Charith Balappa : ಪ್ರೀತಿ ನೆಪದಲ್ಲಿ ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುದ್ದುಲಕ್ಷ್ಮಿ ಕಿರುತೆರೆ ನಟ ಅರೆಸ್ಟ್

ಕಿರುತೆರೆ ನಟ ಚರಿತ್ ಬಾಳಪ್ಪ ತನ್ನ ಗೆಳತಿಗೆ ಪ್ರೀತಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಈ ಹಿಂದೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ನಟನ ವಿರುದ್ಧ ಈ ಹಿಂದೆಯೂ ದೂರು ದಾಖಲಾಗಿತ್ತು.

Kannada serial actor Charith Balappa arrested for sexual assault on girlfriend bengaluru rav

ಬೆಂಗಳೂರು (ಡಿ.27): ತನ್ನ ಗೆಳತಿಗೆ ಪ್ರೀತಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ, ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಹಿನ್ನೆಲೆ ಕಿರುತೆಗೆ ನಟ ಚರಿತ್ ಬಾಳಪ್ಪ ಅವರನ್ನ ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡದ ಮುದ್ದುಲಕ್ಷ್ಮಿ‌ ಸೇರಿದಂತೆ ಅನೇಕ ಸೀರಿಯಲ್‌ ನಲ್ಲಿ ನಟಿಸಿರುವ ಚರಿತ್ ಬಾಳಪ್ಪ(Charith Balappa). ತೆಲುಗಿನಲ್ಲಿಯೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಪ್ರೀತಿಯ ನೆಪದಲ್ಲಿ ಗೆಳತಿ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ, ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಟ ಚರಿತ್ ಈ ಹಿಂದೆಯೇ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ . ಕೋರ್ಟ್ ಆದೇಶದಂತೆ ಡೈವರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಬೆದರಿಕೆ ಹಾಕಿರುವ ಆರೋಪದಲ್ಲಿ ಚರಿತ್ ಬಾಳಪ್ಪ ವಿರುದ್ಧ ಪತ್ನಿ ದೂರು ದಾಖಲಿಸಿದ್ದಳು. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ NCR ದಾಖಲಾಗಿತ್ತು. ಇದೀಗ ಮತ್ತೆ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ.

ಹುಡುಗಿಯರ ಇಂಪ್ರೆಸ್‌ ಮಾಡಲು ಭಾಗ್ಯಲಕ್ಷ್ಮಿ ತಾಂಡವ್‌ ಕೊಟ್ಟ ಟಿಪ್ಸ್‌ ಕೇಳಿ ಯುವತಿಯರು ಕಿಡಿಕಿಡಿ!

ಅದಾದ ಬಳಿಕ ಹೊಸ ಗೆಳತಿ ಪರಿಚಯ ಮಾಡಿಕೊಂಡಿದ್ದ ಚರಿತ್, ಪ್ರೀತಿಸುತ್ತೇನೆಂದು ದುಂಬಾಲು ಬಿದ್ದು ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾನೆ. ಅದನ್ನ ನಿರಾಕರಿಸಿದ್ದಕ್ಕೆ ಸಹಚರರೊಂದಿಗೆ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಯುವತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಹಣ ಕೊಡದಿದ್ದರೆ ಖಾಸಗಿ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ನಟ ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿರುವ ಹಿನ್ನೆಲೆ ಆರೋಪಿ ಚರಿತ್ ಬಾಲಪ್ಪ ಬಂಧಿಸಿರೋ ಪೊಲೀಸರು.

ಸಂತ್ರಸ್ತೆ ದೂರಿನಲ್ಲೇನಿದೆ?

ಕಿರುತೆರೆ ನಟ ಚರಿತ್ ಬಾಲಪ್ಪ ವಿರುದ್ಧ ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, 'ನನಗೆ ರಾಜಕೀಯ ಮುಖಂಡರ ಬಲವಿದೆ, ರೌಡಿಗಳ ಬಲ ಇದೆ. ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಗೊತ್ತಿದೆ ಎಲ್ಲರ ಬಲ ಬಳಸಿಕೊಂಡು ನಿನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿನಲ್ಲೇ ಕೊಳೆಯುವಂತೆ ಮಾಡುತ್ತೇನೆ ಎಂದು ಮಾನಸಿಕ, ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
 

Latest Videos
Follow Us:
Download App:
  • android
  • ios