ಕಿರುತೆರೆಗೆ ಕರೋನಾ ವೈರಸ್ ಭೀತಿ ತಟ್ಟಿದೆ. ಮನೆಯಲ್ಲಿ ಕುಳಿತು ಟಿವಿ ನೋಡೋರಿಗೆ ಟೆಲಿವಿಷನ್ ಅಸೋಸಿಯೇಷನ್ ಸ್ಯಾಡ್ ನ್ಯೂಸ್ ಕೊಟ್ಟಿದೆ. ಮುಂದಿನ 2 ದಿನಗಳಲ್ಲಿ ಧಾರವಾಹಿಗಳು ಬಂದ್​ ಆಗಲಿದೆ.

ಮಾರ್ಚ್ 22 ರಿಂದ ಏಪ್ರಿಲ್ 1 ರವರೆಗೂ ಚಿತ್ರೀಕರಣ ಸ್ಥಗಿತವಾಗಲಿದ್ದು, ಚಿತ್ರೀಕರಣದ ವೇಳೆ ಜನರಿಗೆ ತೊಂದರೆಯಾಗುವ ಸಾಧ್ಯತೆಯಿಂದ ಟೆಲಿವಿಷನ್ ಅಸೋಸಿಯೇಷನ್ ಈ ನಿರ್ಧಾರ ಮಾಡಿದೆ.

ರಾಜ್ಯದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ..! ಇನ್ನೆರಡು ದಿನ ಕೆಲವೆಡೆ ಮಳೆ

ಕಿರುತೆರೆಗೂ ಕೊರೋನಾ ವೈರಸ್ ಭೀತಿ ತಟ್ಟಿದ್ದು, ಮನೆಯಲ್ಲಿ ಕುಳಿತು ಟಿವಿ ನೋಡೋರ ಮನೋರಂಜನೆಗೆ ಕೊರೋನಾ ಪರಿಣಾಮ ಬೀರಲಿದೆ. ಮುಂದಿನ ಎರಡು ದಿನಗಳಿಂದ ಧಾರವಾಹಿಗಳು ಬಂದ್ ಆಗಲಿದೆ.

ಧಾರಾವಾಹಿಗಳನ್ನೇ ಮನೋರಂಜನೆಗಾಗಿ ಆಯ್ಕೆ ಮಾಡಿಕೊಂಡವರಿಗೆ ನಿರಾಸೆಯಾಗಿದೆ. ಸಂಜೆ ಅಧಿಕೃತವಾಗಿ ಸುದ್ದಿಗೋಷ್ಠಿ ಮಾಡಿ ವಿಚಾರ ತಿಳಿಸಲು ಮುಂದಾಗಿರೋ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್  ಚಿತ್ರೀಕರಣ ಸಮಯದಲ್ಲಿ ಜನರು ಸೇರಿ ಸಮಸ್ಯೆ ಆಗುವುದು ಬೇಡ ಅನ್ನೋ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.