ಭರವಸೆಯ ಬೆಳಕು ವಿಡಿಯೋ ಸಾಂಗ್ ರಿಲೀಸ್ ಕೊರೋನಾ ವಾರಿಯರ್ಸ್‌ಗೆ ಧೈರ್ಯ ತುಂಬಿದ ಕಿರುತೆರೆ ಕಲಾವಿದರು 

ಕಿರುತೆರೆ ಕಲಾವಿದರು, ಬಿಗ್‌ಬಾಸ್ ಸೀಸನ್ 8 ಸ್ಪರ್ಧಿ, ನಿರೂಪಕ ಹೀಗೆ ಇವರೆಲ್ಲರೂ ಸೇರಿ ಮಾಡಿರೋ ಚಂದದ್ದೊಂದು ವಿಡಿಯೋ ಸಾಂಗ್ ವೈರಲ್ ಆಗಿದೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ಸಿಬ್ಬಂದಿ, ವೈದ್ಯರು ಸೇರಿದಂತೆ ಎಲ್ಲರನ್ನು ಗೌರವಿಸಿ ಅವರ ಸೇವೆಯನ್ನು ಶ್ಲಾಘಿಸುವ ನಿಟ್ಟಿನಲ್ಲಿ ಈ ಸಾಂಗ್ ರೆಡಿಯಾಗಿದೆ. ಇದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದೀಗ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೋನಾ ಎರಡನೇ ಅಲೆಯಲ್ಲಿ ಭೀಕರ ಪರಿಣಾಮ ಎದುರಿಸಿದ ದೇಶ ಅವಿರತವಾಗಿ ವೈರಸ್ ವಿರುದ್ಧ ಹೋರಾಡುತ್ತಿದೆ. ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು, ವೈದ್ಯರು, ಪೊಲೀಸರು, ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಈ ಸಂದರ್ಭ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರನ್ನು ಹಾಡಿನ ಮೂಲಕ ಗೌರವಿಸುವ ಕೆಲಸ ಮಾಡಿದ್ದಾರೆ ಚಲನಚಿತ್ರ ನಿರ್ಮಾಣ ವ್ಯವಸ್ಥಾಪಕ ಸುಶೀಲ್ ಸಾಗರ್.

ನ್ಯಾಷನಲ್ ಕ್ರಷ್ ರಶ್ಮಿಕಾಗೆ ಇನ್ನೊಂದು ಬಿರುದು..!

ಭರವಸೆಯ ಬೆಳಕು ಎಂಬ ಸುಂದರ ಹಾಡೊಂದು ರಿಲೀಸ್ ಮಾಡಿದ್ದು ಇದರಲ್ಲಿ ಕಾಣಿಸಿಕೊಂಡ ನಟ, ನಟಿಯರು, ಗಾಯಕರು ಯಾರೂ ಯಾವುದೇ ಫಲಾಪೇಕ್ಷೆ ಇಲ್ಲದೆ ಇದರ ಜೊತೆ ಕೈ ಜೋಡಿಸಿರುವುದು ವಿಶೇಷ.

YouTube video player

ಎಸ್. ರಂಜನಿ ಹಾಡಿಗೆ ಸಾಹಿತ್ಯ ಬರೆದಿದ್ದರೆ, ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ. ಅಶ್ವಿನ್ ಶರ್ಮಾ, ಐಶ್ವರ್ಯ ರಂಗರಾಜನ್, ಆಶಾ ಭಟ್ ಹಿನ್ನೆಲೆ ಗಾಯನ ಇದೆ. ರಕ್ಷಿತ ಅವರ ಸ್ಕ್ರಿಪ್ಟ್ ಹಾಗೂ ಪುನೀತ್ ಡಿಒಪಿ ಇದೆ. ಈ ವಿಡಿಯೋ ಸಾಂಗ್‌ನಲ್ಲಿ ವಸಿಷ್ಠ ಸಿಂಹ, ಅನುಪಮ ಗೌಡ, ಶೈನ್ ಶೆಟ್ಟಿ, ರಘು ಗೌಡ, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್ ಹಾಗೂ ಚೈತ್ರಾ ವಾಸುದೇವನ್ ನಟಿಸಿದ್ದಾರೆ.