ಕಿರುತೆರೆ ಮತ್ತೆ ಮನರಂಜನೆ ನೀಡಲು ಸಜ್ಜಾಗಿದೆ. ಜೂನ್ 1 ರಿಂದ ಧಾರಾವಾಹಿಗಳು ಪ್ರಸಾರವಾಗಲಿವೆ. ಯಾವ ವಾಹಿನಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಮಾಹಿತಿ ಪೂರ್ಣ ವರದಿ ಇಲ್ಲಿದೆ.
ಕನ್ನಡಪ್ರಭ ಸಿನಿವಾರ್ತೆ
ಮಾಸ್ಕ್ ಹಾಕಿಕೊಂಡು ಎಂಟ್ರಿ ಕೊಡೋ ನಾಯಕಿ, ರೊಮ್ಯಾಂಟಿಕ್ ಸೀನ್‌ಗೆ ಸೋಷಲ್ ಡಿಸ್ಟೆನ್ಸಿಂಗ್ ಅಡ್ಡಿ, ಕತೆಯಲ್ಲೊಂದು ಹೊಸತನ, ಹಾಗಂತ ಗೋಳಿಲ್ಲವಾ ಅನ್ನೋ ಹಾಗಿಲ್ಲ. ವ್ಯಥೆಯಿಲ್ಲದಿದ್ದರೆ ಅದು ಸೀರಿಯಲ್ ಕಥೆಯಾಗೋದಾದ್ರೂ ಹೇಗೆ.. ಮೊದಲಿನ ಗೌಜಿ ಗದ್ದಲಗಳಿಲ್ಲ, ಹೀರೋಯಿನ್ ಮನೆಬಿಟ್ಟು ಮೇನ್ ರೋಡ್‌ನಲ್ಲಿ ಎಸ್ಕೇಪ್ ಆಗಲ್ಲ. ಮನೆಯ ಹಿರಿಯಜ್ಜಿ ಸ್ಕ್ರೀನ್ ಮೇಲೆ ಬರಲ್ಲ..
ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು
-ಹೀಗೆ ಕೊರೋನಾ ಕಾಲದ ಬದಲಾವಣೆಗೆ ಒಗ್ಗಿಕೊಂಡೇ ಹಳೇ ಸೀರಿಯಲ್‌ಗಳು ಫ್ರೆಶ್ ಎಪಿಸೋಡ್ ಜೊತೆಗೆ ನಿಮ್ಮ ಮುಂದೆ ಬರುತ್ತವೆ. ಇದಕ್ಕಾಗಿ ಕಲರ್ಸ್, ಜೀ ಕನ್ನಡ, ಸುವರ್ಣ, ಉದಯ ಟಿವಿಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಸುಮಾರು ಎರಡು ತಿಂಗಳಿಗೂ ಮಿಕ್ಕಿ ರಜೆ ಹಾಕಿದ್ದ ಸೀರಿಯಲ್‌ಗಳತ್ತ ಮತ್ತೆ ಪ್ರೇಕ್ಷಕನನ್ನು ಕರೆತರೋದು ಸಣ್ಣ ಕೆಲಸ ಅಲ್ಲವಲ್ಲ. ಜೊತೆಗೆ ಸರ್ಕಾರ ವಿಧಿಸಿದ ನಿಬಂಧನೆಗಳು - ಇನ್‌ಡೋರ್ ಶೂಟಿಂಗ್ ಮಾತ್ರ ಮಾಡಬೇಕು, ಇಂತಿಷ್ಟೇ ನಟರು ಸೆಟ್‌ನಲ್ಲಿರಬೇಕು, ವಯಸ್ಸಾದ ನಟ ನಟಿಯವರು, ಟೆಕ್ನಿಷಿಯನ್ ಗಳಿಗೆ ಅವಕಾಶವಿಲ್ಲ, ಮೇಕಪ್ ಪ್ರಾಬ್ಲಮ್ ಇತ್ಯಾದಿಗಳನ್ನು ಪಾಲಿಸಿಯೇ ಸೀರಿಯಲ್ ತಂಡಗಳು ಶೂಟಿಂಗ್ ಗೆ ಮುಂದಾಗಿವೆ. ರೆಡಿಯಾಗುತ್ತಿರುವ ಎಪಿಸೋಡ್‌ಗಳನ್ನು ಪ್ರೇಕ್ಷಕರಿಗೆ ತಲುಪಿಸೋ ನಿಟ್ಟಿನಲ್ಲಿ ಚಾನೆಲ್ ಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಕ್ರಿಯೇಟಿವ್ ಪ್ರೋಮೋಗಳು, ಸೀರಿಯಲ್ ಪಾತ್ರಗಳಿಂದ ಜೋಶ್‌ಫುಲ್ ಇನ್‌ವೈಟ್, ಸೋಷಲ್ ಮೀಡಿಯಾಗಳಲ್ಲಿ ಭರ್ಜರಿ ಪ್ರಚಾರಗಳಿಂದ ಮತ್ತೆ ಪ್ರೇಕ್ಷಕನಿಗೆ ಸೀರಿಯಲ್ ರುಚಿ ಹತ್ತಿಸಲು ತುದಿಗಾಲಲ್ಲಿ ನಿಂತಿವೆ.
ಫ್ರೆಶ್‌ನೆಸ್, ಫ್ರೆಶ್ ಅಪ್ರೋಚ್ ಜೊತೆಗೆ ವಾಪಾಸ್ ಬರ್ತಿದ್ದೀವಿ. ವೀಕೆಂಡ್ ನಲ್ಲಿ ಹೊಸ ಕಾರ್ಯಕ್ರಮಗಳನ್ನು ಶುರು ಮಾಡುವ ಪ್ಲಾ$ನ್ ಇದೆ. ಸದ್ಯಕ್ಕೆ ರಂಗನಾಯಕಿ ಬಿಟ್ಟು ಅಷ್ಟೂಸೀರಿಯಲ್‌ಗಳು ಪ್ರಸಾರ ಆಗುತ್ತಿವೆ. ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಮುಂದುವರಿಯುತ್ತೇವೆ. -ಪರಮೇಶ್ವರ ಗುಂಡ್ಕಲ್ ಕಲರ್ಸ್ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್
ಯಾವೆಲ್ಲ ಚಾನೆಲ್ ಯಾವ ಸೀರಿಯಲ್?
ಕಲರ್ಸ್ ಕನ್ನಡ: ಹಳೇ ಸೀರಿಯಲ್‌ಗಳು ತಾಜಾ ಕತೆ
ಕಲರ್ಸ್ ಕನ್ನಡ ‘ರಂಗನಾಯಕಿ’ ಹೊರತುಪಡಿಸಿ ತನ್ನೆಲ್ಲ ಸೀರಿಯಲ್ ಗಳನ್ನೂ ಜೂನ್ 1ರಿಂದ ಪ್ರಸಾರ ಮಾಡಲಿದೆ ಅಂತ ಕಲರ್ಸ್ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ. ಫ್ರೆಶ್ ಎಪಿಸೋಡ್‌ಗಳು ತಾಜಾ ಕತೆಯೊಂದಿಗೆ ಪ್ರೇಕ್ಷಕರ ಮನ ಗೆಲ್ಲಲಿವೆ ಅನ್ನುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕಲರ್ಸ್‌ನಲ್ಲಿ ಮುಂದಿನ ತಿಂಗಳಿನಿಂದ ಇವಳು ಸುಜಾತ, ಮಿಥುನ ರಾಶಿ, ನಮ್ಮನೆ ಯುವರಾಣಿ, ಮಂಗಳ ಗೌರಿ ಮದುವೆ, ಕನ್ನಡತಿ, ಗೀತಾ, ಮೂರು ಗಂಟು, ನನ್ನರಸಿ ರಾಧೆ, ಸೀತಾ ವಲ್ಲಭ ಧಾರಾವಾಹಿಗಳು ಹಿಂದಿನ ಸಮಯದಲ್ಲೇ ಪ್ರಸಾರವಾಗಲಿವೆ. ಜೊತೆಗೆ ಶಾತಂ ಪಾಪಂ ಶೋ ಹಿಂದಿನ ಟೈಮ್‌ನಲ್ಲೇ ಪ್ರಸಾರವಾಗಲಿದೆ.
ಲಾಕ್‌ಡೌನ್‌ನಲ್ಲಿ ದಾಂಪತ್ಯದ ಹಾದಿ ತುಳಿದ ಮಗಳು ಜಾನಕಿ ಸೀರಿಯಲ್ ನಟಿ!
ಜೀ ಕನ್ನಡದಲ್ಲಿ ಮೂರು ರಿಯಾಲಿಟಿ ಶೋಗಳು
ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ‘ಲಾಕ್‌ಡೌನ್ ಡೈರೀಸ್’ ಪ್ರಸಾರವಾಗಲಿವೆ. ಲಾಕ್‌ಡೌನ್ ಟೈಮ್‌ನಲ್ಲಿ ಜನಪ್ರಿಯ ತಾರೆಯರ ದಿನಚರಿಯನ್ನು ಮೊಬೈಲ್ ಮೂಲಕ ಸೆರೆಹಿಡಿದು ಪ್ರಸಾರ ಮಾಡುತ್ತಿರುವುದು ವಿಶೇಷ. ‘ಕಾಫಿ ವಿತ್ ಅನು’ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಸಿನಿಮಾ ತಾರೆಯರನ್ನು ಸಂದರ್ಶಿಸಿ ಅಪರೂಪದ ವಿಚಾರಗಳನ್ನು ಪ್ರೇಕ್ಷಕರೆದುರು ಇಡುತ್ತಾರೆ. ಇದು ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿವೆ. ಜೊತೆಗೆ ಸೋಷಲ್ ಮೀಡಿಯಾದಲ್ಲಿ ಜನಪ್ರಿಯ ಗಾಯಕರ ಲೈವ್ ಕಾರ್ಯಕ್ರಮವನ್ನೂ ಆಯೋಜಿಸುತ್ತಿವೆ. ಹಳೆ ಧಾರವಾಹಿಗಳ ಹೊಸ ಎಪಿಸೋಡ್ ಗಳು ಹಿಂದಿನ ಸಮಯದಲ್ಲೇ ಪ್ರಸಾರವಾಗುತ್ತವೆ ಎಂದು ಚಾನೆಲ್ ಮೂಲಗಳು ತಿಳಿಸಿವೆ. ಮಾಲ್ಗುಡಿ ಡೇಸ್ ಸಂಜೆ 6.30ಕ್ಕೆ, ಕಮಲಿ ಸಂಜೆ 7ಕ್ಕೆ, ಪಾರು 7.30ಕ್ಕೆ, ಗಟ್ಟಿಮೇಳ 8, ಜೊತೆಜೊತೆಯಲಿ 8.30, ನಾಗಿನಿ 9 ಗಂಟೆಗೆ, 10ಕ್ಕೆ ಬ್ರಹ್ಮಗಂಟು ಪ್ರಸಾರವಾಗಲಿವೆ.
ಸ್ಟಾರ್ ಸುವರ್ಣದಲ್ಲಿ ಹೊಸ ಸೀರಿಯಲ್
ಸ್ಟಾರ್ ಸುವರ್ಣದಲ್ಲಿ ಜೂನ್ ತಿಂಗಳಲ್ಲಿ ‘ಸಂಘರ್ಷ’ ಎಂಬ ಹೊಸ ಸೀರಿಯಲ್ ಶುರುವಾಗಲಿದ್ದು, ವನಿತಾವಾಸು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಜೊತೆಗೆ ಪ್ರೇಮಲೋಕ ಸೀರಿಯಲ್ ರೀಲಾಂಚ್ ಆಗ್ತಿದೆ. ‘ಮುದ್ದುಲಕ್ಷ್ಮಿ’, ಜೀವ ಹೂವಾಗಿವೆ, ಇಂತಿ ನಿಮ್ಮ ಆಶಾ ಧಾರಾವಾಹಿಗಳು ಜೂ 1ರಿಂದ ಪ್ರಾರಂಭವಾಗಲಿದೆ. ಆದರೆ ಕಲರ್ಸ್, ಜೀಕನ್ನಡದವರಂತೆ ತನ್ನೆಲ್ಲ ಸೀರಿಯಲ್ ಗಳನ್ನು ಸುವರ್ಣ ಪುನರಾರಂಭಿಸಿಲ್ಲ. ಸದ್ಯಕ್ಕಿರುವ ಟೆಕ್ನಿಕಲ್ ಇಶ್ಯೂಗಳು ಸರಿಯಾದ ಬಳಿಕ ಮುಂದಿನ ಹೆಜ್ಜೆ ಇಡಲಿದೆ.
