ರಂಜನಿ ರಾಘವನ್‌ ಕಥಾ ಸಂಕಲನ ‘ಕತೆ ಡಬ್ಬಿ’ ಬಿಡುಗಡೆ ಕಥೆ ಹೇಳ್ತಾರೆ ಕನ್ನಡತಿ ನಟಿ

‘ಕನ್ನಡತಿ’ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್‌(Ranjani Raghavan) ಅವರ ‘ಕತೆ ಡಬ್ಬಿ’ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ. ಬಹುರೂಪಿ ಪ್ರಕಾಶನ ಇದನ್ನು ಪ್ರಕಟಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಂಜನಿ, ‘ಕನ್ನಡ ಕಥಾ ಜಗತ್ತಿಗೆ ಹೊಸ ಓದುಗರನ್ನು ಕರೆತರಬೇಕು ಅನ್ನುವ ಉದ್ದೇಶ ನನ್ನದು. ಮೊದಲ ಸಂಕಲನ ಬಿಡುಗಡೆಯಾಗುತ್ತಿರುವ ಕಾರಣ ಭಯ, ಎಕ್ಸೈಟ್‌ಮೆಂಟ್‌, ಖುಷಿ ಎಲ್ಲವೂ ಇದೆ. ನಟನೆಯ ಕಾರಣ ನನಗೊಂದು ಅಭಿಮಾನಿ ಬಳಗವಿದೆ ಎಂದಿದ್ದಾರೆ.

ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

ಅವರೆಲ್ಲ ಈ ಕೃತಿಯ ಬಗ್ಗೆ ಕುತೂಹಲ ತೋರಿಸುತ್ತಿದ್ದಾರೆ. ಒಬ್ಬರಂತೂ ಟೆಕ್ಸ್‌ ್ಟಬುಕ್‌ ಬಿಟ್ರೆ ನಾನು ಖರೀದಿಸಿರುವ ಮೊದಲ ಪುಸ್ತಕ ನಿಮ್ಮದು ಅಂತ ಮೆಸೇಜ್‌ ಮಾಡಿದ್ರು. ಕತೆ ಡಬ್ಬಿಯಲ್ಲಿ ಒಟ್ಟು 14 ಕತೆಗಳಿವೆ. ಈಗಾಗಲೇ ಶೇ.25ರಷ್ಟುಪುಸ್ತಕಗಳು ಆನ್‌ಲೈನ್‌ನಲ್ಲಿ ಸೇಲ್‌ ಆಗಿವೆ. ಉಳಿದಂತೆ ಬರವಣಿಗೆ ನನ್ನನ್ನು ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸಿದೆ. ಜೀವನವನ್ನು ನೋಡುವ ರೀತಿಯನ್ನು ಕಲಿಸಿದೆ’ ಎಂದಿದ್ದಾರೆ.

View post on Instagram
View post on Instagram
View post on Instagram