ಬಯಕೆಯಿಂದಾನೇ ನಂಗ್ಯಾವ ಮಗು ಹುಟ್ಟುತ್ತೆಂದು ಗೊತ್ತಿತ್ತು: ಯೂಟ್ಯೂಬರ್ ಪೂಜಾ ಕೆ ರಾಜ್
ಗಂಡಾ ಹೆಣ್ಣಾ ಅನ್ನೋ ಗೊಂದಲಿದ್ದ ಪೂಜಾ ಡಾಕ್ಟರ್ ಕೊಟ್ಟಿದ್ದರು ದೊಡ್ಡ ಸುಳಿವು...ವಿಡಿಯೋ ಮಾಡಿದ್ದಕ್ಕೆ ನೆಟ್ಟಿಗರು ಗರಂ.....
ಕನ್ನಡ ಯೂಟ್ಯೂಬರ್‌ಗಳಲ್ಲಿ ಸಖತ್ ಹೆಸರು ಮಾಡಿರುವ ಪೂಜಾ ಕೆ ಆರ್ ಮತ್ತು ಸತೀಶ್ ಈರೇಗೌಡರು ಕೆಲವು ತಿಂಗಳ ಹಿಂದೆ ಗಂಡು ಮಗುವನ್ನು ಬರ ಮಾಡಿಕೊಂಡರು. ಎರಡನೇ ಮಗು ಮಾಡಿಕೊಳ್ಳುವ ಪ್ಲ್ಯಾನ್ ಇರಲಿಲ್ಲ ಆದರೆ ನನ್ನ ಮಗಳು ಒಂಟಿ ಆಗಬಾರದು ಎಂದ ಆಲೋಚನೆಯಲ್ಲಿ ಫ್ಯಾಮಿಲಿ ಪ್ಲ್ಯಾನ್ ಮಾಡಲು ಮುಂದಾಗುತ್ತಾರೆ. ಈರೇಗೌಡ ಫುಲ್ ಫ್ಯಾಮಿಲಿ ಖುಷಿಯಾಗಿದ್ದಾರೆ ಆದರೆ ಪ್ರೆಗ್ನೆನ್ಸಿ ಜರ್ನಿ ಹಂಚಿಕೊಳ್ಳಲು ಹೋಗಿ ಪೂಜಾ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು! ಇತ್ತೀಚಿಗೆ ಪೂಜಾ ಕೆ ಆರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರೆಗ್ನೆನ್ಸಿ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಯಾಕೆ ಎರಡನೇ ಮಗುವಿಗೆ ಪ್ಲ್ಯಾನ್ ಮಾಡಿದ್ದು ಎಂದು ರಿವೀಲ್ ಮಾಡಿದ್ದಾರೆ. ಹೀಗೆ ಸಣ್ಣದಾಗಿ ದೇವರ ಪೂಜೆ ಮಾಡಿಸಿದಾ ಅಲ್ಲಿನ ಪುರೋಹಿತರು ನಿಮಗೆ ಪುತ್ರ ಪ್ರಾಪ್ತಿ ಆಗಲಿದೆ ಎಂದು ಹೇಳಿದ್ದಾರೆ. ಅಲ್ಲಿಂದ ತಲೆಗೆ ಹುಳ ಬಿಟ್ಟುಕೊಂಡ ಪೂಜಾ ನಮ್ಮ ಹಿರಿ ಮಗಳು ದೊಡ್ಡವಳಾದ ಮೇಲೆ ಕಷ್ಟ ಸುಖ ಹಂಚಿಕೊಳ್ಳಲು ಒಬ್ಬರು ಬೇಕು ಎಂದು ಎರಡನೇ ಮಗುವಿನ ಪ್ಲ್ಯಾನ್ ಮಾಡುತ್ತಾರೆ. ಪ್ರೆಗ್ನೆನ್ಸಿ ಸಿಹಿ ಸುದ್ದಿಯನ್ನು ಹಂಚಿಕೊಂಡು, ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದ ಪೂಜಾರವರು ತಮಗೆ ಮಗು ಹುಟ್ಟುವ ಎರಡು ಮೂರು ತಿಂಗಳು ಮುನ್ನವೇ ಗಂಡು ಮಗು ಎಂದು ಗೊತ್ತಿತ್ತು ಎಂದಿದ್ದಾರೆ.
ಹೊಟ್ಟೆಗೆ ಏನ್ ತಿಂತೀರಾ ಇಷ್ಟು ಚೆನ್ನಾಗಿದ್ದೀರಾ; 'ಸವಿರುಚಿ' ನಿರೂಪಕಿ ಕಾಲೆಳೆದ ಪಡ್ಡೆ ಹುಡುಗರು
ಮನೆಯಲ್ಲಿ ಯಾವುದೋ ಟೆಸ್ಟ್ ಮಾಡಿದಾಗ ಹೆಣ್ಣು ಮಗು ಅಂತ ತೋರಿಸಿಬಿಟ್ಟಿದೆ ಅಲ್ಲಿಂದ ಎರಡನೇ ಮಗು ಕೂಡ ಹೆಣ್ಣು ಅಂದುಕೊಂಡು ಸುಮ್ಮನಾಗಿದ್ದಾರೆ ಆದರೆ ಒಮ್ಮೆ ಡಾಕ್ಟರ್ ಚೆಕಪ್ ಮಾಡಿಸಲು ಹೋದಾಗ 'ಹೆಣ್ಣು ಮಕ್ಕಳು ಹುಟ್ಟುವುದಾದರೆ ಜಾಸ್ತಿ symptoms ಇರುತ್ತೆ' ಎಂದು ಡಾಕ್ಟರ್ ಹೇಳಿದ್ದಾರೆ. ಯಾಕೆ ಡಾಕ್ಟರ್ ಹೀಗೆ ಹೇಳಿದ್ದಾರೆ ಅಂದ್ರೆ, ನನಗೆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ ನಾನು ತೂಕ ಹೆಚ್ಚಾಗುತ್ತಿಲ್ಲ ನನ್ನ ಯಾವ ಬಯಕೆ ಇಲ್ಲ ಹಾಗೆ ಹೀಗೆ ಎಂದು ಪೂಜೆ ಒಂದಾದ ಮೇಲೊಂದು ಕಂಪ್ಲೇಂಟ್ ಹೇಳುತ್ತಿದ್ದರು. ಡಾಕ್ಟರ್ ಹೇಳಿದ ಮಾತನ್ನು ಗೊಂದಲದಲ್ಲಿ ಪೂಜಾ ತಮ್ಮ ಅಕ್ಕ ಕಾವ್ಯಾ ಅವರಿಗೆ ಕರೆ ಮಾಡಿ ಮಾತು ಹಂಚಿಕೊಂಡಿದ್ದಾರೆ. ಹೀಗೆ ಯಾವ ಲಕ್ಷಣವೂ ಇಲ್ಲದ ಕಾರಣ ಗಂಡು ಎಂದು ಗೊತ್ತಾಗಿತ್ತು ಎಂದು ಪೂಜಾ ಹೇಳಿದ್ದಾರೆ.
ಅಪ್ಪ ಅಗಲಿದರು, ಹುಡ್ಗಿ ಕೈ ಕೊಟ್ಳು, ಫ್ರೆಂಡ್ ಶಾಶ್ವತವಾಗಿ ಬಿಟ್ಟೋದ; ವರುಣ್ ಆರಾಧ್ಯ ಪರಿಸ್ಥಿತಿ ನೋಡಿ...
ಪೂಜಾ ಕೆ ರಾಜ್ ಮತ್ತು ಸತೀಶ್ ಈರೇಗೌಡರು ಮಾಡುವ ಯೂಟ್ಯೂಬ್ ವಿಡಿಯೋಗಳನ್ನು ಸುಮಾರು ಜನ ನೋಡುತ್ತಾರೆ. ಈ ರೀತಿ ಸುಳಿವು ಸಿಕ್ಕಿತ್ತು, ಡಾಕ್ಟರ್ ಹೀಗೆ ಹೇಳಿದ್ದರು ಎಂದು ವಿಡಿಯೋ ಮಾಡಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. 18 ಅಥವಾ 19 ಸೆಪ್ಟೆಂಬರ್ ಅಪ್ಲೋಡ್ ಮಾಡಿರುವ ವಿಡಿಯೋ ಇದಾಗಿದ್ದು 35 ಸಾವಿರ ಜನರು ನೋಡಿದ್ದಾರೆ.'ನಿಮಗೆ ಗಂಡು ಮಗು ಆಗುತ್ತೆ ಅಂತ ಗೊತ್ತಿತ್ತಾ? ನೀವು ಎಷ್ಟು ಜನ ಮಕ್ಕಳು?' ಅನ್ನೋ ಟೈಟಲ್ ಕೊಟ್ಟು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನಿಮಗೆ ಚೆನ್ನಾಗಿ ವ್ಯೂಸ್ ಬರಬೇಕು ಹಣ ಮಾಡಬೇಕು ಎಂದು ಡಾಕ್ಟರ್‌ನ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಸರಿ ಅಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.