷ್ಟ ಅಂತ. ಆಕೆ ಹೇಳಿದ ಉತ್ತರ ನಿಜಕ್ಕೂ ನೀವು ಊಹೆ ಮಾಡಿದ್ದು ಆಗಿರೋದೇ ಇಲ್ಲ. ನೀವು ಯಾರೋ ಬಾಲಿವುಡ್ ಅಥವಾ ಸ್ಯಾಂಡಲ್ ವುಡ್ ಹೀರೋಗೆ ಕಿಸ್ ಮಾಡೋಕೆ ಆಕೆ ಇಷ್ಟ ಪಡಬಹುದು ಅಂದ್ಕೊಳ್ಳಬಹುದು. ಅಥವಾ ಕನ್ನಡತಿ ಸೀರಿಯಲ್‌ನಲ್ಲಿ ಭುವಿಯಾಗಿರುವ ರಂಜಿನಿ ಹರ್ಷನಿಗೆ ಕಿಸ್ ಮಾಡೋಕೆ ಇಷ್ಟ ಪಡಬಹುದಾ ಅನ್ನೋ ಕಳ್ಳ ಪ್ರಶ್ನೆನೂ ಮನಸ್ಸಿಗೆ ಬರಬಹುದು. ಆದರೆ ರಂಜಿನಿಗೆ ಬಹಳ ಕಿಸ್ ಮಾಡ್ಬೇಕು ಅಂತ ಅನಿಸಿರೋದು ಬಹಳ ಹಿಂದೆ ಬರ್ತಿದ್ದ 'ಅಂಜಲಿ' ಸೀರಿಯಲ್‌ನ ಮುದ್ದು ಗುಮ್ಮ ಹುಡುಗಿಗೆ. ಅಷ್ಟು ಪುಟಾಣಿ ಮುದ್ದು ಹುಡುಗಿನ ಕಂಡ್ರೆ ಯಾರಿಗಾದ್ರೂ ಹಾಗೇ ಅನಿಸಬಹುದು. ಅಷ್ಟಕ್ಕೂ ರಂಜಿನಿ ಈಗ ಯಾಕೆ ಆಕೆಯನ್ನು ನೆನೆಪಿಸಿಕೊಂಡಿದ್ದಾಳೆ ಅಂತ ನೀವು ಕೇಳಬಹುದು. ಆದರೆ ರಂಜಿನಿ ಈ ಮಾತು ಹೇಳಿದ್ದು ಕೆಲವು ಸಮಯದ ಹಿಂದೆ. ನಟಿ ಹರಿಣಿ ಈಕೆಯನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿಸಿದ್ರು. ಆಗ ಈಕೆಯ ಕಿಸ್ ವಿಚಾರ ಬಯಲಾಯ್ತು.

ಹಿಂದೂ ದಿಲೀಪ್‌ ಕುಮಾರ್‌, ಮುಸ್ಲಿಂ ಎ.ಆರ್.ರಹಮಾನ್‌ ಆದದ್ದು ಹೇಗೆ? ...