ಸ್ಯಾಂಡಲ್‌ವುಡ್‌ ರ‍್ಯಾಪರ್ ಚಂದನ್ ಶೆಟ್ಟಿ ' ನೋಡು ಶಿವ' ರ‍್ಯಾಪ್ ಸಾಂಗ್ ಬಿಡುಗಡೆಯಾಗಿದೆ. ಧಾರಾವಾಹಿ ನಟಿ ಮೇಘಾ ಶೆಟ್ಟಿ, ಸುಮಿತ್ ಹಾಗೂ ಎಎಂಸಿ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ವೈಸ್‌ ಪ್ರೆಸಿಡೆಂಟ್‌ ಮೋನಿಕಾ ಕಲ್ಲೂರಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಗೊತ್ತಾ ರ‍್ಯಾಪ್ ಸಾಂಗ್....

ಚಂದನ್ ಶೆಟ್ಟಿ ಜೊತೆಯಾದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ; 'ನೋಡು ಶಿವಾ' ಹಿಟ್? 

ದಿನನಿತ್ಯ ಜೀವನ ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹಾಡು ಬರೆಯುವುದರಲ್ಲಿ ಚಂದನ್ ಶೆಟ್ಟಿ ಎತ್ತಿದ ಕೈ. ಚಂದನ್ ಬರೆಯುವ ಪ್ರತಿ ಹಾಡುಗಳನ್ನು ಕಾಲೇಜ್‌ ಹುಡುಗರು ಕೇಳಿ ಥ್ರಿಲ್ ಆಗುತ್ತಾರೆ. ಆದರೆ ಈ ರ‍್ಯಾಪ್ ಸಾಂಗ್ ಕಾಲೇಜ್‌ ಹುಡುಗರಿಗೆಂದೇ ಮಾಡಿರುವುದು. ಈ ಕಾರಣಕ್ಕೆ ಇಡೀ ಹಾಡಿನ ಚಿತ್ರೀಕರಣ ಎಎಂಸಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಹಾಡಿಗೆ ಬಂಡವಾಳ ಹಾಕಿರುವ ಮೋನಿಕಾ ಕಲ್ಲೂರಿ ಚಂದನ್ ರ‍್ಯಾಪ್ ಸಾಂಗ್ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ  ಕೊಟ್ಟಿದ್ದಾರೆ. ಪೊಗರು ಚಿತ್ರದ ನಂತರ 'ನೋಡು ಶಿವ' ಹಾಡು ಕೂಡ ಪರಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 30 ಲಕ್ಷ ರೂಪಾಯಿ ಬಜೆಟ್‌ ಹೊಂದಿರುವ ಈ ಹಾಡಿನ ಹಿಂದೆ ಸುಮಾರು 200 ಜನ ಕೆಲಸ ಮಾಡಿದ್ದಾರೆ ಹಾಗೂ 60 ಡ್ಯಾನ್ಸರ್‌ಗಳು ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಎರಡೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ.