ಬೆಂಗಳೂರು-ಮೈಸೂರು ಹೈವೇಯಲ್ಲಿ ಕಾರು ಚಲಿಸಿ 25 ಸಾವಿರ ಫೈನ್ ಕಟ್ಟಿದ ಯೂಟ್ಯೂಬರ್ ನಿಖಿಲ್; 1 ತಿಂಗಳಲ್ಲಿ ಏನ್ ಆಯ್ತು ನೋಡಿ!

ಅತಿ ವೇಗವಾಗಿ ಕಾರು ಚಲಿಸಿ ಬೆಂಗಳೂರು- ಮೈಸೂರು ಹೈವೇಯಲ್ಲಿ ದಂಡ ಕಟ್ಟಿದ ನಿಖಿಲ್ ರವೀಂದ್ರ. ಅಯ್ಯೋ...ಎಷ್ಟು ಅಂತ ಕೇಳಿ ಶಾಕ್ ಆದ ಭಾವಿ ಪತ್ನಿ.....
 

Kannada youtuber Nikhil ravindra pays 25 thousand rupees fine in Benagluru Mysore highway vcs

ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಿಖಿಲ್ ರವೀಂದ್ರ ಮತ್ತು ಮಧು ಗೌಡ ತಯಾರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸೀರೆ ಶಾಪಿಂಗ್, ಒಡವೆ ಶಾಪಿಂಗ್, ಕಾರ್ಡ್ ಪ್ರಿಂಟ್, ಕಾರು ಖರೀದಿ..ಹೀಗೆ ಒಂದಾದ ಮೇಲೊಂದು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ ನಿಶಾ ಮತ್ತು ಮಧು ಗೌಡ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ಜೋಡಿ ಡಿಫರೆಂಟ್ ಡಿಫರೆಂಟ್ ಆಗಿ ಬ್ರಾಂಡ್ ಪ್ರಮೋಷನ್ ಮಾಡಿಕೊಂಡು ದುಡಿಮೆ ಮಾಡುತ್ತಿದ್ದಾರೆ. ಆದರೆ ಮದುವೆ ಖರ್ಚಿನ ನಡುವೆ ದೊಡ್ಡ ಶಾಕ್ ಎದುರಿಸಿದ್ದಾರೆ.

ಹೌದು! ಬೆಂಗಳೂರು ಮೈಸೂರು ಹೈವೇಯಲ್ಲಿ ಕಾರುಗಳು ಸಿಕ್ಕಾಪಟ್ಟೆ ಸ್ಪೀಡ್ ಆಗಿ ಓಡಿಸುತ್ತಿದ್ದಾರೆ ಜನರು ಎನ್ನುವ ಕಾರಣಕ್ಕೆ ಕೆಲವು ತಿಂಗಳ ಹಿಂದೆ ಸ್ಪೀಡ್‌ ಲಿಮಿಟ್ ಸೆಟ್ ಮಾಡಲಾಗಿತ್ತು. ಯಾವ ಲೇನ್‌ನಲ್ಲಿದ್ದರು ಎಷ್ಟು ಸ್ಪೀಡ್ ಫಾಲೋ ಮಾಡಬೇಕು ಪ್ರತಿ 2-3 ಕಿಮೀ.ಗೆ ಹಾಕಲಾಗಿದೆ. ಒಂದಿಷ್ಟು ದೂರಕ್ಕೂ ಕ್ಯಾಮೆರಾ ಅಳವಡಿಸಲಾಗಿದೆ, AI ತಂತ್ರಜ್ಞದ ಸಹಾಯದಿಂದ ಗಾಡಿ ನಂಬರ್ ಪಿಕ್ ಮಾಡಿ ತಕ್ಷಣವೇ ಮಾಲೀಕರಿಗೆ ಮೆಸೇಜ್ ಹೋಗುತ್ತದೆ. 100 ಕಿಮೀ.ಗೂ ಹೆಚ್ಚು ವೇಗವಾಗಿ ಕಾರು ಚಲಿಸಿದರೆ ಮೆಸೇಜ್ ಬರುತ್ತದೆ ಅಪ್ಪಿತ್ತಪಿ 120/130 ಕ್ಕೂ ಹೆಚ್ಚು ಸ್ಪೀಡ್‌ನಲ್ಲಿದ್ದರೆ ಹತ್ತಿರ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಆಗ ತಮ್ಮ ಕಾರು, ಓರಿಜಿನಲ್ ಡಾಕ್ಯೂಮೆಂಟ್ ಹಿಡಿದು ಠಾಣೆಯಲ್ಲಿ ಫೈನ್‌ ಕಟ್ಟಬೇಕು. 

ಹೊಟ್ಟೆಗೆ ಏನ್ ತಿಂತೀರಾ ಇಷ್ಟು ಚೆನ್ನಾಗಿದ್ದೀರಾ; 'ಸವಿರುಚಿ' ನಿರೂಪಕಿ ಕಾಲೆಳೆದ ಪಡ್ಡೆ ಹುಡುಗರು

ನಿಖಿಲ್ ನಿಯಮ ಉಲ್ಲಂಘನೆ:

ಇತ್ತೀಚಿಗೆ ನಿಶಾ ರವೀಂದ್ರ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ತಮ್ಮ ಅಣ್ಣ ಕಟ್ಟಿರುವ ಫೈನ್‌ ಬಗ್ಗೆ ರಿವೀಲ್ ಮಾಡಿದ್ದಾರೆ. ಒಂದು ತಿಂಗಳಿನಲ್ಲಿ ಸುಮಾರು 24,500 ರೂಪಾಯಿ ಫೈನ್ ಕಟ್ಟಿದ್ದಾರೆ. ಬೆಂಗಳೂರು ಮೈಸೂರು ಹೈವೇಯಲ್ಲಿ ಕಾರು ಚಲಿಸುತ್ತಿದ್ದ ಯಾವುದೇ ಮೆಸೇಜ್ ಬಾರದ ಕಾರಣ ಇದೆಲ್ಲಾ ಸುಳ್ಳು ಎಂದು ಸ್ಪೀಡ್ ಆಗಿ ಓಡಿಸಿ ಒಂದೇ ಸಲ ಫೈನ್ ಕಟ್ಟಿದ್ದಾನೆ. ಅಣ್ಣ ಸಿಕ್ಕಾಪಟ್ಟೆ ಸ್ಪೀಡ್ ಆಗಿ ಕಾರು ಓಡಿಸುತ್ತಾನೆ ಇಷ್ಟು ಚೆನ್ನಾಗಿರುವ ರಸ್ತೆಯಲ್ಲಿ ಹೇಗೆ ಸ್ಲೋ ಹೋಗಲಿ ಎನ್ನುತ್ತಾನೆ...ಇದೆಲ್ಲಾ ಹೇಳಿ ಈಗ ಫೈನ್ ಕಟ್ಟಿದ್ದಾನೆ. ಭಾವಿ ಪತ್ನಿ ಮಧು ಗೌಡ ಜೊತೆ ಹೋಗಿ ಫೈನ್ ಕಟ್ಟಿ ಬಂದಿದ್ದಾನೆ, ಆಕೆ ಸರಿಯಾಗಿ ಬೈದಿದ್ದಾಳೆ ಎಂದು ನಿಶಾ ಹೇಳಿದ್ದಾರೆ. 

Latest Videos
Follow Us:
Download App:
  • android
  • ios