ಕನ್ನಡದಲ್ಲಿ ಜಿ5 ಒರಿಜಿನಲ್‌ ನಿರ್ಮಾಣಕ್ಕೆ 100 ಕೋಟಿ ಹೂಡಿಕೆ ವೆಬ್‌ ಸೀರೀಸ್‌ ನಿರ್ಮಾಣಕ್ಕೆಂದೇ ಜೀ ಸಂಸ್ಥೆ ಗುರಿ

ಬೇರೆ ಬೇರೆ ಭಾಷೆಯಲ್ಲಿ ಒರಿಜಿನಲ್‌ ಕಂಟೆಂಟ್‌ಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈಗ ಕನ್ನಡದಲ್ಲಿ ದೊಡ್ಡ ಮಟ್ಟದ ಒರಿಜಿನಲ್‌ ಕಾರ್ಯಕ್ರಮಗಳನ್ನು ಬಿಡುಗಡೆ ಮಾಡುವುದಕ್ಕೆ ಜೀ5 ಓಟಿಟಿ(Zee 5 OTT) ಮುಂದಾಗಿದೆ. ಕನ್ನಡದಲ್ಲಿ ವೆಬ್‌ ಸೀರೀಸ್‌ ನಿರ್ಮಾಣಕ್ಕೆಂದೇ ಜೀ ಸಂಸ್ಥೆ ರು.100 ಕೋಟಿ ಹೂಡಲು ನಿರ್ಧರಿಸಿದೆ. ಈ ವಿಚಾರವನ್ನು ಖುದ್ದು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

‘ಓಟಿಟಿ ಒರಿಜಿನಲ್‌ ಅನ್ನುವುದು ಮನರಂಜನೆಯ ಮುಂದಿನ ಭವಿಷ್ಯ. ಬೇರೆ ಬೇರೆ ಭಾಷೆಗಳಲ್ಲಿ ಆಗಿರುವಂತೆ ಓಟಿಟಿ ಒರಿಜಿನಲ್‌, ವೆಬ್‌ ಸೀರೀಸ್‌ಗಳನ್ನು(Web series) ಕನ್ನಡದಲ್ಲಿ ನಿರ್ಮಾಣ ಮಾಡುವ ಆಸೆ ನಮ್ಮದು. ಇದೇ ಡಿಸೆಂಬರ್‌ ಹೊತ್ತಿಗೆ ಕೆಲಸ ಶುರುವಾಗಲಿದೆ. ಮುಂದಿನ ಜುಲೈ, ಆಗಸ್ಟ್‌ ಹೊತ್ತಿಗೆ ರು.100 ಕೋಟಿ ಇನ್ವೆಸ್ಟ್‌ ಮಾಡಲಾಗುತ್ತದೆ. ಕನ್ನಡದಲ್ಲಿ ಕತೆ ಇಲ್ಲ, ನಿರ್ದೇಶಕರಿಲ್ಲ ಎಂಬೆಲ್ಲಾ ಪ್ರಶ್ನೆಗಳಿಗೆ ಈ ವೆಬ್‌ ಸೀರೀಸ್‌ಗಳು ಉತ್ತರವಾಗಲಿವೆ’ ಎಂದು ರಾಘವೇಂದ್ರ ಹುಣಸೂರು ಹೇಳುತ್ತಾರೆ.

ಸರ್ಕಾರಿ ಶಾಲೆಯ ಸಾಧಾರಣ ಮಿಸ್ಸು..! ಮಿಸ್‌ ನಂದಿನಿ ಬರ್ತಿದ್ದಾರೆ

ಜೀ5 ಓಟಿಟಿಯನ್ನು ಇನ್ನಷ್ಟುಯೂಸರ್‌ ಫ್ರೆಂಡ್ಲಿ ಓಟಿಟಿಯನ್ನಾಗಿಸುವ ಕೆಲಸ ಕೂಡ ನಡೆಯುತ್ತಿದೆ. ಮುಂದಿನ ವರ್ಷ ಜೀ5 ಸಂಪೂರ್ಣವಾಗಿ ಬದಲಾಗಲಿದೆ ಎನ್ನಲಾಗಿದೆ.

ಜೀ ಕುಟುಂಬ ರಥಕ್ಕೆ ಚಾಲನೆ

ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ 2021 ಕಾರ್ಯಕ್ರಮ ಶೀಘ್ರದಲ್ಲಿ ನಡೆಯಲಿದೆ. ಈ ಸಲ ಕೆಲವು ಪ್ರಶಸ್ತಿಗಳ ಆಯ್ಕೆಯನ್ನು ವೀಕ್ಷಕರು ಮಾಡಬಹುದು. ಅದಕ್ಕಾಗಿ ಜೀ ವಾಹಿನಿ ಮೂರು ಜೀ ಕುಟುಂಬ ರಥ ರಾಜ್ಯದಲ್ಲೆಲ್ಲಾ ಸಂಚರಿಸುತ್ತದೆ. ರಥ ಭೇಟಿ ಕೊಟ್ಟಲ್ಲೆಲ್ಲಾ ಜೀ ಟಿವಿ ಪ್ರೇಕ್ಷಕರು ಜೀ5 ಆ್ಯಪ್‌ ಮೂಲಕ ತಮ್ಮ ಇಷ್ಟಕಲಾವಿದರಿಗೆ, ತಂತ್ರಜ್ಞರಿಗೆ ಓಟ್‌ ಮಾಡಬಹುದು.

"

ಈ ಜೀ ಕುಟುಂಬ ರಥಕ್ಕೆ ನಾದಬ್ರಹ್ಮ ಹಂಸಲೇಖ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು, ‘ಉದ್ಯಮ ಕೊಡದ ಗುರು ಸ್ಥಾನವನ್ನು ಕೊಟ್ಟು ಪೂರ್ಣಾನುಭೂತಿ ಒದಗಿಸಿದ ಜೀ ಸಂಸ್ಥೆಗೆ ಕೃತಜ್ಞ’ ಎಂದರು. ಕಿರುತೆರೆ ತಾರೆಯರಾದ ಅನಿರುದ್ಧ, ಮೋಕ್ಷಿತಾ ಪೈ, ಮೇಘಾ ಶೆಟ್ಟಿಇದ್ದರು.