ಕಿರುತೆರೆ ನಟ ನಂದನ್ ಭಟ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 'ಅಮ್ಮ ಬಂದ್ರು' ವೆಬ್ ಸೀರಿಸ್ ನಲ್ಲಿ ನಟಿಸಿದ್ದ ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಶೃಂಗೇರಿ (ಜು.24): ಕಿರುತೆರೆ ಕಲಾವಿದ 24 ವರ್ಷದ ನಂದನ್ ಭಟ್ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿ ಯಾಗದೇ ಮಂಗಳವಾರ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದ್ದಾರೆ. ಶೃಂಗೇರಿ ತಾಲೂಕಿನ ಮೆಣಸೆ ಪಂಚಾಯಿತಿ ಮುಂಡಗೋಡು ಗ್ರಾಮದವರಾದ ನಂದನ್ ನಾಟಕ, ಕಿರುತೆರೆಗಳಲ್ಲಿ ಅಭಿನಯ ಮಾಡುತ್ತಿದ್ದರು.

ಬೆಂಗಳೂರಿನ ಮಾಸ್ಟರ್‌ಆನಂದ್ ನಿರ್ದೇಶನದ ಅಮ್ಮ ಬಂದ್ರು ಸೇರಿದಂತೆ ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಿದ್ದರು. ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಿವಾಹಿತರಾಗಿದ್ದ ಇವರು, ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸುರೇಶ್ ಪುತ್ರ.

ಮಾಸ್ಟರ್‌ ಆನಂದ್‌ ಸ್ಟುಡಿಯೋಸ್‌ನಲ್ಲಿ ರಿಲೀಸ್‌ ಆಗುತ್ತಿದ್ದ ಅಮ್ಮ ಬಂದ್ರು ವೆಬ್‌ ಸಿರೀಸ್‌ನಲ್ಲಿ ನಂದನ್‌ ಭಟ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಹಲವಾರು ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಜುಲೈ 5ರ ಎಪಿಸೋಡ್‌ನಲ್ಲಿ ನಂದನ್‌ ಭಟ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸೀರೀಸ್‌ನಲ್ಲಿ ಮಾಸ್ಟರ್‌ ಆನಂದ್‌ ಹಾಗೂ ಅವರ ಪುತ್ರಿ ವಂಶಿಕಾ ಜೊತೆ ನಂದನ್‌ ಭಟ್‌ ನಟಿಸಿದ್ದರು. ಆದರೆ ಇವರ ಸಾವಿಗೆ ಕಾರಣವೇನು ಅನ್ನೋದು ಇನ್ನೂ ಕುತೂಹಲವಾಗಿಯೇ ಉಳಿದುಕೊಂಡಿದೆ.

Amma Bandru! Master Anand Daughter Turns Naga’s Dominant Mother 🤯 | Super Funny Twist - Naga Family